Meghana Raj : ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಆದ ನಟಿ ಮೇಘನಾ ರಾಜ್​​​

Meghana Raj :ಚಂದನವನದ ಚಂದದ ತಾರೆ ಮೇಘನಾ ರಾಜ್​ ತಮ್ಮ ಜೀವನದಲ್ಲಿ ಕಂಡ ಕಷ್ಟ ಹೇಳುವಂತದ್ದಲ್ಲ. ಗರ್ಭಿಣಿ ಇರುವಾಗಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ನೋವನ್ನು ನುಂಗಿದ್ದ ಮೇಘನಾ ಪುತ್ರ ರಾಯನ್​ಗೆ ಜನ್ಮ ನೀಡಿ ಸದ್ಯ ತಾಯ್ತನವನ್ನು ಎಂಜಾಯ್​ ಮಾಡುತ್ತಿದ್ದಾರೆ. ರಾಯನ್​ ಜನನದ ಬಳಿಕ ಸೋಶಿಯಲ್​ ಮೀಡಿಯಾಗಳಲ್ಲಿ ಆ್ಯಕ್ಟಿವ್​ ಆಗಿದ್ದ ಮೇಘನಾ ರಾಜ್​ ಇದೀಗ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಮತ್ತೆ ಮೇಘನಾ ರಾಜ್​ ಬಣ್ಣ ಹಚ್ಚೋದನ್ನು ನೋಡೋದು ಯಾವಾಗ ಅಂತಾ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮೇಘನಾ ಗುಡ್​ ನ್ಯೂಸ್​ ನೀಡಿದ್ದಾರೆ. ಹೌದು..! ನಟಿ ಮೇಘನಾ ಜನವರಿ 8ರಿಂದ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಸ್ಯಾಂಡಲ್​ವುಡ್​ಗೆ ನಟಿ ಮೇಘನಾ ರಾಜ್​ ಯಾವಾಗ ಕಮ್​ಬ್ಯಾಕ್​ ಮಾಡುತ್ತಾರೆ ಎಂಬ ಮಿಲಿಯನ್​ ಡಾಲರ್​ ಪ್ರಶ್ನೆ ಎಲ್ಲರಲ್ಲೂ ಇತ್ತು. ಪತಿಯ ಜನ್ಮದಿನದಂದು ಈ ಕುತೂಹಲಕ್ಕೆ ತೆರೆ ಎಳೆದಿದ್ದ ಮೇಘನಾ ರಾಜ್​ ತಾವು ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ಇದಕ್ಕೂ ಮುನ್ನವೇ ಮೇಘನಾ ರಾಜ್​ ಅಭಿಮಾನಿಗಳ ಮುಂದೆ ರಿಯಾಲಿಟಿ ಶೋವೊಂದರ ಜಡ್ಜ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.


ಯೆಸ್​..! ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್​ ಪ್ರಾಡಕ್ಷನ್​​ನಡಿಯಲ್ಲಿ ಮೂಡಿ ಬರುತ್ತಿರುವ ಡ್ಯಾನ್ಸಿಂಗ್​ ಚಾಂಪಿಯನ್​ ರಿಯಾಲಿಟಿ ಶೋನಲ್ಲಿ ನಟಿ ಮೇಘನಾ ರಾಜ್​ ನಿರ್ಣಾಯಕಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ನಟ ವಿಜಯ ರಾಘವೇಂದ್ರ, ಡ್ಯಾನ್ಸರ್​ ಮಯೂರಿ ಜೊತೆಯಲ್ಲಿ ನಟಿ ಮೇಘನಾ ರಾಜ್​ ಈ ಡ್ಯಾನ್ಸಿಂಗ್​ ರಿಯಾಲಿಟಿ ಶೋವನ್ನು ಜಡ್ಜ್​ ಮಾಡಲಿದ್ದಾರೆ.


ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿರುವ ಮೇಘನಾ ರಾಜ್​, ಯಾವಾಗಲು ಅನೇಕ ಮೊದಲುಗಳು ಇರುತ್ತವೆ. ನಾನು ಮೊದಲ ಬಾರಿಗೆ ಡ್ಯಾನ್ಸ್​ ರಿಯಾಲಿಟಿ ಶೋವೊಂದರ ಜಡ್ಜ್​ ಆಗಿದ್ದೇನೆ.ಇಂತಹದ್ದೊಂದು ಅನುಭವ ನೀಡುತ್ತಿರುವ ಕಲರ್ಸ್ ಕನ್ನಡ ವಾಹಿನಿ, ಸೃಜನ್​ ಲೋಕೇಶ್​ ಹಾಗೂ ಲೋಕೇಶ್​ ಪ್ರಾಡಕ್ಷನ್​ಗೆ ನನ್ನ ಧನ್ಯವಾದಗಳು. ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮದಲ್ಲಿ ನನ್ನನ್ನು ಸೆಲೆಬ್ರಿಟಿ ಜಡ್ಜ್​ ಆಗಿ ಬರಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಹಾಗೂ ಈ ಸ್ಪರ್ಧೆಯಲ್ಲಿರುವ ಎಲ್ಲಾ ಪ್ರತಿಭಾನ್ವಿತ ಸ್ಪರ್ಧಿಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ವಿಜಯ ರಾಘವೇಂದ್ರ ಹಾಗೂ ಮಯೂರಿ ಜೊತೆ ಸಮಯ ಕಳೆಯಲು ಸಂತೋಷವಾಗಿದೆ. ನಿರೂಪಕ ಅಕುಲ್​ ಬಾಲಾಜಿ ಕೂಡ ಸೂಪರ್​​ ಎಂದು ಬರೆದಿದ್ದಾರೆ.

actress meghana raj to be a dancing reality show judge in colors kannada

ಇದನ್ನು ಓದಿ : ek love ya movie : ರಚಿತಾ ರಾಮ್ ಬಹುನೀರಿಕ್ಷಿತ ಸಿನಿಮಾಗೆ ಶಾಕ್ : ರಿಲೀಸ್ ಡೇಟ್ ಮುಂದೂಡಿದ ಜೋಗಿ ಪ್ರೇಮ್

ಇದನ್ನೂ ಓದಿ : Netflix Kapil Sharma : ಕಾಮಿಡಿ ನೈಟ್ಸ್ ಕತೆ ನೆಟ್ ಫ್ಲಿಕ್ಸ್ ಜೊತೆ: ಬದುಕಿನ ಕತೆ ಹೇಳಲು ಬರ್ತಿದ್ದಾರೆ ಕಪಿಲ್ ‌ಶರ್ಮಾ

Comments are closed.