ಕಾಂತಾರದ ಜೊತೆ ಜೊತೆಗೆ ಖ್ಯಾತಿ ಪಡೆದ ನಟಿ ಸಪ್ತಮಿ ಗೌಡ (Saptami Gowda) ಸದ್ಯ ಬಾಲಿವುಡ್ ಪ್ರವೇಶದ ಸಂಭ್ರಮದಲ್ಲಿದ್ದಾರೆ. ತಮ್ಮ ಚೊಚ್ಚಲ ಬಾಲಿವುಡ್ ಸಿನಿಮಾಕ್ಕೆ ಕ್ಷಣಗಣನೆ ನಡೆಸ್ತಿರೋ ಸಪ್ತಮಿ ಸಖತ್ ಗ್ರ್ಯಾಂಡ್ ಪೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಪ್ತಮಿ ಪೋಟೋಗಳು ಸಂಚಲನ ಮೂಡಿಸಿದೆ. ವಾರಿಯರ್ ಪ್ರಿನ್ಸೆಸ್ ಲುಕ್ ಪಡ್ಡೆಗಳ ಹುಡುಗರ ನಿದ್ದೆ ಕದ್ದಿದೆ. ಮೊನ್ನೆ ಮೊನ್ನೆ ಸ್ಯಾಂಡಲ್‌ವುಡ್ ಗಡಿ ದಾಟಿದ ನಟಿ ಸಪ್ತಮಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಜೆಟ್ ಸಿನಿಮಾಗೆ ಅವಕಾಶ ಪಡೆದ ಸಪ್ತಮಿ ಅಷ್ಟೇ ಗ್ರ್ಯಾಂಡ್ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸಪ್ತಮಿ ಎಐ ಪೋಟೋಗಳು ವೈರಲ್ ಆಗಿದ್ದು, ಇದುವರೆಗೂ ಸಪ್ತಮಿ ಟ್ರೆಡಿಶನಲ್, ಮಾಡರ್ನ್ ಲುಕ್ ನಲ್ಲಿ ನೋಡಿದ ಅಭಿಮಾನಿಗಳು ಈಗ ಕೆ.ಆರ್.ಜಿ.ಕನೆಕ್ಟ್ ಶೇರ್ ಮಾಡಿದ ಪೋಟೋಗಳನ್ನು ನೋಡಿ ಮೈಮರೆಯುವಂತೆ ಮಾಡಿದೆ. ಸಿಂಪಲ್ ಹಳ್ಳಿ ಹುಡುಗಿ ಲುಕ್, ಗ್ರ್ಯಾಂಡ್ ಸೆಲೆಬ್ರೇಶನ್ ಲುಕ್, ರಾಜಕುಮಾರಿಯಂತಹ ಅಲಂಕಾರದಲ್ಲಿ ಸಪ್ತಮಿ ಸೌಂದರ್ಯ ಅನಾವರಣಗೊಂಡಿದೆ. ಎಲೆಗಳ ಕಿರೀಟ, ಕಿವಿಯಲ್ಲಿ ತೂಗಾಡುವ ಜುಮುಕಿ,ಕತ್ತಿನ ಹಾರ ಎಲ್ಲವೂ ಪೋಟೋದಲ್ಲಿ ಹೈಲೈಟ್ ಆಗಿದ್ದು ಅಭಿಮಾನಿಗಳ ನಿದ್ದೆಗೆಡಿಸಿದೆ.
ಬಾಲಿವುಡ್ ನಲ್ಲಿ ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ಮೂಲಕ ಸಂಚಲನ ಮೂಡಿಸಿದ ವಿವೇಕ್ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ ಅವಕಾಶ ಪಡೆದಿದ್ದಾರೆ. ಈ ಸಿನಿತಂಡ ಶೇರ್ ಮಾಡಿರೋ ಪೋಟೋವನ್ನು ಸಪ್ತಮಿ ಗೌಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಹಂಚಿಕೊಂಡಿದ್ದು, ದಿ ವಾಕ್ಸಿನ್ ವಾರ್ ತಂಡಕ್ಕೆ ಧನ್ಯವಾದಗಳು ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿತು. ನಿಮ್ಮಿಂದ ಸಾಕಷ್ಟು ಕಲಿತಿದ್ದೇನೆ. ಸೆಟ್ ನಿಂದ ದೊರೆತ ಈ ಸುಂದರ ನೆನಪಿನ ಕಾಣಿಕೆಗೆ ಧನ್ಯವಾದ ಎಂದೂ ಸಪ್ತಮಿ ಗೌಡ vote of thanks ಪ್ರಕಟಿಸಿದ್ದಾರೆ.
ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್‌ನಲ್ಲಿ ಸುಂಟರಗಾಳಿ ಎಬ್ಬಿಸಿದ “ಕ್ರಾಂತಿ” ಸಿನಿಮಾ
ಇದನ್ನೂ ಓದಿ : ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ : ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
ಇದನ್ನೂ ಓದಿ : 3 ದಿನಕ್ಕೆ 300 ಕೋಟಿ ಕಲೆಕ್ಷನ್ಸ್ : ಬಾಕ್ಸಾಫೀಸ್‌ನಲ್ಲಿ ‘ಪಠಾಣ್’ ಬಿರುಗಾಳಿ
ಕಾಂತಾರದ ಬಳಿಕ ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾ ಮುಗಿಸಿದ ಸಪ್ತಮಿ ಗೌಡರಿಗೆ ವಿವೇಕ್ ಅಗ್ನಿಹೋತ್ರಿ ದಿ ವಾಕ್ಸಿನ್ ವಾರ್ ಗೆ ಅವಕಾಶ ನೀಡಿದ್ದರು. ಹೈದ್ರಾಬಾದ್ ಸುತ್ತ ಮುತ್ತ ನಡೆದಿರೋ ಈ ಸಿನಿಮಾ ಶೂಟಿಂಗ್ ಮುಗಿಸಿದ ಸಪ್ತಮಿ ಸ್ಪೆಶಲ್ ಪೋಟೋಶೂಟ್ ಜೊತೆ ಮತ್ತೆ ತವರಿಗೆ ಮರಳಿದ್ದಾರೆ. ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ನಟನೆ ಆರಂಭಿಸಿದ್ದು ಕಾಂತಾರದ ಬಳಿಕ ಸಾಕಷ್ಟು ಅವಕಾಶಗಳು ಸಪ್ತಮಿ ಅರಸಿ ಬಂದಿದೆ.
Leela Shining in Warrior Look : Saptami Gowda New Photos Viral