ಸೋಮವಾರ, ಏಪ್ರಿಲ್ 28, 2025
HomeCinemaKichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ...

Kichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

- Advertisement -

Kichcha Sudeep next movie : ಸ್ಯಾಂಡಲ್ ವುಡ್ ಬಾದಶಾ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಗೆಲುವಿನ ಸಂಭ್ರಮದಲ್ಲಿದ್ದಾರೆ. ಬರೋಬ್ಬರಿ ಎರಡ್ಮೂರು ವರ್ಷಗಳ ಬಳಿಕ ತೆರೆಗೆ ಬಂದ ಸುದೀಪ್‌ರನ್ನು ಅಭಿಮಾನಿಗಳು ತುಂಬ ನೀರಿಕ್ಷೆಗಳೊಂದಿಗೆ ಬರಮಾಡಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಆದ ಹಲವು ದಿನಗಳ ಬಳಿಕವೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ .‌ಈ ಮಧ್ಯೆ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಇದಕ್ಕೆ ಈಗ ಉತ್ತರ ಸಿಕ್ಕಿದೆ‌

ಹೌದು ಸುದೀಪ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಇನ್ನೂ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಜೋರಾಗಿದೆ. ವಿಕ್ರಾಂತ್ ರೋಣಾ ತಂಡದ ಜೊತೆಗೆ ಸುದೀಪ್ ಮತ್ತೊಂದು ಸಿನಿಮಾ ಮಾಡುತ್ತಾರಾ ಎಂಬ ಅನುಮಾನವೂ ಸೃಷ್ಟಿಯಾಗಿದೆ. ಹೀಗಿರುವಾಗಲೇ ಸುದೀಪ್ ಆಪ್ತರಿಂದ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗೆದ್ದಿರೋದರಿಂದ ಮುಂದಿನ ಸಿನಿಮಾವೂ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಇರುತ್ತೆ ಅನ್ನೋದರಲ್ಲಿ ಅನುಮಾನವಿಲ್ಲ. ಹೀಗಾಗಿ ಸುದೀಪ್ ಮುಂದಿನ ಸಿನಿಮಾ ಬಿಲ್ಲ ರಂಗ ಭಾಷಾ ಎಂಬುದು ಬಹುತೇಕ ಖಚಿತವಾಗಿದೆ. ಸುದೀಪ್ ಗಾಗಿ ವಿಭಿನ್ನ ಸಿನಿಮಾ ನಿರ್ದೇಶಿಸಿದ ನಿರ್ದೇಶಕ ಅನೂಪ್ ಭಂಡಾರಿ ಕೂಡ ಸುದೀಪ್ ಮುಂದಿನ ಸಿನಿಮಾ ಬಿಲ್ಲ ರಂಗ ಭಾಷಾ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಬಿಲ್ಲ ರಂಗ ಭಾಷಾ ಸಿನಿಮಾ ಟೈಟಲ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದು , ಈ ಸಿನಿಮಾ ಕೂಡ ನಿರ್ದೇಶಕ ಅನೂಪ್ ಭಂಡಾರಿ ಆಕ್ಷ್ಯನ್ ಕಟ್ ನಲ್ಲೇ ಸಿದ್ಧವಾಗಲಿದೆ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿಬರಲಿದ್ದು, ಇದರಲ್ಲಿ ಸುದೀಪ್‌ಇದೇ ಮೊದಲ ಬಾರಿಗೆ ತ್ರೀಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿದೆ.

ಆದರೆ ಈ ಯಾವ ಊಹಾಪೋಹಗಳ ಬಗ್ಗೆಯೂ ಸುದೀಪ್ ಮಾಹಿತಿ ನೀಡಿಲ್ಲ. ಸದ್ಯ ಸುದೀಪ್ ಓಟಿಟಿ ಬಿಗ್ ಬಾಸ್ ನ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಸುದೀಪ್ ಬಿಗ್ ಬಾಸ್ ಸೀಸನ್ 9 ರ ಆಂಕ್ಯರಿಂಗ್ ನಲ್ಲೂ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಸುದೀಪ್ ಹೊಸ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಸದ್ಯಕ್ಕೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಸುದೀಪ್ ಆಪ್ತರ ಮೂಲಗಳು ಮಾತ್ರ ಕಿಚ್ಚ ಮುಂದಿನ ಸಿನಿಮಾ ಬಿಲ್ಲ‌ರಂಗ ಭಾಷಾ ಎಂದಿದ್ದಾರೆ.

ಇದನ್ನೂ ಓದಿ : Meghana Raj Sarja : ಮತ್ತೊಂದು ಮದುವೆಯಾಗ್ತಾರಾ ನಟಿ ಮೇಘನಾ ರಾಜ್ ಸರ್ಜಾ ; ಇಲ್ಲಿದೇ ಕುಟ್ಟಿಮಾ ಬೋಲ್ಡ್ ಆನ್ಸರ್

ಇದನ್ನೂ ಓದಿ : Janaki Sudhir photo viral : ಮೈಗೆ ಬಟ್ಟೆ ಬದಲು ಬಂಗಾರ ಸುತ್ತಿಕೊಂಡ ಸುಂದರಿ: ಜಾನಕಿ ಸುಧೀರ್ ಪೋಟೋ ವೈರಲ್

Kichcha Sudeep next movie, Here is the answer to your curiosity

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular