ಬುಧವಾರ, ಏಪ್ರಿಲ್ 30, 2025
HomeCinemaMadhuban Mein Radhika song : ಸನ್ನಿ ಕಿಚ್ಚು ಹಚ್ಚೋ ಹಾಡಿಗೆ ಬ್ರೇಕ್: ವಿವಾದಾತ್ಮಕ ಹಾಡು...

Madhuban Mein Radhika song : ಸನ್ನಿ ಕಿಚ್ಚು ಹಚ್ಚೋ ಹಾಡಿಗೆ ಬ್ರೇಕ್: ವಿವಾದಾತ್ಮಕ ಹಾಡು ಹಿಂಪಡೆದ ಸರೆಗಮ

- Advertisement -

ನಟಿ ಸನ್ನಿ ಲಿಯೊನ್ ಏನೇ ಮಾಡಿದರೂ ವಿಶೇಷವಾಗಿ ಸುದ್ದಿಯಾಗೋದು ಕಾಮನ್. ಡಬ್ಬು ರತ್ನಾನಿ ಪೋಟೋಶೂಟ್ ನಿಂದಲೂ ಸುದ್ದಿಯಾಗಿದ್ದ ( Madhuban Mein Radhika song ) ಸನ್ನಿ ಲಿಯೋನ್ ( Sunny Leone ) ಈಗ ಮಧುಬನ್ ಗೆ ರಾಧಿಕಾ ನಾಚೇ ಮ್ಯೂಸಿಕ್ ಅಲ್ಬಂನಿಂದಲೂ ವಿವಾದಕ್ಕೆ ಗುರಿಯಾಗಿದ್ದರು. ದೇವರ ಉಲ್ಲೇಖಿಸುವ ಈ ಹಾಡಿನಲ್ಲಿ ಸನ್ನಿ ಲಿಯೋನ್ ಅಶ್ಲೀಲವಾಗಿ ಮೈಬಳುಕಿಸಿದ್ದು ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಹಾಡಿನ ಸಾಹಿತ್ಯ ಬದಲಾಯಿಸುವುದಾಗಿ ಅಲ್ಬಂ ಸಂಸ್ಥೆ ( Saregama ) ಹೇಳಿದೆ.

ನಟಿ ಸನ್ನಿ ಲಿಯೋನ್ ಮಧುಬನ್ ಮೇ ರಾಧಿಕಾ ನಾಚೆ ಎಂದು ತಣ್ಣನೆಯ ನೀರಿನಲ್ಲಿ, ಪಬ್ ನಂತಹ ಹಿನ್ನೆಲೆಯಲ್ಲಿ ಮೈ ಬಳುಕಿಸಿ ನೃತ್ಯ ಮಾಡಿ ಪಡ್ಡೆ ಹೈಕಳ ಎದೆಗೆ ಕಿಚ್ಚು ಹಚ್ಚಲು ಸಿದ್ಧವಾಗಿದ್ದರು. ಇತ್ತೀಚಿಗಷ್ಟೇ ಈ ಮಾದಕ ಹಾಡಿನ ಚಿಕ್ಕ ಟ್ರೇಲರ್ ರಿಲೀಸ್ ಆಗಿತ್ತು. ಈ ಹಾಡು ನೋಡುತ್ತಿದ್ದಂತೆ ಸಾಕಷ್ಟು ಆಸ್ತಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸೋಷಿಯಲ್‌ಮೀಡಿಯಾದಲ್ಲೂ ಮಧಬನ್ ಮೇ ರಾಧಿಕಾ‌ನಾಚೇ ಸಾಹಿತ್ಯವನ್ನು ದ್ವಂದಾರ್ಥದಲ್ಲಿ ಬಳಸಿದ್ದಕ್ಕೆ ಕೆಲ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿ ಸನ್ನಿ ಲಿಯೋನ್ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಕೂಡಾ ಹಾಡಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲ ಈ ಹಾಡು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಾಡಿನ ಸಾಹಿತ್ಯ ಬದಲಾಯಿಸದಿದ್ದರೇ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದರು . ಅಲ್ಲದೇ ವಿಡಿಯೋ ಅಲ್ಬಂ ತಯಾರಿಸಿದ ಸಂಸ್ಥೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಅರೇಸ್ಟ್ ಸನ್ನಿ ಲಿಯೋನ್ ಆಭಿಯಾನ ಕೂಡ ಆರಂಭವಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಮಧುಬನ್ ಮೆ ರಾಧಿಕಾ ನಾಚೇ ಅಲ್ಬಂ ಮೇಕರ್ಸ್ ಸರಿಗಮ ಕಂಪನಿ ಜನರ ಭಾವನೆ ಹಾಗೂ ಅಭಿಪ್ರಾಯ ಗೌರವಿಸಲು ನಿರ್ಧರಿಸಿದೆ. ಸದ್ಯ ವಿವಾದಿತ ವಿಡಿಯೋ ಸಾಂಗ್ ನ್ನು ಸರಿಗಮ ಸಂಸ್ಥೆ ಹಿಂಪಡೆದಿದೆ. ಮಾತ್ರವಲ್ಲ ಮಧುಬನ್ ಹಾಡಿನ ಸಾಹಿತ್ಯ ಹಾಗೂ ಶೀರ್ಷಿಕೆಯನ್ನು ಬದಲಾಯಿಸಿ ಮೂರು ದಿನದಲ್ಲಿ ಮತ್ತೆ ಅಪ್ಲೋಡ್ ಮಾಡುವುದಾಗಿ ಟ್ವೀಟ್ ಮಾಡಿದೆ.

ಮಧುಬನ್ ಈ ಹಾಡಿನ ವಿರುದ್ಧ ಬೃಂದಾವನದ ಅರ್ಚಕರು ಸಹ ಪ್ರತಿಭಟನೆ ನಡೆಸಿದ್ದು ಹಾಡನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಈ ಹಾಟ್ ಹಾಟ್ ಹಾಡಿಗೆ ಕೃಷ್ಣನ ಹೆಸರು ಸಾಹಿತ್ಯ ಬಳಸಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಸರಿಗಮ ಸಂಸ್ಥೆ ಎಚ್ಚೆತ್ತುಕೊಂಡಿರೋದರಿಂದ ವಿವಾದವೊಂದು ಕೊನೆಗೊಂಡಂತಾಗಿದೆ.

ಇದನ್ನೂ ಓದಿ : Top 5 OTT films of this week: ಈ ವಾರ ಓಟಿಟಿಯಲ್ಲಿ ರಿಲೀಸ್ ಆದ ಟಾಪ್ 5 ಚಿತ್ರಗಳು; ನೀವು ವೀಕ್ಷಿಸಬೇಕಾದ ಸರಣಿಗಳಿವು

ಇದನ್ನೂ ಓದಿ : Adithi Prabhudeva : ಕನಸು ನನಸಾಯ್ತು ಎಂದ ಅದಿತಿ ಪ್ರಭುದೇವ: ಸದ್ದಿಲ್ಲದೇ ಮಾಡಿಕೊಂಡ್ರಾ ಎಂಗೇಜ್​ಮೆಂಟ್​..?

(Madhuban Mein Radhika song, changed lyrics and name of track’ featuring Sunny Leone Saregama)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular