Today Karnataka Night Curfew : ಇಂದಿನಿಂದ ನೈಟ್ ಕರ್ಪ್ಯೂ ಜಾರಿ: ಏನಿರುತ್ತೆ? ಏನಿರಲ್ಲ ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಒಮೈಕ್ರಾನ್ ಹಾಗೂ ಕೊರೋನಾ ನಿಯಂತ್ರಣಕ್ಕೆ ತರಲು ಹಾಗೂ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತೆ ಬಂತು ಟಫ್ ರೂಲ್ಸ್ ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಆದೇಶದಂತೆ ಇಂದಿನಿಂದ ಜನವರಿ 7 ರವರೆಗೆ ಸ್ಟ್ರಿಕ್ಟ್ ರೂಲ್ಸ್ ಜಾರಿಯಾಗಲಿದ್ದು, ಇಂದಿನಿಂದ ನೈಟ್ ಕರ್ಪ್ಯೂ (Today Karnataka Night Curfew) ಜಾರಿಗೆ ಬರಲಿದೆ. ಅಲ್ಲದೇ ಕೆಲವು ಜನಸಂದಣಿ ಸೇರುವ ಸ್ಥಳಗಳಿಗೆ 50-50 ಅಸ್ತ್ರವನ್ನು ಸರ್ಕಾರ ಪ್ರಯೋಗ ಮಾಡಿದೆ.

ಇಂದು ರಾತ್ರಿಯಿಂದ ಹತ್ತು ದಿನಗಳ ಕಾಲ ಸ್ಟ್ರಿಕ್ಟ್ ರೂಲ್ಸ್ ಪಾಲಿಸುವಂತೆ ಜನರಿಗೆ ಸರ್ಕಾರ ಸೂಚನೆ ನೀಡಿದ್ದು ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ರಾತ್ರಿ ವೇಳೆ ಮೈಮೆರೆತು ಪಾರ್ಟಿ ಮೋಜು- ಮಸ್ತಿಗೆ ಹೊರಟವರಿಗೆ ಲಾಠಿ ರುಚಿ ತೋರಿಸಲು ಪೊಲೀಸ್ ಇಲಾಖೆ ಸಿದ್ಧವಾಗಿದ್ದು ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ದಯೆ ದಾಕ್ಷಿಣ್ಯ ತೋರದೇ ಎಫ್ ಆಯ್ ಆರ್ ದಾಖಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ ಎಚ್ಚರಿಸಿದ್ದಾರೆ.

ರಾತ್ರಿ 10 ರಿಂದ ಬೆಳಗ್ಗೆ 5 ವರಿಗೆ ಎಲ್ಲವೂ ಬಂದ್ ಆಗಲಿದ್ದು ಜನರು ರಾತ್ರಿ10 ಗಂಟೆಯೊಳಗೆ ಮನೆ ಸೇರಿಕೊಳ್ಳಿ ಎಂದು ಸರ್ಕಾರ ಸೂಚಿಸಿದೆ. ಅಗತ್ಯ ಸೇವೆ, ತುರ್ತು ಸಂಚಾರ ಬಿಟ್ಟು ಇನ್ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಯುವಂತಿಲ್ಲ. ಇನ್ನು ಸರಕು ಸಾಗಾಣಿಕೆ, ಕಾಮರ್ಸ್, ಹೋಂ ಡಿಲಿವರಿಗೆ ಯಾವುದೇ ನಿರ್ಬಂಧವಿಲ್ಲ. ಬಿಎಂಟಿಸಿ, ಕೆಎಸ್ಆರ್ಟಿಸಿ ರೈಲು ಸಂಚಾರಕ್ಕಿಲ್ಲ ಅಡ್ಡಿ ಮಾಡುವಂತಿಲ್ಲ.

ಹಾಗಿದ್ದರೇ ರಾತ್ರಿ ವೇಳೆ ಸಂಚಾರಕ್ಕಿರುವ ನಿರ್ಬಂಧಗಳೇನೇನು? ಪಾಲಿಸಬೇಕಾದ ನಿಯಮಗಳೇನು ಇಲ್ಲಿದೆ ಕಂಪ್ಲೀಟ್ ಮಾಹಿತಿ.

1. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೂ ಕರ್ಫ್ಯೂ ಜಾರಿಯಲ್ಲಿದೆ.
2.ತುರ್ತು ಅಗತ್ಯಗಳನ್ನು ಹೊರತು ಪಡಿಸಿ ಉಳಿದಂತೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ
3.ರೋಗಿಗಳು ಮತ್ತು ಅವರ ಸಹಾಯಕರ ತುರ್ತು ಸಂಚಾರಕ್ಕೆ ಅವಕಾಶ
4.ಸಂಸ್ಥೆಗಳಲ್ಲಿ ರಾತ್ರಿ ಪಾಳಿಯ ಉದ್ಯೋಗಿಗಳು ಕಂಪನಿಯ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶ
5.ಇಂಟರ್‌ನೆಟ್‌ ಸೇವೆಗಳು ಮತ್ತು ದೂರಸಂಪರ್ಕ ಸೇವೆ ಕಂಪನಿಗಳ ಉದ್ಯೋಗಿಗಳು, ವಾಹನಗಳ ಸಂಚಾರಕ್ಕೆ ಅವಕಾಶ (ಐಡಿ ಕಾರ್ಡ್ ಇರಬೇಕು).
6.ವೈದ್ಯಕೀಯ, ಔಷಧ ಮಳಿಗೆಗಳು ಸೇರಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ.
7.ಬಿಎಂಟಿಸಿ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ
8.ಆಟೋ,ಟ್ಯಾಕ್ಸಿ, ಓಲಾ ಊಬರ್ ರಸ್ತೆಗೆ ಬರಲ್ಲ
9.ಬೆಂಗಳೂರಿನಲ್ಲಿ ರಾತ್ರಿ 10 ಗಂಟೆ ಆದರೆ ಎಲ್ಲಾ ಫ್ಲೈಓವರ್ ಗಳು ಬಂದ್.
ಇಷ್ಟು ಸಿದ್ಧತೆಯ ಜೊತೆಗೆ ಇಂದಿನಿಂದ ನೈಟ್ ಕರ್ಪ್ಯೂ ಆರಂಭವಾಗಲಿದ್ದು, ಜನರು ನಿಯಮ ಪಾಲಿಸುವ ಮೂಲಕ ಸಹಕರಿಸಿ ಎಂದು ಸರ್ಕಾರ ಮನವಿ‌ ಮಾಡಿದೆ.

ಇದನ್ನೂ ಓದಿ : Omicron Cases India Surge: ಭಾರತದಲ್ಲಿ ಓಮಿಕ್ರಾನ್‌ ಸ್ಪೋಟ : 578 ಪ್ರಕರಣ

ಇದನ್ನೂ ಓದಿ : Corona case to Omicron test : ಇನ್ಮುಂದೆ ಎಲ್ಲಾ ಕೊರೋನಾ ಪ್ರಕರಣವೂ ಓಮೈಕ್ರಾನ್ ಟೆಸ್ಟ್ ಗೆ: ಆರೋಗ್ಯ ಇಲಾಖೆ ಮಹತ್ವದ ಆದೇಶ

(Today Karnataka Night Curfew in the state: what service is available, what service is not available. Here’s the full info)

Comments are closed.