ಕ್ರಾಂತಿ vs ಪಠಾಣ್ : ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದವರಾರು ಗೊತ್ತಾ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಸಿನಿಮಾ ಬಿಡುಗಡೆಗೆ ಮಧ್ಯ ಒಂದು ದಿನ ಅಷ್ಟೇ ಬಾಕಿ ಇದೆ. ಈ ಸಿನಿಮಾ ಗಣರಾಜ್ಯೋತ್ಸವದ ವಿಶೇಷ ದಿನದಂದು ತೆರೆಗೆ ಬರುತ್ತಿದ್ದು, ಸಿನಿಮಾದ ಬುಕಿಂಗ್ ಈಗಾಗಲೇ (Kranti vs Pathan) ಆರಂಭಗೊಂಡಿದೆ. ಇನ್ನು ಈ ವರ್ಷ ತೆರೆಗೆ ಬರುತ್ತಿರುವ ಕನ್ನಡದ ಮೊದಲ ಸ್ಟಾರ್ ಸಿನಿಮಾ ಇದಾಗಿದೆ. 2021ರ ಮಾರ್ಚ್ ತಿಂಗಳ ಬಳಿಕ ಬರೋಬ್ಬರಿ 22 ತಿಂಗಳ ನಂತರ ತೆರೆಗೆ ಬರಲಿರುವ ದರ್ಶನ್ ನಟನೆಯ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಕ್ರಾಂತಿ ಜನವರಿ 26ರಂದು ತೆರೆಗೆ ಬರುತ್ತಿದ್ದರೆ, ಇದಕ್ಕೂ ಹಿಂದಿನ ದಿನ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಪಠಾಣ್ ತೆರೆಗೆ ಬರುತ್ತಿದೆ.

ಕ್ರಾಂತಿ ಸಿನಿಮಾ 22 ತಿಂಗಳುಗಳ ಬಳಿಕ ತೆರೆಗೆ ಬರಲಿರುವ ದರ್ಶನ್ ಅಭಿನಯದ ಸಿನಿಮಾವಾದರೆ, ಶಾರುಖ್ ಖಾನ್ ನಟನೆಯ ಪಠಾಣ್ ಬರೋಬ್ಬರಿ 4 ವರ್ಷಗಳ ಬಳಿಕ ತೆರೆಗೆ ಬರಲಿರುವ ಶಾರುಖ್ ಖಾನ್ ನಟನೆಯ ಸಿನಿಮಾವಾಗಿದೆ.ಹೀಗಾಗಿ ಈ ಎರಡೂ ಸಿನಿಮಾಗಳ ಮೇಲೂ ಸಹ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದ್ದು, ಎಲ್ಲಾ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಈ ಎರಡೂ ಸಿನಿಮಾಗಳ ನಡುವೆ ಪೈಪೋಟಿಯೂ ಸಹ ಏರ್ಪಟ್ಟಿದೆ. ಅದರಲ್ಲಿಯೂ ವಿಶೇಷವಾಗಿ ಈ ಎರಡೂ ಸಿನಿಮಾಗಳ ಪ್ರದರ್ಶನದ ಅಡ್ವಾನ್ಸ್ ಬುಕಿಂಗ್ ವಿಷಯವಾಗಿ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಬಹುದು.

ಪಠಾಣ್ ಸಿನಿಮಾದ ಮುಂಗಡ ಬುಕಿಂಗ್ ಆರಂಭವಾಗಿ ಜನವರಿ 23ರ ಸೋಮವಾರ ಮೂರು ದಿನಗಳು ಕಳೆದಿದ್ದು, ಈ ಮೂರು ದಿನಗಳ ಪೈಕಿ ಪಠಾಣ್ ಕರ್ನಾಟಕದಲ್ಲಿ 2.38 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಈ ಕಡೆ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಜನವರಿ 23ರ ಸೋಮವಾರಕ್ಕೆ ಎರಡು ದಿನಗಳ ಅಡ್ವಾನ್ಸ್ ಬುಕಿಂಗ್ ಅನ್ನು ಪೂರೈಸಿದ್ದು, 3.25 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಕರ್ನಾಟಕದ ಮುಂಗಡ ಬುಕಿಂಗ್ ಕಲೆಕ್ಷನ್‌ನಲ್ಲಿ ಪಠಾಣ್ ಸಿನಿಮಾವನ್ನು ಕ್ರಾಂತಿ ಸಿನಿಮಾ ಹಿಂದಿಕ್ಕಿ ಮೇಲುಗೈ ಸಾಧಿಸಿದೆ.

ಪಠಾಣ್ ಸಿನಿಮಾ ಬೆಂಗಳೂರಿನಲ್ಲಿ ತನ್ನ ಬಿಡುಗಡೆ ದಿನದಂದು ( ಜವನರಿ 25 ) 683 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು ದರ್ಶನ್ ನಟನೆಯ ಕ್ರಾಂತಿ ಸಿನಿಮಾ ತನ್ನ ಬಿಡುಗಡೆ ದಿನ ( ಜನವರಿ 26 ) ಬೆಂಗಳೂರಿನಲ್ಲಿ 549 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ವಿಷಯದ ಕುರಿತು ಚರ್ಚೆಗಳು ಜೋರಾಗಿದ್ದು, ಪಠಾಣ್ ಸಿನಿಮಾಕ್ಕೆ ತೆರೆದಿರುವಷ್ಟು ಪ್ರದರ್ಶನಗಳನ್ನು ಕ್ರಾಂತಿ ಸಿನಿಮಾಕ್ಕೆ ಇಲ್ಲ ಎಂಬ ಅಸಮಾಧಾನ ಮೂಡಿದೆ. ಇನ್ನು ಎರಡೂ ಸಿನಿಮಾಗಳೂ ಬೇರೆ ಬೇರೆ ದಿನ ಬಿಡುಗಡೆಯಾಗುತ್ತಿದ್ದರೂ ಹಿಂದಿ ಸಿನಿಮಾಕ್ಕಿಂತ ಕನ್ನಡ ಸಿನಿಮಾದ ಮುಂಗಡ ಬುಕಿಂಗ್‌ಗೆ ಕಡಿಮೆ ಪ್ರದರ್ಶನವನ್ನು ತೆರೆದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ನಟ ಪುನೀತ್‌ ಹುಟ್ಟುಹಬ್ಬಕ್ಕೆ ‘ಕಬ್ಜ’ ಸಿನಿಮಾ ರಿಲೀಸ್

ಇದನ್ನೂ ಓದಿ : “ಕ್ರಾಂತಿ” ಸಿನಿಮಾ ಬೆಂಬಲಿಸಿದ ಅಪ್ಪು ಅಭಿಮಾನಿಗಳು! ಭೇಷ್ ಎಂದ ನೆಟ್ಟಿಗರು

ಇದನ್ನೂ ಓದಿ : ತೆಲುಗು ಖ್ಯಾತ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ

ಆದರೆ ಕ್ರಾಂತಿ ಬಿಡುಗಡೆಯಾಗಲಿರುವ ದಿನ ಅಂದರೆ ಜನವರಿ 26ರಂದು ಬೆಂಗಳೂರಿನಲ್ಲಿ ಪಠಾಣ್ ಸಿನಿಮಾಕ್ಕೆ ಸದ್ಯ 357 ಪ್ರದರ್ಶನಗಳು ಮಾತ್ರ ಲಭಿಸಿದ್ದು, ಪಠಾಣ್ ತೆರೆಕಂಡ ಮರುದಿನವೇ ಬೆಂಗಳೂರಿನಲ್ಲಿ ತನ್ನ ಅರ್ಧದಷ್ಟು ಶೋಗಳನ್ನು ಕ್ರಾಂತಿ ಸಿನಿಮಾದ ಪ್ರಭಾವದಿಂದ ಕಳೆದುಕೊಳ್ಳಲಿದೆ. ಇನ್ನು ಕ್ರಾಂತಿ ಸಿನಿಮಾಕ್ಕೆ ಬಿಡುಗಡೆ ದಿನ ಬರೋಬ್ಬರಿ ಬೆಂಗಳೂರು ನಗರದಲ್ಲಿ 108 ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಪಡೆದುಕೊಂಡ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಈ ಪಟ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಸಿನಿಮಾ 149 ಪ್ರದರ್ಶನಗಳ ಜತೆಗೆ ಎರಡನೇ ಸ್ಥಾನದಲ್ಲಿದ್ದರೆ, 255 ಮುಂಜಾನೆ ಪ್ರದರ್ಶನಗಳನ್ನು ಕಂಡಿದ್ದ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

Kranti vs Pathan: Do you know who won the highest collection in Bangalore advance booking?

Comments are closed.