cylinder blast at a flat in hebbagodi : ಫ್ಲ್ಯಾಟ್​​ನಲ್ಲಿದ್ದ ಸಿಲಿಂಡರ್​ ಸ್ಫೋಟ: ಗಂಭೀರವಾಗಿ ಗಾಯಗೊಂಡ ತಾಯಿ-ಪುತ್ರ

ಆನೇಕಲ್​ : cylinder blast at a flat in hebbagodi : ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡ ರಭಸಕ್ಕೆ ಮನೆಯ ಛಾವಣಿಯೇ ಹಾರಿ ಹೋದ ಘಟನೆಯು ಆನೇಕಲ್​ ತಾಲೂಕಿನ ಹೆಬ್ಬಗೋಡಿಯಲ್ಲಿ ಸಂಭವಿಸಿದೆ. ಸಿಲಿಂಡರ್​ ಸ್ಫೋಟಗೊಂಡ ಮನೆಯ ಗೋಡೆಗಳೇ ಕುಸಿದು ಹೋಗಿದ್ದರೆ ಅಕ್ಕ ಪಕ್ಕದ ಮನೆಯ ಕಿಟಕಿ ಗಾಜುಗಳು ಸಹ ಒಡೆದು ಹೋಗಿವೆ ಎನ್ನಲಾಗಿದೆ.


ಸಿಲಿಂಡರ್​ ಸ್ಫೋಟದ ಭೀಕರತೆಗೆ ಫ್ಲ್ಯಾಟ್​ನಲ್ಲಿ ವಾಸವಿದ್ದ ಆನಂದ ಮೂರ್ತಿ ಹಾಗೂ ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಆನಂದ ಮೂರ್ತಿ ಮನೆಯಲ್ಲಿದ್ದ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಪಾರ್ಕಿಂಗ್​ ಲಾಟ್​ನಲ್ಲಿದ್ದ ಮೂರು ಕಾರುಗಳು ಜಖಂಗೊಂಡಿವೆ. ಮನೆಯ ಛಾವಣಿ ಸಿಲಿಂಡರ್​ ಸ್ಫೋಟದ ರಭಸಕ್ಕೆ ಹಾರಿ ಹೋಗಿದೆ ಎನ್ನಲಾಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದೆ. ಸ್ಥಳೀಯರು ಇಲ್ಲಿನ ದೃಶ್ಯಗಳ ವಿಡಿಯೋಗಳನ್ನು ಚಿತ್ರೀಕರಿಸಿದ್ದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.


ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆಯ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

ಚೆನ್ನೈ : ದೇವರ ರಥೋತ್ಸವದ ವೇಳೆಯಲ್ಲಿ ವಿದ್ಯುತ್‌ ತಂತಿ ತಗುಲಿ 11 ಮಂದಿ ಸಾವನ್ನಪ್ಪಿರುವ (11 die in high-voltage) ಘಟನೆ ತಮಿಳುನಾಡಿನ ತಾಂಜಾವೂರು (Thanjavur) ಸಮೀಪದ ಕಾಳಿಮೇಡು ಗ್ರಾಮದಲ್ಲಿ ನಡೆದಿದೆ. ಗುರು ಪೂಜೆಯ ಹಿನ್ನೆಲೆಯಲ್ಲಿ ಚಿತ್ರೈ ಉತ್ಸವದ ಮೆರವಣಿಗೆ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವದ ವರೆಗೆ ನಡೆದಿದ್ದು. ಈ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ.

ಕಾಳಿಮೇಡು ಮೇಲಿನ ದೇವಸ್ಥಾನದಲ್ಲಿ 94ನೇ ಚಿತ್ರೋತ್ಸವದ ಮುನ್ನಾದಿನ ರಾತ್ರಿ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು. ರಥವನ್ನು ಮಣ್ಣಿನ ರಸ್ತೆಯಲ್ಲಿ ತರಲಾಗಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾಳಿಮೇಡು ಪ್ರದೇಶದ ಪುತಲೂರು ರಸ್ತೆಯಲ್ಲಿ ರಥ ನಿಂತಾಗ ಹೈವೋಲ್ಟೇಜ್ ತಂತಿ ತಗುಲಿ ರಥಕ್ಕೆ ವಿದ್ಯುತ್ ಸ್ಪರ್ಶವಾಗಿತ್ತು. ಘಟನೆಯಲ್ಲಿ ಇಬ್ಬರು ಬಾಲಕರು ಸೇರಿದಂತೆ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಲ್ಲಾ ಗಾಯಾಳುಗಳನ್ನು ತಂಜೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ನಾಲ್ವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ವೇಳೆ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ ಒಬ್ಬಾಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಥೋತ್ಸವದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

man and his mother seriously injured in cylinder blast at a flat in hebbagodi

Comments are closed.