ಮಂಗಳವಾರ, ಏಪ್ರಿಲ್ 29, 2025
HomeCinemaLockdown Effects On New Films:ಲಾಕ್‌ಡೌನ್ ಎಫೆಕ್ಟ್- ಮುಂದಿನ 3 ತಿಂಗಳು ಹೊಸ ಚಿತ್ರಗಳ ಬಿಡುಗಡೆ...

Lockdown Effects On New Films:ಲಾಕ್‌ಡೌನ್ ಎಫೆಕ್ಟ್- ಮುಂದಿನ 3 ತಿಂಗಳು ಹೊಸ ಚಿತ್ರಗಳ ಬಿಡುಗಡೆ ಕಷ್ಟ, 13 ಚಿತ್ರಗಳ ಸ್ಥಿತಿ ಡೋಲಾಯಮಾನ

- Advertisement -

ನಾಳೆ ಅಂದರೆ ಶುಕ್ರವಾರ ರಾತ್ರಿಯಿಂದಲೇ ಲಾಕ್‌ಡೌನ್‌(Lockdown) ಜಾರಿಯಾಗಲಿದ್ದು, ಸೋಮವಾರ ಬೆಳಗಿನ ತನಕ ರಾಜಧಾನಿ ಶಟಪ್. ಗಾಂಧಿನಗರಕ್ಕೆ (Sandalwood or Gandhinagar) ವೀಕೆಂಡ್ ಕರ್ಫ್ಯೂ (Weekend Curfew) ದೊಡ್ಡ ತಲೆಬೇನೆಯಾಗಿ ಕಾಡುತ್ತಿದೆ. ಶುಕ್ರವಾರ, ಶನಿವಾರ, ಭಾನುವಾರಗಳಿಂದ ಆಗುವ ಕಲೆಕ್ಷನ್ ನಿಂದಲೇ ಗಲ್ಲಾಪೆಟ್ಟಿಗೆ ತುಂಬುವುದು. ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ. ಕೊರೋನ ಕಾರಣದಿಂದ ಸರ್ಕಾರ 50-50 ಸೀಟಿನ ನಿರ್ಬಂಧ ಬೇರೆ ಹೇರಿದೆ. ಮತ್ತೊಂದುಕಡೆ ದಿನಕ್ಕೆ ಎರಡು-ಮೂರು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಇದು ಚಿತ್ರರಂಗದ (Kannada Film Industry) ಆಂತರಿಕ ತಲ್ಲಣಕ್ಕೆ ಕಾರಣವಾಗಿ, ಈಗಾಗಲೇ ಮುಂದಿನ 40 ದಿನಗಳ ಅಂತರದಲ್ಲಿ ಬಿಡುಗಡೆಯಬೇಕಿದ್ದ 13 ಚಿತ್ರಗಳ ಹಣೆಬರಹ ಡೋಲಾಯಮಾನವಾಗಿದೆ.

ಜನವರಿ ತಿಂಗಳಲ್ಲೇ ಕನ್ನಡದ ಬಹುನಿರೀಕ್ಷಿತ 3 ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಪ್ಯಾನ್ ಇಂಡಿಯಾ ಚಿತ್ರ ರಾಜಮೌಳಿ ಅವರ ಆರ್ ಆರ್ ಆರ್, ರಾಧೆ ಶ್ಯಾಮ್ ಸೇರಿದಂತೆ ಒಟ್ಟು 6 ಚಿತ್ರಗಳು ಈಗಾಗಲೇ ಬಿಡುಗಡೆಯನ್ನು ಮುಂದೂಡಿದೆ. ಡಿಸೆಂಬರ್ ತಿಂಗಳಲ್ಲಿ ನಟ ಶರಣ್ ಅಭಿನಯದ ಅವತಾರಪುರುಷ, ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಚಿತ್ರಗಳು ಬಿಡುಗಡೆ ಆಗಬೇಕಿತ್ತು. ಕೊರೋನ ಮುನ್ನೆಚ್ಚರಿಕೆಯಿಂದಾಗಿಯೋ ಏನೋ, ಮುನ್ನೆಚ್ಚರಿಕೆಯಾಗಿ ಅದನ್ನೂ ಮುಂದೂಡಲಾಯಿತು. ಇದರ ಜೊತೆಗೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ಫೆಬ್ರವರಿಗೆ ತೆರೆಗೆ ತರುವ ಪ್ರಯತ್ನಗಳು ಈಗ ವಿಫಲಗೊಳ್ಳಲಿವೆ. ಲಾಕ್ ಡೌನ್, ಸಿನಿಮಾ ಥಿಯೇಟರ್ ನಲ್ಲಿ ಪ್ರೇಕ್ಷಕರಿಗೆ 50-50 ವೀಕ್ಷಣೆಗೆ ಅವಕಾಶ ಕೊಟ್ಟಿರುವುದರಿಂದ ಚಾರ್ಲಿ, ಅವತಾರ ಪುರುಷ ಚಿತ್ರಗಳ ಭವಿಷ್ಯದ ಬಿಡುಗಡೆಯೂ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇನ್ನು ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾದ- ಗಜಾನನ ಅಂಡ್ ಗ್ಯಾಂಗ್ ಓಲ್ಡ ಮಾಂಕ್, ಲವ್ ಮಾಕ್ಟೇಲ್ -2, ಬೈಟು ಲವ್, ವಿಕ್ರಾಂತ್ ರೋಣ ಚಿತ್ರಗಳ ಪೈಕಿ ಬೈಟು ಲವ್ ಬಿಡುಗಡೆ ಮಾಡುವುದಿಲ್ಲ ಅಂತ ಚಿತ್ರ ತಂಡ ಹೇಳಿಕೊಂಡಿದೆ. ಉಳಿದ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಬಹುಬಜೆಟ್ ನ ವಿಕ್ರಾಂತ್ ರೋಣಕ್ಕೂ ಸಧ್ಯಕ್ಕೆ ಮತ್ತೊಮ್ಮೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.
ಹಬ್ಬಗಳಂದು ಸಿನಿಮಾ ಬಿಡುಗಡೆ ಮಾಡುವುದು ಸಂಪ್ರದಾಯ. ಈಗಾಗಲೇ ಹೊಸವರ್ಷ, ಸಂಕ್ರಾಂತಿಗಳೆಂಬ ಸುಮೂಹರ್ತವನ್ನು ಕೊರೋನ ಕಸಿದು ಕೊಂಡಿದೆ. ಇದರಲ್ಲಿ, ರೈಡರ್ , ಬಡವರಾಸ್ಕಲ್ ಡಿಸೆಂಬರ್ ತಿಂಗಳ ಆದಿ ಅಂತ್ಯಗಳಲ್ಲಿ ಬಿಡುಗಡೆಗೊಂಡು ಜನಪ್ರಿಯವಾದವಾದರೂ ಗ್ರಾಮಾಂತರದಲ್ಲಿ ಪ್ರದರ್ಶನಗೊಳ್ಳುತ್ತಿರುವುದರಿಂದ ಲಾಕ್ ಡೌನ್ ನಿಂದ ಆದಾಯಕ್ಕೆ ಕುತ್ತುಬರಬಹುದು ಅನ್ನೋ ಆತಂಕವಿದೆ.
ಈವಿಚಾರದಲ್ಲಿ ಡಾಲಿ ದನಂಜಯ್ ಅವರ ಬಡವರಾಸ್ಕಲ್ ಸ್ವಲ್ಪ ಮಟ್ಟಿಗೆ ಸೇಫ್. ಡಿಸೆಂಬರ್ ಕೊನೆಗೆ ಬಿಡುಗಡೆಯಾದ ರೈಡರ್ ಗೆ ಲಾಕ್‌ಡೌನ್ ನಿಂದ ಬಹುದೊಡ್ಡ ಹೊಡೆತ ಬೀಳಬಹುದು ಎನ್ನುವ ಲೆಕ್ಕಾಚಾರವಿದೆ.

ತಜ್ಞರ ಹೇಳಿಕೆಯ ಪ್ರಕಾರ, ಫೆಬ್ರವರಿ ಕೊನೆ ಅಥವಾ ಮಾರ್ಚ್ ಮಧ್ಯಭಾಗಕ್ಕೆ ಒಮಿಕ್ರಾನ್ ಸೋಂಕು ತಗ್ಗಬಹುದು. ಏಪ್ರಿಲ್ ನಂತರ ಎಲ್ಲ ಕಡೆ ಸಾವಧಾನ ಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಿದ್ದಾರೆ. ಅಂದರೆ, ಇನ್ನು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೂ ಚಿತ್ರಬಿಡುಗಡೆ ಮಾಡುವ ಧೈರ್ಯ ಮಾಡುವಂತಿಲ್ಲ. ಕನಿಷ್ಠ ಈ ನಾಲ್ಕು ತಿಂಗಳುಗಳ ಕಾಲ ಚಿತ್ರಗಳು ಬಿಡುಗಡೆಯಾಗುವುದು ಅನುಮಾನ. ಇದರ ಜೊತೆಗೆ, ಈ ತಿಂಗಳುಗಳಲ್ಲಿ ಶ್ರೀರಾಮನವಮಿ, ಯುಗಾದಿ ಹಬ್ಬಗಳು ಬರುತ್ತವೆ. ಅಂದರೆ, ಸಿನಿಮಾ ಬಿಡುಗಡೆಗೆ ಇದ್ದ ಮಹತ್ವದ ಈ ಎರಡು ಮುಹೂರ್ತಗಳು ಕೂಡ ಕೈತಪ್ಪಲಿದ್ದು, ನಾಲ್ಕು ತಿಂಗಳಲ್ಲಿ ಬಿಡುಗಡೆಗೆ ಯೋಜಿಸಿದ್ದ ಚಿತ್ರಗಳು ಕೂಡ ಮತ್ತಷ್ಟು ಕಾಲ ಮುಂದೂಡುವ ಪ್ರಮೇಯ ಎದುರಾಗಿದೆ.

ಇದನ್ನೂ ಓದಿ: Rachita Ram Good News : ಸೂಪರ್ ಮಚ್ಚಿ ಅಂದ್ರು ರಚ್ಚು: ರಚಿತಾರಾಮ್ ಅಭಿಮಾನಿಗಳಿಗೆ ಸಂಕ್ರಾಂತಿ ಗೆ ಸಿಹಿಸುದ್ದಿ

(Lockdown Effect On New Films)

RELATED ARTICLES

Most Popular