Koffee With Karan 7 : ಫಸ್ಟ್​ ನೈಟ್​ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಆಲಿಯಾ ಭಟ್​​

Koffee With Karan 7  : ಬಾಲಿವುಡ್​ನ ಖ್ಯಾತ ನಿರ್ದೇಶಕ ಕರಣ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ ಎಂಬ ಕಾರ್ಯಕ್ರಮ ಸಾಕಷ್ಟು ಕಾರಣಗಳಿಂದ ಸುದ್ದಿಯಲ್ಲಿ ಇರುತ್ತದೆ. ಇಲ್ಲಿ ಸೆಲೆಬ್ರಿಟಿಗಳಿಗೆ ಕೇಳಲಾಗುವ ಬೋಲ್ಡ್​ ಪ್ರಶ್ನೆಗಳಿಗೆ ಈ ಕಾರ್ಯಕ್ರಮ ಸದಾ ಸುದ್ದಿಯಲ್ಲಿ ಇರುತ್ತದೆ. ಇದೀಗ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​​ ಆರಂಭಗೊಳ್ಳಲಿದ್ದು ಈ ಸರಣಿಯ ಮೊದಲ ಅತಿಥಿಯಾಗಿ ಆಲಿಯಾ ಭಟ್​ ಹಾಗೂ ರಣವೀರ್​ ಸಿಂಗ್​ ಕಾಣಿಸಿಕೊಂಡಿದ್ದಾರೆ. ಕರಣ್​ ಜೊತೆಯಲ್ಲಿ ಕಾಫಿ ಸವಿಯುತ್ತಾ ಈ ಇಬ್ಬರು ಸೆಲೆಬ್ರಿಟಿಗಳು ಅನೇಕ ವಿವಾದಾತ್ಮಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಎಂದಿನಂತೆ ಕರಣ್​ ಜೋಹರ್​ ತನ್ನ ಬೋಲ್ಡ್​ ಪ್ರಶ್ನೆಗಳನ್ನು ಇವರಿಬ್ಬರ ನಡುವೆ ಇಟ್ಟಿದ್ದು ಇದಕ್ಕೆ ಆಲಿಯಾ ಕೂಡ ಬೋಲ್ಡ್​ ಉತ್ತರವನ್ನೇ ನೀಡಿದ್ದಾರೆ.


ಕೆಲವು ತಿಂಗಳುಗಳ ಹಿಂದೆಯಷ್ಟೇ ಬಾಲಿವುಡ್​ ನಟ ರಣಬೀರ್​ ಕಪೂರ್​ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟಿ ಆಲಿಯಾ ಭಟ್​ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ. ಕರಣ್​ ಜೋಹರ್​ ತಮ್ಮ ಕಾರ್ಯಕ್ರಮದಲ್ಲಿ ಮದುವೆಯಾದ ಬಳಿಕ ನಿಮಗೆ ನಿಮಗೆ ತಿಳಿದು ಬಂದ ಬಹುದೊಡ್ಡ ತಪ್ಪು ತಿಳುವಳಿಕೆ ಯಾವುದು ಎಂದು ಕೇಳಿದ್ದಕ್ಕೆ ಆಲಿಯಾ ಭಟ್​ ಫಸ್ಟ್​ ನೈಟ್​​ ಎಂದು ಉತ್ತರ ನೀಡಿದ್ದಾರೆ.


ಮದುವೆ ಆದಮೇಲೆ ಆ ದಿನವೇ ಫಸ್ಟ್​ ನೈಟ್​ ಆಗುತ್ತದೆ ಎಂಬುದು ಬಹುದೊಡ್ಡ ತಪ್ಪು ಕಲ್ಪನೆ. ಮದುವೆಯ ದಿನ ರಾತ್ರಿ ನಿಮಗೆ ತುಂಬಾನೇ ಸುಸ್ತಾಗಿರುತ್ತದೆ ಎಂದು ಆಲಿಯಾ ಭಟ್​ ಹೇಳಿದ್ದಾರೆ. ಆಲಿಯಾರ ಈ ಉತ್ತರಕ್ಕೆ ರಣವೀರ್​ ಸಿಂಗ್​ ಹಾಗೂ ಕರಣ್​ ಜೋಹರ್​ ಗೊಳ್ಳೆಂದು ನಕ್ಕಿದ್ದಾರೆ. ರಣವೀರ್​ ಸಿಂಗ್​ ಹಾಗೂ ಆಲಿಯಾ ಭಟ್​ ನಟನೆಯ ಗಲ್ಲಿಬಾಯ್​ ಸಿನಿಮಾ ಈ ಹಿಂದೆ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು.ಇದೀಗ ಇದೇ ಜೋಡಿ ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ ಎಂಬ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದೆ. ಈ ಸಿನಿಮಾಗೆ ಕರಣ್​ ಜೋಹರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಈ ನಡುವೆ ಕಾಫಿ ವಿತ್​ ಕರಣ್​​ ಕಾರ್ಯಕ್ರಮದ ಮೊದಲ ಟ್ರೇಲರ್​​ನ್ನು ಇತ್ತೀಚಿಗೆ ಅನಾವರಣಗೊಳಿಸಲಾಗಿದೆ. ಈ ಪ್ರೋಮೋದಲ್ಲಿ ಅಕ್ಷಯ್ ಕುಮಾರ್, ಅನಿಲ್ ಕಪೂರ್, ರಣವೀರ್ ಸಿಂಗ್, ಆಲಿಯಾ ಭಟ್, ವರುಣ್ ಧವನ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ವಿಜಯ್ ದೇವರಕೊಂಡ, ಸಮಂತಾ ರೂತ್ ಪ್ರಭು, ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕ ತಾರೆಯರು ಹಾಟ್​ ಸೀಟ್​ನಲ್ಲಿ ಕುಳಿತ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ.

ಇದನ್ನು ಓದಿ : Karnataka Cricket : ಕೋಚ್‌ಗಳನ್ನು ಬದಲಿಸಲಿದ್ದರೆ ಕರ್ನಾಟಕ ರಣಜಿ ತಂಡಕ್ಕೆ ಉಳಿಗಾಲವಿಲ್ಲ !

ಇದನ್ನೂ ಓದಿ : Ola driver kills passenger : ಒಟಿಪಿ ವಿಚಾರಕ್ಕೆ ಜಗಳ : ಕೋಪಗೊಂಡ ಓಲಾ ಚಾಲಕನಿಂದ ಪ್ರಯಾಣಿಕನ ಕೊಲೆ

Koffee With Karan 7 Ep 1: First guest Alia Bhatt talks about ‘suhaag raat’, Ranveer Singh can’t stop laughing

Comments are closed.