Kranthi firstday show details: ಕ್ರಾಂತಿ ರಿಲೀಸ್‌ ಗೆ 3 ದಿನ ಬಾಕಿ: ಎಲ್ಲೆಲ್ಲಿ ಎಷ್ಟೆಷ್ಟು ಶೋ? ಇಲ್ಲಿದೆ ಪೂರ್ಣ ಮಾಹಿತಿ

(Kranthi firstday show details) ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇವೆ. ಗಣರಾಜ್ಯೋತ್ಸವದ ದಿನ ಸಿನಿಮಂದಿರಗಳಲ್ಲಿ ಕ್ರಾಂತಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣಲು ಸಿದ್ದವಾಗಿದೆ. ಈಗಾಗಲೇ ಅಡ್ವಾನ್ಸ್‌ ಬುಕ್ಕಿಂಗ್‌ ಅನ್ನು ಓಪನ್‌ ಮಾಡಿದ್ದು, ರಾಜ್ಯದ ಮೂಲೆ ಮೂಲೆಯಲ್ಲಿ ಟಿಕೆಟ್‌ ಖರೀದಿಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ.

ಕ್ರಾಂತಿ ಸಿನಿಮಾ ರಿಲೀಸ್‌ ಗೂ ಮೊದಲೇ ಫಸ್ಟ್‌ ಡೇ ಫಸ್ಟ್‌ ಶೋ ಎಲ್ಲೆಲ್ಲಿ ಹಾಗೂ ಎಷ್ಟೆಷ್ಟು ಎನ್ನುವ ಬಗ್ಗೆ ವರದಿ ಬಂದಿದ್ದು, ಮೂರು ದಿನಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯದಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ಎಷ್ಟೆಷ್ಟು ಶೋಗಳಿವೆ ಎನ್ನುವ ಮಾಹಿತಿ ಇಲ್ಲಿವೆ.

ಕರ್ನಾಟಕದಲ್ಲಿ ಯಾವುದೇ ಸಿನಿಮಾವಿದ್ದರು ಕೂಡ ಬೆಂಗಳೂರಿನಲ್ಲಿಯೇ ಹೆಚ್ಚು ಶೋಗಳು ಪ್ರದರ್ಶನ ಕಾಣುತ್ತವೆ. ಅದರಲ್ಲೂ ದರ್ಶನ್‌ ಅವರ ಸಿನಿಮಾ ಎಂದರೇ ಬೆಂಗಳೂರಿನಲ್ಲಿ ಮೊದಲ ದಿನವೇ ಭರ್ಜರಿ ಪ್ರದರ್ಶನ ಕಾಣುತ್ತದೆ. ಇನ್ನೇನು ಕ್ರಾಂತಿ ಸಿನಿಮಾ ರಿಲೀಸ್‌ ಗೆ ಮೂರು ದಿನಗಳು ಬಾಕಿ ಇದ್ದು, ಬೆಂಗಳೂರಿನಲ್ಲಿ ಸುಮಾರು 480 ಶೋ ಗಳು ಸೋಲ್ಡ್‌ ಔಟ್‌ ಆಗಿವೆ. ರಿಲೀಸ್‌ ದಿನ ಇನಷ್ಟು ಶೋಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯೆತೆ ಇವೆ.

ಇನ್ನೂ ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಸಿನಿಮಾಗಳಿಗೆ ಹೆಚ್ಚು ರೆಸ್ಪಾನ್ಸ್‌ ಸಿಗುತ್ತದೆ. ಇದೀಗ ಕ್ರಾಂತಿ ಅಡ್ವಾನ್ಸ್ ಬುಕ್ಕಿಂಗ್‌ ಗೆ ಮೈಸೂರಿನಲ್ಲೂ ಕೂಡ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಮೈಸೂರಿನಲ್ಲಿ ಇದುವರೆಗೆ 128 ಶೋಗಳನ್ನು ಫಿಕ್ಸ್‌ ಮಾಡಲಾಗಿದ್ದು, 12 ಶೋಗಳು ಸೋಲ್ಡ್‌ ಔಟ್‌ ಆಗಿವೆ. ಇನ್ನೂ 67 ಶೋಗಳು ಫಾಸ್ಟ್‌ ಫಿಲ್ಲಿಂಗ್‌ ಆಗಿವೆ.

ಕ್ರಾಂತಿ ಸಿನಿಮಾಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಬೆಂಗಳೂರು, ಮೈಸೂರು ಬಿಟ್ಟರೆ ತುಮಕೂರಿನಲ್ಲಿ 16 ಶೋ ಸಿಕ್ಕಿದೆ. ಇದರಲ್ಲಿ 2 ಶೋ ಈಗಾಗಲೇ ಸೋಲ್ಡ್‌ ಔಟ್‌ ಆಗಿವೆ. ಇನ್ನೂ ಶಿವಮೊಗ್ಗದಲ್ಲಿ 19 ಶೋ, ದಾವಣಗೆರೆಯಲ್ಲಿ 15 ಶೋ, ಹುಬ್ಬಳ್ಳಿಯಲ್ಲಿ 13 ಶೋಗಳು ಇಲ್ಲಿಯವರೆಗೆ ಸಿಕ್ಕಿವೆ.

ಇದನ್ನೂ ಓದಿ : Amrita Prem’s birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಟಗರು ಪಲ್ಯ’ ಬೆಡಗಿ ಅಮೃತ ಪ್ರೇಮ್

ಇದನ್ನೂ ಓದಿ : KL Rahul Athiya Shetty reception : ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ವಿವಾಹ ಆರತಕ್ಷತೆಗೆ 3000 ಅತಿಥಿಗಳಿಗೆ ಆಹ್ವಾನ

ರಾಜ್ಯದ್ಯಂತ ಸುಮಾರು 700 ಶೋಗಳು ಮೊದಲ ಪ್ರದರ್ಶನ ಕಾಣಲಿದ್ದು, ರಿಲೀಸ್‌ ಗೆ ಇನ್ನು ಮೂರು ದಿನಗಳು ಬಾಕಿ ಇರುವ ಕಾರಣ ಶೋಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Kranthi firstday show details: 3 days left for Kranthi release: How many shows everywhere? Here is the complete information

Comments are closed.