Leena Manimekalai : ಲೇಖಕಿ – ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸುವ ವಿವಾದಾತ್ಮಕ ಪೋಸ್ಟರ್ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ. ಇವರ ಹೊಸ ಚಿತ್ರ ‘ಕಾಲಿ’ ಸಿನಿಮಾದ ಪೋಸ್ಟರ್ ಇದಾಗಿದೆ. ಇದನ್ನು ಪರ್ಫಾಮೆನ್ಸ್ ಡಾಕ್ಯೂಮೆಂಟರಿ ಎಂದು ಕರೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು #ArrestLeenaManimekalai ಎಂಬ ಟ್ರೆಂಡ್ ಆರಂಭಿಸಿದ್ದಾರೆ.
ಜುಲೈ 2ರಂದು ಸಿನಿಮಾ ನಿರ್ಮಾಪಕಿ ಲೀನಾ ಮಣಿಮೇಕಲೈ ಈ ರೀತಿಯ ಪೋಸ್ಟರ್ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನಲ್ಲಿ ಇಂದು ನನ್ನ ಇತ್ತೀಚಿನ ಚಲನಚಿತ್ರದ ಬಿಡುಗಡೆಯನ್ನು ಶೇರ್ ಮಾಡಲು ನಾನು ಭಾರೀ ಉತ್ಸುಕಳಾಗಿದ್ದೇನೆ. ಈ ಸಿನಿಮಾದ ಆರು ನಿಮಿಷಗಳ ಆಯ್ದ ಭಾಗವಾದ ಕಾಳಿಯನ್ನು ಇಂದು ತೋರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನ ರಿದಮ್ಸ್ ಆಫ್ ಕೆನಡಾದ ಭಾಗವಾಗಿ ಕೆನಡಾ ಸಂಸ್ಕೃತಿಯ ವೈವಿಧ್ಯಮಯ ವಸ್ತ್ರವನ್ನು ಆಚರಿಸುವ ಒಂದು ವಾರದ ಅವಧಿಯ ಉತ್ಸವ. ಉತ್ಸವದ ಸಮಯದಲ್ಲಿ ಈವೆಂಟ್ ಮತ್ತು ಮ್ಯೂಸಿಯಂನ ಶಾಶ್ವತ ಸಂಗ್ರಹಣೆ ಗ್ಯಾಲರಿಗೆ ಪ್ರವೇಶ ಉಚಿತವಾಗಿದೆ.
Super thrilled to share the launch of my recent film – today at @AgaKhanMuseum as part of its “Rhythms of Canada”
— Leena Manimekalai (@LeenaManimekali) July 2, 2022
Link: https://t.co/RAQimMt7Ln
I made this performance doc as a cohort of https://t.co/D5ywx1Y7Wu@YorkuAMPD @TorontoMet @YorkUFGS
Feeling pumped with my CREW❤️ pic.twitter.com/L8LDDnctC9
ಲೀನಾ ಮಣಿಮೇಕಲೈನ ಪೋಸ್ಟರ್ ನೆಟ್ಟಿಗರಿಗೆ ಸುತಾರಾಂ ಇಷ್ಟವಾಗಿಲ್ಲ. ಅನೇಕರು ಈ ಪೋಸ್ಟರ್ನಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದ್ದಾರೆ. ಈ ಪೋಸ್ಟರ್ನ್ನು ಈ ಕೂಡಲೇ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಪೋಸ್ಟರ್ನಲ್ಲಿ ಮಾ ಕಾಳಿ ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿದ್ದು ಇದನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಕಲಾವಿದೆ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಮತ್ತೊಂದು ಕೈಯಲ್ಲಿ LGBTQ ಸಮುದಾಯದ ಹೆಮ್ಮೆಯ ಧ್ವಜವನ್ನು ಹಿಡಿದಿದ್ದಾರೆ.
ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಕಂಡು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು , ಪ್ರತಿದಿನವೂ ಸಮಾಜದಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಬರುವಂತಹ ಘಟನೆಗಳು ಜರುಗುತ್ತಿವೆ. ಇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ. ಮಾತ್ರವಲ್ಲದೇ ಈ ಫೋಟೋಗಳಿಗೆ ಅಮಿತ್ ಶಾ ಹಾಗೂ ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡುವ ಮೂಲಕ ಈ ಫೋಸ್ಟರ್ ಹಾಗೂ ಸಿನಿಮಾದ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿ : Eknath Shinde : ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಏಕನಾಥ್ ಶಿಂಧೆ ನೇತೃತ್ವದ ‘ಮಹಾ’ ಸರ್ಕಾರ
ಇದನ್ನೂ ಓದಿ : Actor Swara Bhasker : ನಟಿ ಸ್ವರಾ ಭಾಸ್ಕರ್ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ
Leena Manimekalai’s Kaali poster draws ire for ‘hurting religious sentiments’, netizens demand arrest