Krithi Shetty Prabhas : ಬಾಹುಬಲಿಗೆ ಜೊತೆಯಾದ ಉಪ್ಪೇನ್ ಬೆಡಗಿ : ಕೃತಿ ಅಭಿಮಾನಿಗಳು ಫುಲ್ ಖುಷ್

ನಟನೆಗೆ ಕಾಲಿಟ್ಟಾಗಿನಿಂದಲೂ ಸ್ಟಾರ್ಸ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತ ಹವಾ ಸೃಷ್ಟಿಸಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ ಈಗ ಮತ್ತೊಂದು ಬಿಗ್ ಬಜೆಟ್ ಹಾಗೂ ಬಿಗ್ ಸ್ಕ್ರೀನ್ ಸಿನಿಮಾದಲ್ಲಿ ಬಿಗ್ ಸ್ಟಾರ್ ಗೆ ಜೊತೆಯಾಗ್ತಿದ್ದಾರೆ. ಬಾಹುಬಲಿ ಹೀರೋ ಪ್ರಭಾಸ್ (Prabhas) ಗೆ ಕೃತಿ ಶೆಟ್ಟಿ (Krithi Shetty )ಹಿರೋಯಿನ್ ಆಗ್ತಿದ್ದು ಈ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ಹಾಗೂ ತೆಲುಗು ಸಿನಿ ರಂಗದಲ್ಲಿ ಸಖತ್ ಸದ್ದು ಮಾಡ್ತಿದೆ.

ಕೃತಿ ಶೆಟ್ಟಿ ಕಾಲ್ಗುಣವೋ ಏನೋ ಈ ನೀಳಕಾಯದ ಚೆಲುವೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಒಬ್ಬರಾದ ಮೇಲೊಬ್ಬರು ಸ್ಟಾರ್ ಗಳ‌ ಜೊತೆಗೆ ತೆರೆ ಹಂಚಿಕೊಳ್ಳೋ ಅವಕಾಶ ಸಿಗ್ತಿದೆ. ಈಗ ಬಾಹುಬಲಿ ಹಾಗೂ ಸಲಾರ್ ಹೀರೋ ಪ್ರಭಾಸ್ ಗೆ ಕೃತಿ ಶೆಟ್ಟಿ ಜೊತೆಯಾಗ್ತಿದ್ದಾರೆ. ಈ ಕ್ಯೂಟ್ ಬ್ಯೂಟಿ ಪ್ರಭಾಸ್ ಗೆ ಜೋಡಿಯಾಗ್ತಿರೋ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಈ ಬಿಗ್ ಬಜೆಟ್ ಸಿನಿಮಾವನ್ನು ಮಾರುತಿ‌ ನಿರ್ದೇಶಿಸಲಿದ್ದಾರಂತೆ. ಆದರೆ ಪ್ರಭಾಸ್ ಗೆ ಕೃತಿ ಶೆಟ್ಟಿ ಜೊತೆಯಾಗ್ತಿರೋ ಸುದ್ದಿಯನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಉಪ್ಪೇನ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಕೃತಿ ಶೆಟ್ಟಿ, ನಂತರ ಸಾಲು ಸಾಲು ಸಿನಿಮಾದಲ್ಲಿ ನಟಿಸಿದರು. ಮೊದಲ ಸಿನಿಮಾದಿಂದಲೇ ಪ್ರೇಕ್ಷಕರ ಮೆಚ್ಚುಗೆ ಪಡೆದ ಕೃತಿ ಶೆಟ್ಟಿ,ಶ್ಯಾಮ್ ಸಿಂಗ್ ರಾಯ್ ನ ನಟನೆಯಿಂದ ಅಭಿಮಾನಿವಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಇದೆಲ್ಲದರ ಮಧ್ಯೆ ಈಗ ಟಾಲಿವುಡ್ ನ ಫ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಗೆ ಕೃತಿ ಶೆಟ್ಟಿ ನಾಯಕಿಯಾಗ್ತಿರೋದು ಕೃತಿ ಕೆರಿಯರ್ ಪ್ಲಸ್‌ ಪಾಯಿಂಟ್ ಎನ್ನಲಾಗ್ತಿದೆ. ಇನ್ನೂ ಕೃತಿ ಶೆಟ್ಟಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹಿರೋಯಿನ್ ಪ್ರಭಾಸ್ ಗೆ ನಾಯಕಿಯಾಗ್ತಿರೋ ಸುದ್ದಿ ಕೇಳಿಯೇ ಹಾಲು ಕುಡಿದಷ್ಟು ಖುಷಿಯಾಗ್ತಿದ್ದು, ಯಾವಾಗ ಈ ಜೋಡಿಯನ್ನು ತೆರೆ ಮೇಲೆ ಕಣ್ತುಂಬಿ ಕೊಳ್ಳಲು ಕಾತುರರಾಗಿದ್ದಾರೆ. ಈಗಾಗಲೇ ಕಾಲಿವುಡ್ , ಟಾಲಿವುಡ್ ನಲ್ಲಿ ಮಿಂಚಿರೋ ಹಿರೋಯಿನ್ ಕೃತಿ ಪ್ರಭಾಸ್ ಜೊತೆ ಮೋಡಿ ಮಾಡೋದು ಪಕ್ಕಾ ಎನ್ನಲಾಗಿದೆ. 2011 ರಿಂದಲೂ ಬಣ್ಣದ ಲೋಕದಲ್ಲಿ ಮಿಂಚ್ತಿರೋ ಕೃತಿ ಇದುವರೆಗೂ 8 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Anita Bhat : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು

ಇದನ್ನೂ ಓದಿ : Megha Gupta : ಮೈಮಾಟದಲ್ಲೇ ಮನಗೆದ್ದ ಮೇಘಾ ಗುಪ್ತಾ: ಇಲ್ಲಿದೆ ಹಾಟ್ ಪೋಟೋಶೂಟ್

( Krithi Shetty Acting with Baahubali Prabhas)

Comments are closed.