ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

ಮೈಸೂರು : ice cream box : ಮಕ್ಕಳು ಆಟವಾಡುತ್ತಿದ್ದಾರೆ ಎಂದರೆ ಅಬ್ಬಾ ಸದ್ಯಕ್ಕೆ ಅವರ ಕಡೆಗೆ ಗಮನ ನೀಡುವುದು ಬೇಡ ಡಂದು ಅನೇಕರು ಭಾವಿಸುತ್ತಾರೆ. ಮನೆಯಲ್ಲಿ ಚೇಷ್ಠೆ ಮಾಡುವ ಮಕ್ಕಳು ಕೆಲವು ಗಂಟೆಗಳ ಕಾಲ ಆಟವಾಡಿದರೂ ಸಹ ಪೋಷಕರಿಗೆ ನಿರಾಳ ಎನಿಸುವುದುಂಟು. ಆದರೆ ಹಾಗೆಂದ ಮಾತ್ರಕ್ಕೆ ಆಡುತ್ತಿರುವ ಮಕ್ಕಳ ಮೇಲೆ ನಿಮ್ಮ ಗಮನವನ್ನು ಸರಿಸಲು ಹೋಗಬೇಡಿ. ಇಲ್ಲವಾದರಲ್ಲಿ ಮುಂದೆ ಭಾರೀ ದೊಡ್ಡ ಬೆಲೆ ತೆರಬೇಕಾಗಿ ಬರಬಹುದು. ಈ ಮಾತಿಗೆ ಸ್ಪಷ್ಟ ಉದಾಹರಣೆ ಎನಿಸುವ ಘಟನೆಯೊಂದು ಮೈಸೂರು ಜಿಲ್ಲೆಯ ನಂಜನಗೂಡಿನ ಗ್ರಾಮವೊಂದರಲ್ಲಿ ನಡೆದು ಹೋಗಿದೆ.


ಆ ಮಕ್ಕಳೆಲ್ಲ ಒಟ್ಟಾಗಿ ಕಣ್ಣಾ ಮುಚ್ಚಾಲೆ ಆಡುತ್ತಿದ್ದರು. ಆಟದಲ್ಲಿ ನಾವೇ ಗೆಲ್ಲಬೇಕು ಎಂದುಕೊಂಡಿದ್ದ ಇಬ್ಬರು ಬಾಲಕಿಯರು ಅಡಗಿಕೊಳ್ಳಲು ಐಸ್​ ಕ್ರೀಂ ಬಾಕ್ಸ್​ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ವಿಧಿಯಾಟ ಅವರ ಜೀವನದಲ್ಲಿ ಬೇರೆಯದ್ದನ್ನೇ ಬರೆದಿತ್ತು. ಐಸ್​ ಕ್ರೀಂ ಬಾಕ್ಸ್​ ಲಾಕ್​ ಆದ ಪರಿಣಾಮ ಅದರ ಒಳಗಿದ್ದ ಮಕ್ಕಳು ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಸಗೆ ಎಂಬ ಗ್ರಾಮದಲ್ಲಿ ಇಂತಹದ್ದೊಂದು ಘನಘೋರ ದುರಂತ ಸಂಭವಿಸಿದೆ.


ಮೃತ ಬಾಲಕಿಯರನ್ನು ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಪುತ್ರಿ ಭಾಗ್ಯ(12) ಹಾಗೂ ರಾಜ ನಾಯಕ – ಗೌರಮ್ಮ ಎಂಬವರ ಪುತ್ರಿ (7) ಎಂದು ಗುರುತಿಸಲಾಗಿದೆ. ಕಣ್ಣಾ ಮುಚ್ಚಾಲೆ ಆಡುವ ವೇಳೆಯಲ್ಲಿ ಈ ಬಾಲಕಿಯರು ಐಸ್​ ಕ್ರೀಂ ಬಾಕ್ಸಿನಲ್ಲಿ ಅವಿತು ಕುಳಿತಿದ್ದರು. ಆದರೆ ಐಸ್​ ಕ್ರೀಂ ಬಾಕ್ಸ್​ ಲಾಕ್​ ಹಾಗಿದೆ. ಹೀಗಾಗಿ ಬಾಕ್ಸ್​ ಒಳಗೆ ಉಳಿದ ಮಕ್ಕಳು ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅರ್ಧ ಗಂಟೆ ಕಳೆದರೂ ಮಕ್ಕಳು ಕಾಣದ ಹಿನ್ನೆಲೆಯಲ್ಲಿ ಐಸ್​ ಕ್ರೀಂ ಬಾಕ್ಸ್​ ತೆರೆದು ನೋಡಿದಾಗ ಬಾಲಕಿಯರ ಶವ ಪತ್ತೆಯಾಗಿದೆ.


ನಂಜನಗೂಡು ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಆದರೆ ಈ ಸಂಬಂಧ ಪೋಷಕರು ಯಾವುದೇ ರೀತಿಯ ದೂರನ್ನು ನೀಡಿಲ್ಲ. ಬಾಲಕಿಯರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.

ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

two girls while playing get locked in ice cream box in a village in nanjangud suffocated to death

Comments are closed.