Outrage BJP Government : ಹೋಂ ಸ್ಟೇ, ರೆಸಾರ್ಟ್ ಗೆ ನಿರ್ಬಂಧ: ಬಿಜೆಪಿ ಕಾರ್ಯಕಾರಿಣಿಗೆ ಚಾಲನೆ: ಸರ್ಕಾರದ ವಿರುದ್ಧ ಜನರ ಆಕ್ರೋಶ

ಬೆಂಗಳೂರು : ಕೊರೋನಾ ಹಾಗೂ ಓಮೈಕ್ರಾನ್ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ಹೊಸವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ರಾಜ್ಯದಲ್ಲಿ ಇಂದಿನಿಂದ ಕಠಿಣ ನಿಯ‌ಮ ರೂಪಿಸಿದೆ.‌ ನೈಟ್ ಕರ್ಪ್ಯೂ ಜಾರಿ ಮಾಡಿದೆ. ಇದರಿಂದ ಹೊಟೇಲ್, ಬಾರ್,ಪಬ್,ರೆಸಾರ್ಟ್ ಸೇರಿದಂತೆ ದೇವಸ್ಥಾನಗಳ ಮೇಲೂ ಪ್ರಭಾವ ಬೀರಿದ್ದು ಜನರು ಮತ್ತೊಮ್ಮೆ ವ್ಯಾಪಾರ ಕುಸಿತದಿಂದ ಕಂಗಾಲಾಗಿದ್ದಾರೇ, ಆದರೆ ರಾಜ್ಯ ಕ್ಕೆ ನಿಯಮ ರೂಪಿಸಿರುವ ಸರ್ಕಾರ ಮಾತ್ರ ಪಕ್ಷದ ಕಾರ್ಯಕಾರಿಣಿಯ ಹೆಸರಿನಲ್ಲಿ ಜಾತ್ರೆಗೆ ಮುಂದಾಗಿದ್ದು ಇದಕ್ಕೆ ರಾಜ್ಯದಾದ್ಯಂತ (Outrage BJP Government ) ವಿರೋಧ ವ್ಯಕ್ತವಾಗಿದೆ.

ಹೊಸ ವರ್ಷಾಚರಣೆ ಹೆಸರಿನಲ್ಲಿ ನಗರದ ಬ್ರಿಗೇಡ್‌ ಮತ್ತು ಎಂ ಜಿ‌ ರಸ್ತೆಯಲ್ಲಿ ಜನ ಸೇರುತ್ತಾರೆ ಎಂದು ಸರ್ಕಾರ ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ಜೊತೆಗೆ ಬಹಿರಂಗ ಸಂಭ್ರಮಾಚರಣೆ ಮೇಲೂ ನಿರ್ಬಂಧ ಹೇರಿದೆ. ಇದರಿಂದ ರಾಜ್ಯದ ಮೈಸೂರು, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲಿಕರು ಕಂಗಲಾಗಿದ್ದಾರೆ. ಈಗಾಗಲೇ ಹೊಸ ವರ್ಷಾಚರಣೆಗಾಗಿ ಬುಕ್ಕಿಂಗ್ ಗಳು ಮುಗಿದಿತ್ತು.‌ಜನರು ಅಡ್ವಾನ್ಸ್ ನೀಡಿ ಬುಕ್ಕಿಂಗ್ ಮಾಡಿದ್ದರು. ಆದರೆ ಈಗ ಸರ್ಕಾರ ನಿರ್ಬಂಧ ಹೇರಿದೆ.

ಇದರಿಂದ ಅಡ್ವಾನ್ಸ್ ಪಡೆದು ಅದನ್ನು ಹೊಸ ವರ್ಷಾಚರಣೆಯ ಸಿದ್ಧತೆ, ಕೆಲಸಗಾರರ ಸಂಬಳ,ಸಾಲ ಬಾಕಿ ಹೀಗೆ ನಾನಾಕಾರಣಕ್ಕೆ ಬಳಸಿಕೊಂಡ ನಾವು ಕಂಗಲಾಗುವ ಸ್ಥಿತಿ ಎದುರಾಗಿದೆ. ಈಗ ಗ್ರಾಹಕರಿಗೆ ಅಡ್ವಾನ್ಸ್ ಹಿಂತಿರುಗಿಸಲು ನಮ್ಮ ಬಳಿ ಹಣವಿಲ್ಲ. ಸೆಲಿಬ್ರೇಶನ್ ಮಾಡಿಸಲು ಸರ್ಕಾರ ಬಿಡುತ್ತಿಲ್ಲ. ಹೀಗಾದ್ರೆ ನಮ್ಮ ಕತೆ ಏನು ಎಂದು ರೆಸಾರ್ಟಗಳ‌ ಮಾಲಿಕರು ಪ್ರಶ್ನಿಸಿದ್ದಾರೆ.

ಕಳೆದ ಎರಡು ವರ್ಷದಿಂದ ನಾವು ಅಕ್ಷರಷಃ ಕಂಗಲಾಗಿದ್ದೇವು. ಕಷ್ಟದಿಂದ ಈ ವರ್ಷ ಸ್ವಲ್ಪ ಬುಕ್ಕಿಂಗ್ ಆಗಿತ್ತು. ಆದರೆ ಈಗ ಸರ್ಕಾರ ಆ ಅಲ್ಪ ಆದಾಯಕ್ಕೂ ಕಲ್ಲು ಹಾಕಿದೆ. ಬಿಜೆಪಿ ಸರ್ಕಾರ ಈ ಕೊರೋನಾ, ಓಮೈಕ್ರಾನ್ ನಂತಹ ಆತಂಕದ ಪರಿಸ್ಥಿತಿಯಲ್ಲಿ ಹೊಸವರ್ಷಾಚರಣೆ ಸರಿಯಲ್ಲ ಎಂದು ನಿರ್ಬಂಧ ಹೇರಿದೆ. ಆದರೆ ಹುಬ್ಬಳ್ಳಿಯಲ್ಲಿ 600 ಕ್ಕೂ ಮಿಕ್ಕಿ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕಾರಿಣಿ ಮಾಡುತ್ತಿದೆ.

ಅವರ ಪಕ್ಷದ ಕಾರ್ಯಕ್ರಮದಿಂದ ರೋಗ ಹರಡೋದಿಲ್ಲ ರೆಸಾರ್ಟ್ ಮತ್ತು ಹೋಂ ಸ್ಟೇ ಗಳಿಂದ ಮಾತ್ರ ರೋಗ ಹರಡುತ್ತಾ? ಅವರಿಗೆ ಇಂಥ ಸಮಯದಲ್ಲೂ ತಮ್ಮ ಪಕ್ಷದ ಕಾರ್ಯಕ್ರಮ ಮುಖ್ಯ. ಆದರೆ ನಮಗೆ ಹೊಟ್ಟೆಪಾಡಿನ , ನಮ್ಮ ದುಡಿಮೆಯ ಕೆಲಸ‌ ಮಾಡೋಕು ಅವಕಾಶವಿಲ್ಲ.‌ಇದೆಂಥಾ ದರ್ಬಾರ ಎಂದು ಹಲವು ಹೋಂ ಸ್ಟೇ ಮಾಲಿಕರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಪ್ಯೂ, ಕಠಿಣ ರೂಲ್ಸ್ ಹೆಸರಿನಲ್ಲಿ ಜನಸಾಮಾನ್ಯರ ದುಡಿಮೆ‌ ಕಿತ್ತುಕೊಳ್ಳುತ್ತಿದ್ದು, ತಾನು ಮಾತ್ರ ಬಿಜೆಪಿ ಕಾರ್ಯಕಾರಿಣಿ ನಡೆಸೋ‌ ಮೂಲಕ ಜನಸಾಮಾನ್ಯರ ಆಕ್ರೋಶ ಹಾಗೂ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ : CM Changes Gossip : ಸಿಎಂ ಬದಲಾವಣೆ ಗಾಸಿಪ್ ಗೆ ತೆರೆ : ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಎಲೆಕ್ಷನ್ ಅಂದ್ರು ಅರುಣ ಸಿಂಗ್

ಇದನ್ನೂ ಓದಿ : Today Karnataka Night Curfew : ಇಂದಿನಿಂದ ನೈಟ್ ಕರ್ಪ್ಯೂ ಜಾರಿ: ಏನಿರುತ್ತೆ? ಏನಿರಲ್ಲ ? ಇಲ್ಲಿದೆ ಡಿಟೇಲ್ಸ್

( Home stay, resort bund, running for BJP executive: people’s outrage against BJP government)

Comments are closed.