What is Prime Minister’s SPG Security?: ಏನಿದು ಪ್ರಧಾನಿ ಎಸ್ಪಿಜಿ ಸೆಕ್ಯೂರಿಟಿ?

ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ (PM Narendra Modi Punjab Visit) ಭೇಟಿಯ ವೇಳೆ ಅವರ ಭದ್ರತೆಯಲ್ಲಿ ವೈಫಲ್ಯವಾಗಿದೆ (Security Breach) ಎಂಬ ವಿಷಯ ದೇಶದಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಹಾಗಾದರೆ ಪ್ರಧಾನಮಂತ್ರಿಗಳ ಭದ್ರತೆಯ ಜವಾಬ್ದಾರಿ (PM Security) ಯಾರದ್ದು? ಅಂತಹ ಖಡಕ್ ಭದ್ರತೆಯನ್ನು ಹೇಗೆ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀವು ಎಲ್ಲೂ ಓದಿರಲಾರಿರಿ. ನಾವಿಲ್ಲ ಪ್ರಧಾನಮಂತ್ರಿಯವರಿಗೆ ಭದ್ರತೆ ಒದಗಿಸುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ – SPG) ಈ ಕುತೂಹಲಕರ ಮಾಹಿತಿಯನ್ನು ನಿಮಗಾಗಿ ತೆರೆದಿಡಲಾಗಿದೆ.

ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ಪ್ರಧಾನ ಮಂತ್ರಿಯ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ಹೊಂದಿದೆ. ಎಸ್‌ಪಿಜಿಯು ಭಾರತ ಮತ್ತು ವಿದೇಶಗಳಲ್ಲಿ ಎಲ್ಲಾ ಸಮಯದಲ್ಲೂ ಪ್ರಧಾನ ಮಂತ್ರಿಯನ್ನು ಹಾಗೂ ಜೊತೆಗೆ ಅವರ ಅಧಿಕೃತ ನಿವಾಸದಲ್ಲಿ ಅವರೊಂದಿಗೆ ವಾಸಿಸುವ ಅವರ ಹತ್ತಿರದ ಕುಟುಂಬ ಸದಸ್ಯರನ್ನು ರಕ್ಷಣೆ ಒದಗಿಸುತ್ತದೆ.
ಈ ಏಜೆನ್ಸಿಯನ್ನು 1988 ರಲ್ಲಿ “ಭಾರತದ ಸಂಸತ್ತಿನ ಕಾಯಿದೆಯ” ಮೂಲಕ ರಚಿಸಲಾಯಿತು. 2019 ರಲ್ಲಿ, ಕಾನೂನನ್ನು ತಿದ್ದುಪಡಿ ಮಾಡಿ ಎಸ್‌ಪಿಜಿ ರಕ್ಷಣೆಯನ್ನು ಇಂದು ಭಾರತದ ಪ್ರಧಾನ ಮಂತ್ರಿಗೆ ಮಾತ್ರ ನೀಡಲಾಗುತ್ತದೆ. ಇದರ ಪ್ರಧಾನ ಕಚೇರಿ ನೈಋತ್ಯ ದೆಹಲಿಯ ದ್ವಾರಕಾದಲ್ಲಿದೆ. ಎಸ್‌ಪಿಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ (ಗಡಿ ಭದ್ರತಾ ಪಡೆ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್) ಮತ್ತು ಪುರುಷರು ಮತ್ತು ಮಹಿಳೆಯರಿಗೆ ಇಲ್ಲಿ ಜವಾಬ್ದಾರಿ ನಿರ್ವಹಿಸುತ್ತಾರೆ.

ಎಸ್‌ಪಿಜಿ ಸಿಬ್ಬಂದಿಯ ವೇಶಭೂಷಣ ಹೇಗಿರುತ್ತದೆ?
ಎಸ್‌ಪಿಜಿ ಭದ್ರತಾ ಸಿಬ್ಬಂದಿ ಸಾಧಾರಣವಾಗಿ ಸನ್‌ಗ್ಲಾಸ್‌ನೊಂದಿಗೆ ಕಪ್ಪು, ವೆಸ್ಟರ್ನ್ ಶೈಲಿಯ ಬ್ಯುಸಿನೆಸ್ ಸೂಟ್‌ಗಳನ್ನು ಧರಿಸಿರುವ ಮತ್ತು ಟುವೇ ಎನ್‌ಕ್ರಿಪ್ಟ್ ಮಾಡಲಾದ ಕಮ್ಯುನಿಕೇಶನ್ ಇಯರ್‌ಪೀಸ್ ಮತ್ತು ಹಿಡನ್ ಹ್ಯಾಂಡ್ ಗನ್ ಧರಿಸಿ, ಪ್ರಧಾನಿಯ ಸಮೀಪದಲ್ಲಿ ನಿಂತಿರುತ್ತಾರೆ. ಮೊದಲೇ ಹೇಳಿದಂತೆ, ಎಸ್‌ಪಿಜಿ ಯಾವಾಗಲೂ ಪ್ರಧಾನಿಯನ್ನು ಸುತ್ತುವರೆದು ಅವರನ್ನು ಕಾವಲು ಕಾಯುತ್ತದೆ. ಎಸ್‌ಪಿಜಿ ‘ಬ್ಲೂ ಬುಕ್‌’ನಲ್ಲಿ ಹೇಳಿರುವಂತೆ ಸೂಚನೆಗಳನ್ನು ಅನುಸರಿಸುತ್ತದೆ. ‘ಈ ಬ್ಲೂ ಬುಕ್’ ನಲ್ಲಿರುವ ಸೂಚನೆಗಳನ್ನು ಗೃಹ ಸಚಿವಾಲಯ ಹೊರಡಿಸಿದೆ.

ಪ್ರಧಾನ ಮಂತ್ರಿಯ ಯಾವುದೇ ಭೇಟಿಗೆ ಮೂರು ದಿನಗಳ ಮೊದಲು, ಸಂಬಂಧಿತ ರಾಜ್ಯದ ಗುಪ್ತಚರ ಬ್ಯೂರೋ ಅಧಿಕಾರಿಗಳು, ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿ ಸೇರಿದಂತೆ ಪ್ರಧಾನಿಯವರ ಭೇಟಿಯ ಭದ್ರಪಡಿಸುವಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೊಂದಿಗೆ ಎಸ್ ಪಿ ಜಿ ಮುಂಗಡ ಭದ್ರತಾ ಸಂಪರ್ಕವನ್ನು ಹೊಂದಿರಬೇಕು ಎಂದು ಬ್ಲೂ ಬುಕ್ ಕಡ್ಡಾಯಗೊಳಿಸುತ್ತದೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(SPG to Blue Book rules Heres everything you need to know about how the prime minister is protected from threats)

Comments are closed.