“ಕ್ರಾಂತಿ” ಸಿನಿಮಾ ಪ್ರತಿಯೊಬ್ಬರೂ ನೋಡಲೇ ಬೇಕು : ಯಾಕೆ ಅನ್ನೋದಕ್ಕೆ ಇಲ್ಲಿವೆ 5 ಕಾರಣಗಳು

ಡಿ ಬಾಸ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ (Kranti Cinema) ತೆರೆಗಪ್ಪಳಿಸಲು ಎರಡು ದಿನ ಮಾತ್ರ ಬಾಕಿಯಿದೆ. ಅಭಿಮಾನಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ನೋಡುತ್ತಿದ್ದರೆ ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಕ್ತಿದೆ. ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ‘ಕ್ರಾಂತಿ’ ಭಾರೀ ನಿರೀಕ್ಷೆ ಮೂಡಿಸಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಈಗಾಗಲೇ 2 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ.

ಗುರುವಾರ ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ ಹಲವು ಸಿನಿಮಂದಿರಗಳಲ್ಲಿ ‘ಕ್ರಾಂತಿ’ ಶುರುವಾಗಲಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದ ಟ್ರೈಲರ್ ಮತ್ತು ಸಾಂಗ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಎಲ್ಲಾ ಕಮರ್ಶಿಯಲ್ ಅಂಶಗಳನ್ನು ಹದವಾಗಿ ಬೆರೆಸಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಅಭಿಮಾನಿಗಳು ಕೇಳುವ ಆಕ್ಷನ್, ಡೈಲಾಗ್ಸ್, ಡ್ಯಾನ್ಸ್ ಜೊತೆ ಒಂದೊಳ್ಳೆ ಸಂದೇಶವನ್ನು ಕೂಡ ‘ಕ್ರಾಂತಿ’ ಸಿನಿಮಾ ಹೊತ್ತು ಬರ್ತಿದೆ. ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ. ಪೊಲ್ಯಾಂಡ್‌ನಲ್ಲೂ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ‘ಕ್ರಾಂತಿ’ ಇಷ್ಟೆಲ್ಲಾ ನಿರೀಕ್ಷೆ ಹುಟ್ಟಾಕಿರುವುದು ಯಾಕೆ ಗೊತ್ತಾ ?

1. “ಯಜಮಾನ” ಕಾಂಬಿನೇಷನ್‌
2019ರಲ್ಲಿ ದರ್ಶನ್ ನಟನೆಯ ‘ಯಜಮಾನ’ ಸಿನಿಮಾ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಆ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂಡ ಈ ಸಿನಿಮಾಕ್ಕೂ ಕೆಲಸ ಮಾಡಿದೆ. ಅದೇ ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಕೂಡ ನಿರ್ಮಾಣ ಆಗಿದೆ. ಪಿ. ಕುಮಾರ್ ಆರಂಭಿಸಿದ್ದ ‘ಯಜಮಾನ’ ವಿ. ಹರಿಕೃಷ್ಣ ಕಂಪ್ಲೀಟ್ ಮಾಡಿದ್ದರು.’ಕ್ರಾಂತಿ’ ಸಿನಿಮಾವನ್ನು ಸಂಪೂರ್ಣವಾಗಿ ವಿ. ಹರಿಕೃಷ್ಣ ಕಟ್ಟಿಕೊಟ್ಟಿದ್ದಾರೆ. ನಟ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್‌ ಆಲ್ಬಮ್‌ಗಳೆಲ್ಲಾ ಸೂಪರ್ ಹಿಟ್ ಆಗಿದೆ. ಈ ಬಾರಿ ಇವರಿಬ್ಬರು ಕಾಂಬಿನೇಷನ್‌ ಸಿನಿಮಾ ಹೇಗಿರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

2. ದರ್ಶನ್‌ – ರಚಿತಾ ರಾಮ್‌ ಜೋಡಿ ಮೋಡಿ
ಬುಲ್‌ ಬುಲ್’ ಹಾಗೂ ‘ಅಂಬರೀಶ’ ಸಿನಿಮಾಗಳ ನಂತರ ನಟಿ ರಚಿತಾ ರಾಮ್ ಮತ್ತೊಮ್ಮೆ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಇದು ಇವರಿಬ್ಬರ ಮೂರನೇ ಸಿನಿಮಾವಾಗಿದೆ. ಅಭಿಮಾನಿಗಳ ಫೇವರಿಟ್ ಜೋಡಿಯ ಕೆಮಿಸ್ಟ್ರಿ ಹೇಗಿರುತ್ತೆ ಎನ್ನುವ ಕುತೂಹಲ ಇದೆ. ಈಗಾಗಲೇ ‘ಗೊಂಬೆ ಗೊಂಬೆ’ ಸಾಂಗ್ ಸೂಪರ್ ಹಿಟ್ ಆಗಿದೆ. ಇನ್ನು ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್‌, ಮುಖ್ಯಮಂತ್ರಿ ಚಂದ್ರು, ಆರ್ಮುಗ ರವಿಶಂಕರ್‌ರಂತಹ ಘಟಾನುಘಟಿ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

3. ವರ್ಷದ ಮೊದಲ ದೊಡ್ಡ ಸಿನಿಮಾ
ಕಳೆದ ವರ್ಷ ಕನ್ನಡ ಸಿನಿಮಾಗಳು ಭಾರತೀಯ ಸಿನಿರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದವು. ಆದರೆ ದರ್ಶನ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಕನ್ನಡ ರಾಜ್ಯೋತ್ಸವಕ್ಕೆ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಈ ವರ್ಷಕ್ಕೆ ಪೋಸ್ಟ್‌ ಪೋನ್ ಆಗಿತ್ತು. ‘ರಾಬರ್ಟ್’ ರಿಲೀಸ್ ಆಗಿ 21 ತಿಂಗಳ ನಂತರ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಬರ್ತಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡ್ತಿದ್ದಾರೆ. ಇಷ್ಟೆಲ್ಲಾ ಕ್ರೇಜ್ ಹುಟ್ಟಾಕ್ಕಿರುವ ಸಿನಿಮಾದಲ್ಲಿ ಅಂತಾದ್ದೇನಿದೆ ಎನ್ನುವ ಕುತೂಹಲ ಕೆಲವರಲ್ಲಿದೆ. ಇನ್ನು ಈ ವರ್ಷ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಪ್ರೇಕ್ಷಕರು ಥಿಯೇಟರ್‌ ಕಡೆ ಬಂದಿಲ್ಲ. ಮೊದಲ ಬಾರಿಗೆ ‘ಕ್ರಾಂತಿ’ ಸಿನಿಮಾ ನೋಡಲು ಮುಂದಾಗಿದ್ದಾರೆ.

4. ಅಕ್ಷರ “ಕ್ರಾಂತಿ”ಯ ಕಥೆ
“ಯಜಮಾನ” ಸಿನಿಮಾದಲ್ಲಿ ಎಣ್ಣೆ ಗಾಣದ ಕಥೆಯನ್ನು ಹೇಳಲಾಗಿತ್ತು. ಆ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ರೀತಿ ‘ಕ್ರಾಂತಿ’ ಸಿನಿಮಾದಲ್ಲಿ ಅಕ್ಷರ ‘ಕ್ರಾಂತಿ’ ನಡೀತಿದೆ. ಅಂದರೆ ಸಿನಿಮಾದಲ್ಲಿ ಸರಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದು ಸಂದೇಶವನ್ನು ಸಿನಿಮಾ ಹೊತ್ತು ಬರುತ್ತಿದೆ. ಅದನ್ನು ಹೇಗೆ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.

ಇದನ್ನೂ ಓದಿ : ಕ್ರಾಂತಿ vs ಪಠಾಣ್ : ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದವರಾರು ಗೊತ್ತಾ ?

ಇದನ್ನೂ ಓದಿ : ಪಾನ್ ಮಸಾಲ ಜಾಹೀರಾತು ನಿರಾಕರಿಸಿದ್ದ ಕೆಜಿಎಫ್‌ ನಟ ಯಶ್ ‘ಪೆಪ್ಸಿಗೆ ಐ ಲವ್‌ಯು’ ಎಂದಿದ್ಯಾಕೆ ? ಸಂಭಾವನೆ ಎಷ್ಟು ಗೊತ್ತಾ ?

ಇದನ್ನೂ ಓದಿ : ನಟ ಪುನೀತ್‌ ಹುಟ್ಟುಹಬ್ಬಕ್ಕೆ ‘ಕಬ್ಜ’ ಸಿನಿಮಾ ರಿಲೀಸ್

5. ಪಕ್ಕಾ ಪೈಸಾ ವಸೂಲ್‌ ಸಿನಿಮಾ
ದರ್ಶನ್ ಸಿನಿಮಾಗಳು ಎಂದರೆ ಪೈಸಾ ವಸೂಲ್ ಗ್ಯಾರೆಂಟಿ ಎನ್ನುವ ಮಾತಿದೆ. ಅಭಿಮಾನಿಗಳು ಕೇಳುವ ಆಕ್ಷನ್, ಡ್ಯಾನ್ಸ್, ಡೈಲಾಗ್ಸ್ ಅವರ ಸಿನಿಮಾದಲ್ಲಿ ಹೇರಳವಾಗಿ ಇರುತ್ತದೆ. ಬರೀ ದರ್ಶನ್‌ಗಾಗಿ ಸಿನಿಮಾ ನೋಡುವ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅಭಿಮಾನಿಗಳನ್ನು ರಂಜಿಸಿ ಸಿನಿಮಾ ಪೈಸಾ ವಸೂಲ್ ಸಿನಿಮಾ ಎನ್ನಿಸಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

Kranti Cinema: “Kranti” is a must watch movie for everyone: Here are 5 reasons why

Comments are closed.