ಪಾನ್ ಮಸಾಲ ಜಾಹೀರಾತು ನಿರಾಕರಿಸಿದ್ದ ಕೆಜಿಎಫ್‌ ನಟ ಯಶ್ ‘ಪೆಪ್ಸಿಗೆ ಐ ಲವ್‌ಯು’ ಎಂದಿದ್ಯಾಕೆ ? ಸಂಭಾವನೆ ಎಷ್ಟು ಗೊತ್ತಾ ?

ಕೆಜಿಎಫ್‌ ಸಿನಿಮಾ ಮೂಲಕ ರಾಕಿಭಾಯ್ ಆಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ನಟ ಯಶ್ ಈಗ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ (Pepsi India Brand Ambassador Yash) ಆಗಿದ್ದಾರೆ. ಈ ವಿಚಾರವನ್ನು ನಟ ಯಶ್‌ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್‌ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದು, ದೊಡ್ಡ ದೊಡ್ಡ ಉತ್ಪನ್ನ ಸಂಸ್ಥೆಗಳು ಯಶ್‌ನ ತಮ್ಮ ಉತ್ಪನ್ನದ ರಾಯಭಾರಿನ್ನಾಗಿ ಮಾಡಿಕೊಳ್ಳಲು ಮುಗಿಬಿದ್ದಿವೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಯಶ್‌19 ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಕೆಜಿಎಫ್ -2 ತೆರೆಕಂಡು ತಿಂಗಳುಗಳೇ ಕಳೆದರೂ ಅಭಿಮಾನಿಗಳಿಗೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್ ಇತ್ತೀಚೆಗೆ ಬಹಿರಂಗ ಪತ್ರ ಬರೆದು ಬೇಗ ಮುಂದಿನ ಸಿನಿಮಾ ಅಪ್‌ಡೇಟ್ ಕೊಡಿ ಎಂದಿದ್ದರು. ಕಳೆದೆರಡು ದಿನಗಳಿಂದ ಯಶ್ ಕಡೆಯಿಂದ ಜನವರಿ 24ಕ್ಕೆ ದೊಡ್ಡ ಅಪ್‌ಡೇಟ್ ಸಿಗುತ್ತೆ ಎನ್ನಲಾಗಿತ್ತು. ಟ್ವಿಟ್ಟರ್‌ನಲ್ಲಿ ಈ ವಿಚಾರ ಭಾರೀ ಚರ್ಚೆ ಆಗಿತ್ತು. ಯಶ್ ಕಡೆಯಿಂದ ಅಪ್‌ಡೇಟ್‌ ಏನೋ ಸಿಕ್ಕಿದೆ. ಆದರೆ ಸಿನಿಮಾ ಬಗ್ಗೆ ಅಲ್ಲ. ಬದಲಿಗೆ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಯಶ್ ಪಾನ್ ಮಸಾಲಾ ಜಾಹೀರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗುವ ಅವಕಾಶವನ್ನು ನಿರಾಕರಿಸಿದ್ದರು. ಇದಕ್ಕಾಗಿ ಆ ಸಂಸ್ಥೆ ಭಾರೀ ಮೊತ್ತದ ಸಂಭಾವನೆ ಕೊಡಲು ಮುಂದಾದರೂ ಯಶ್ ಒಪ್ಪಿರಲಿಲ್ಲ. ಆದರೆ ಈಗ ಇದಕ್ಕಿದ್ದಂತೆ ಪೆಪ್ಸಿ ತಂಪು ಪಾನೀಯಕ್ಕೆ ಅಂಬಾಸಿಡರ್ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಈಗ ಬರೀ ಸ್ಯಾಂಡಲ್‌ವುಡ್ ಸ್ಟಾರ್ ನಟ ಅಲ್ಲ. ಭಾರತೀಯ ಸಿನಿರಂಗದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ಬಂದಾಗಲೇ ಯಶ್ ಕ್ರೇಜ್‌ ದೇಶ್ಯಾದ್ಯಂತ ಸೃಷ್ಟಿಯಾಗಿತ್ತು. ಕೆಜಿಎಫ್‌ ಚಾಪ್ಟರ್‌-2 ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಬಾಲಿವುಡ್ ಸ್ಟಾರ್ ನಟರೇ ಯಶ್‌ ಅಭಿಮಾನಿಗಳಾಬಿಟ್ಟರು.

ಅಂದಹಾಗೆ ಇಲ್ಲಿಯವರೆಗೆ ಬಾಲಿವುಡ್‌ ಹಾಗೂ ಕ್ರಿಕೆಟ್ ಲೋಕದ ತಾರೆಯರು ಮಾತ್ರ ಪೆಪ್ಸಿ ತಂಪು ಪಾನೀಯಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಈ ಹಂತಕ್ಕೆ ಏರಿದ್ದಾರೆ. ಕೆಜಿಎಫ್‌ – 2 ಸಕ್ಸಸ್ ಬೆನ್ನಲ್ಲೇ ಯಶ್‌ಗೆ ಒಂದು ಭಾರೀ ಆಫರ್ ಬಂದಿತ್ತು. ಮಾಸ್‌ ಮಸಾಲಾ ಒಂದರ ಅಂಬಾಸಿಡರ್ ಆಗುವುದಕ್ಕೆ ಡಬಲ್ ಡಿಜಿಟ್ ಮೊತ್ತದ ಆಫರ್ ಸಂಭಾವನೆ ಕೊಡಲು ಮುಂದೆ ಬಂದಿದ್ದರು. ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನೋಡಿಕೊಳ್ಳುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೇನ್‌ಮೆಂಟ್‌ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಯಶ್ ಆಫರ್ ತಿರಸ್ಕರಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದರು.

‘ಪಾನ್ ಮಸಾಲಾ ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದರೂ ಈ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ’ ಎಂದಿದ್ದರು. ಸದ್ಯ ಯಶ್ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಪೆಪ್ಸಿ ತಂಪು ಪಾನೀಯ ಸಂಸ್ಥೆ ಈಗ ಬಾಲಿವುಡ್ ಸ್ಟಾರ್‌ಗಳನ್ನು ಬಿಟ್ಟು ಕನ್ನಡದ ನಟನನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳಲು ಭಾರೀ ಮೊತ್ತದ ಸಂಭಾವನೆಯನ್ನೇ ನೀಡಿರುವಂತೆ ಕಾಣುತ್ತಿದೆ.

ಇದನ್ನೂ ಓದಿ : ನಟ ಪುನೀತ್‌ ಹುಟ್ಟುಹಬ್ಬಕ್ಕೆ ‘ಕಬ್ಜ’ ಸಿನಿಮಾ ರಿಲೀಸ್

ಇದನ್ನೂ ಓದಿ : ಕ್ರಾಂತಿ vs ಪಠಾಣ್ : ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದವರಾರು ಗೊತ್ತಾ ?

ಯಶ್ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಂತಹ ಯಾವುದೇ ಅವಕಾಶ ಬಂದರೂ ಅಳೆದು ತೂಗಿ ಆರಿಸಿಕೊಳ್ಳುತ್ತಾರೆ. ಹಾಗಾಗಿ ಪೆಪ್ಸಿ ಇಂಡಿಯಾ ಜಾಹೀರಾತಿಗೂ ದೊಡ್ಡ ಮೊತ್ತದ ಸಂಭಾವನೆ ಜೇಬಿಗಿಳಿಸಿರುವಂತೆ ಕಾಣುತ್ತಿದೆ. ನಟ ಯಶ್ ಪೆಪ್ಸಿ ಇಂಡಿಯಾ ಅಂಬಾಸಿಡರ್ ಆಗಿರುವ ವಿಚಾರವನ್ನು ಸಣ್ಣ ವಿಡಿಯೋ ಸಮೇತ ಹಂಚಿಕೊಂಡಿಕೊಂಡಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಪೆಪ್ಸಿ ಬಾಟಲ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಯಶ್‌19 ಅಪ್‌ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಅನೌನ್ಸ್ ಆಗುತ್ತೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇನ್ನು ಸ್ವಲ್ಪ ಸಮಯ ಬೇಕು ಎಂದು ಯಶ್ ಅಭಿಮಾನಿಗಳ ಹತ್ತಿರ ಕೇಳಿಕೊಂಡಿದ್ದಾರೆ.

Pepsi India Brand Ambassador Yash: Why did KGF actor Yash say ‘I love you’ to Pepsi after refusing the pan masala ad? Do you know how much the salary is?

Comments are closed.