Eknath Shinde : ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಏಕನಾಥ್​ ಶಿಂಧೆ ನೇತೃತ್ವದ ‘ಮಹಾ’ ಸರ್ಕಾರ

Eknath Shinde : ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ ಸರ್ಕಾರವನ್ನು ಕೆಡವಿ ಸಿಎಂ ಗದ್ದುಗೆಯಲ್ಲಿ ಕುಳಿತಿರುವ ಏಕನಾಥ್​ ಶಿಂಧೆ ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ 144 ಶಾಸಕರ ಬಹುಮತವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆ ಎಣಿಕೆ ಕಾರ್ಯ ಇನ್ನೂ ನಡೆಯುತ್ತಲೇ ಇದೆ .

31 ತಿಂಗಳುಗಳ ಕಾಲ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಿದ್ದ ಮಹಾ ವಿಕಾಸ್​ ಅಘಾಡಿ ಮೈತ್ರಿಕೂಟದ ಸರ್ಕಾರವನ್ನು ಕೆಡವುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರೇ ಏಕನಾಥ್​ ಶಿಂಧೆ. 50ರಷ್ಟು ಶಿವಸೇನೆ ನಾಯಕರ ಜೊತೆಯಲ್ಲಿ ಹಿಂದಿನ ಸರ್ಕಾರದ ವಿರುದ್ಧ ಬಂಡಾಯವೆದ್ದು ಆಸ್ಸಾಂನ ಗುವಾಹಟಿಯಲ್ಲಿರುವ ರೆಸಾರ್ಟ್​ನಲ್ಲಿ ತಂಗಿದ್ದರು. ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರ ವಿಪ್​ ಜಾರಿಗೊಳಿಸಿದ್ದರೂ ಸಹ ಕದಲದ ಈ ಟೀಂ ಪರೋಕ್ಷವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಎಲ್ಲಾ ರೀತಿಯಲ್ಲಿ ಪ್ಲಾನ್​ ಮಾಡಿತ್ತು. ಕೊನೆಗೂ ಉದ್ಧವ್​ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಮಹಾರಾಷ್ಟ್ರಕ್ಕೆ ಮರಳಿದ ಬಂಡಾಯ ಶಾಸಕರ ಟೀಂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವ ಕಾರ್ಯವನ್ನು ಚುರುಕುಗೊಳಿಸಿತ್ತು .


ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ರೆಬೆಲ್​ ಶಾಸಕರ ಟೀಂ ಜೂನ್​ 30ರಂದು ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿಯನ್ನು ಭೇಟಿಯಾಗಿದ್ದರು. ರಾಜ್ಯಪಾಲರನ್ನು ಭೇಟಿಯಾಗಿ ರಾಜಭವನದಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ದೇವೇಂದ್ರ ಫಡ್ನವಿಸ್​ ಏಕನಾಥ್​ ಶಿಂಧೆ ಮಹಾರಾಷ್ಟ್ರದ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದರು. ಅಂದು ಪ್ರಮಾಣ ವಚನ ಸ್ವೀಕರಿಸಿದ್ದ ಏಕನಾಥ್​ ಶಿಂಧೆ ಸೋಮವಾರದಂದು ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರು. ಜುಲೈ 3 ಹಾಗೂ ನಾಲ್ಕರಂದು ಮಹಾರಾಷ್ಟ್ರದಲ್ಲಿ ವಿಶೇಷ ಅಧಿವೇಶನ ನಡೆದಿದ್ದು ಮಹಾರಾಷ್ಟ್ರದಲ್ಲಿ ಭದ್ರವಾಗಿ ನೆಲೆಯೂರುವಲ್ಲಿ ಏಕನಾಥ್​ ಶಿಂಧೆ ಯಶಸ್ವಿಯಾಗಿದ್ದಾರೆ.


ಭಾನುವಾರದಂದು ಬಿಜೆಪಿ ಪರ ವಕೀಲ ರಾಹುಲ್​ ನಾರ್ವೇಕರ್​ ಸದನದ ಸ್ಪೀಕರ್​ ಆಗಿ ಆಯ್ಕೆಯಾದ ಬಳಿಕ ಏಕನಾಥ್​ ಶಿಂಧೆ ನೇತೃತ್ವದ ಸರ್ಕಾರವು ಲಿಟ್ಮಸ್​ ಪರೀಕ್ಷೆಯನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ : ನಿನ್ನೆ ದೋಸ್ತಿ.. ಇವತ್ತು ದುಷ್ಮನ್.. ಇಂಗ್ಲೆಂಡ್ ಆಟಗಾರನಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ!

ಇದನ್ನೂ ಓದಿ : India Vs England test‌ : ಟೀಮ್ ಇಂಡಿಯಾಗೆ ದಿನೇಶ್‌ ಕಾರ್ತಿಕ್ ನಾಯಕ !

Eknath Shinde-led govt reaches majority mark of 144 in Maharashtra Assembly

Comments are closed.