kichcha sudeep : ಹಿಂದಿ ರಾಷ್ಟ್ರ ಭಾಷೆ ಎಂಬ ವಿಚಾರವಾಗಿ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಬಹಳ ಸಮಯದಿಂದ ನಡೆಯುತ್ತಲೇ ಬಂದಿದೆ. ಇದೀಗ ಈ ಹಿಂದಿ ರಾಷ್ಟ್ರ ಭಾಷೆ ಫೈಟ್ ಸ್ಟಾರ್ ನಟರಿಗೂ ವಿಸ್ತರಿಸಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ನಟ ಸುದೀಪ್ರಿಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದರು. ಅಜಯ್ ದೇವಗನ್ರ ಪ್ರತಿಕ್ರಿಯೆಗೆ ಪ್ರತ್ಯುತ್ತರ ನೀಡಿರುವ ನಟ ಕಿಚ್ಚ ಸುದೀಪ್ ನಾವೂ ಭಾರತೀಯರಲ್ಲವೇ ಸರ್..? ಎಂದು ಅಜಯ್ ದೇವಗನ್ರನ್ನು ಪ್ರಶ್ನಿಸಿದ್ದಾರೆ.
ಆಗಿದ್ದೇನು ?
ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಭಾಷೆಯ ಸಿನಿಮಾಗಳನ್ನೇಕೆ ಹಿಂದಿಯಲ್ಲಿ ಡಬ್ ಮಾಡಿ ತೆರೆಗೆ ತರುತ್ತೀರಿ..? ಹಿಂದಿ ನಮ್ಮ ಮಾತೃ ಭಾಷೆ. ಈ ಹಿಂದೆ ಇದು ರಾಷ್ಟ್ರ ಭಾಷೆಯಾಗಿತ್ತು. ಮುಂದೆಯೂ ರಾಷ್ಟ್ರ ಭಾಷೆಯಾಗಿಯೇ ಇರಲಿದೆ ಎಂದು ಟ್ವೀಟ್ ಮಾಡಿದ್ದರು.
And sir @ajaydevgn ,,
— Kichcha Sudeepa (@KicchaSudeep) April 27, 2022
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
ಮೊದಲು ಈ ಚರ್ಚೆಗೆ ಅಂತ್ಯ ಹಾಡಲು ಮುಂದಡಿಯಿಟ್ಟದ್ದ ನಟ ಸುದೀಪ ನಾನು ಬೇರೆಯದ್ದೊಂದು ಸನ್ನಿವೇಶದಲ್ಲಿ ಈ ರೀತಿಯಾಗಿ ಹೇಳಿದ್ದೆ. ನಾನು ದೇಶದಲ್ಲಿರುವ ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಯಾರನ್ನೋ ನೋಯಿಸಲು ಅಥವಾ ಪ್ರಚೋದಿಸಲು ಅಥವಾ ಭಾಷಾ ವಿವಾದದ ಚರ್ಚೆಯನ್ನು ಹುಟ್ಟು ಹಾಕಲು ನಾನು ಈ ಹೇಳಿಕೆಯನ್ನು ನೀಡಿಲ್ಲ ಎಂದು ನಟ ಕಿಚ್ಚ ಸುದೀಪ ಹೇಳಿದ್ದರು. ಆದರೆ ಇದೀಗ ಮತ್ತೆ ಹೊಸದೊಂದು ಪ್ರಶ್ನೆಯನ್ನು ನಟ ಕಿಚ್ಚ ಸುದೀಪ್ ಅಜಯ್ ದೇವಗನ್ಗೆ ಟ್ವೀಟ್ನಲ್ಲಿ ಕೇಳಿದ್ದಾರೆ.
ಅಜಯ್ ದೇವಗನ್ ಸರ್ ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ನ್ನು ನಾನು ಅರ್ಥ ಮಾಡಿಕೊಂಡೆ. ಇದಕ್ಕೆ ಕಾರಣ ನಾವು ಹಿಂದಿಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ ಹಾಗೂ ಕಲಿತಿದ್ದೇವೆ. ಇದರಲ್ಲಿ ತಪ್ಪಿಲ್ಲ ಸರ್.ಆದರೆ ನನಗೆ ಆಶ್ಚರ್ಯ ಎನಿಸುವುದು ಏನೆಂದರೆ ನಾನು ಇದಕ್ಕೆ ಪ್ರತಿಯಾಗಿ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡುತ್ತಿದ್ದರೆ ಏನಾಗುತ್ತಿತ್ತು..? ಎಂಬುದಾಗಿದೆ. ನಾವು ಕೂಡ ಭಾರತಕ್ಕೆ ಸೇರಿದವರಲ್ಲವೇ ಸರ್..? ಎಂದು ಪ್ರಶ್ನೆ ಮಾಡಿದ್ದಾರೆ .
ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್
ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್ ಅವಘಡ : 11 ಮಂದಿ ದುರ್ಮರಣ
kichcha sudeep asks ajay devgan that what if my response is written in kannada know this complete national language discussion