magalu janaki : ಎರಡು ವರ್ಷಗಳ ಹಿಂದೆ ವಿಶ್ವದಲ್ಲಿ ಕೊರೊನಾ ಎಂಬ ಯಾವುದೇ ಸಾಂಕ್ರಾಮಿಕವಿಲ್ಲದ ಸಮಯದಲ್ಲಿ ಸಾಕಷ್ಟು ಧಾರವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಆದರೆ ಯಾವಾಗ ಕೊರೊನಾ ಬಂದು ಲಾಕ್ಡೌನ್ ಜಾರಿಯಾಯ್ತೋ ಬಹುತೇಕ ಧಾರವಾಹಿಗಳು ಅರ್ಧಕ್ಕೆ ನಿಂತು ಹೋಗಿದ್ದವು. ಈ ಸಾಲುಗಳಲ್ಲಿ ಬರುವ ಕನ್ನಡ ಕಿರುತೆರೆಯ ಪ್ರಸಿದ್ಧ ಧಾರವಾಹಿ ಎಂದರೆ ಅದು ಮಗಳು ಜಾನಕಿ . ಟಿ.ಎನ್ ಸೀತಾರಾಮ್ ಧಾರಾವಾಹಿಯ ಕತೆಯನ್ನು ಹೆಣೆಯುವಲ್ಲಿ ನಿಸ್ಸೀಮರು. ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬಂದ ಮಾಯಾಮೃಗ, ಮುಕ್ತ, ಮುಕ್ತ ಮುಕ್ತಗಳಂತಹ ಧಾರವಾಹಿಗಳು ಇಂದಿಗೂ ಸಹ ಕನ್ನಡ ಪ್ರೇಕ್ಷಕರ ನೆನಪಿನಲ್ಲಿ ಹಾಗೆಯೇ ಉಳಿದಿದೆ. ಇದೇ ಸಾಲಿನಲ್ಲಿದ್ದ ಧಾರವಾಹಿ ಎಂದರೆ ಮಗಳು ಜಾನಕಿ.
ಆದರೆ ಲಾಕ್ಡೌನ್ ಜಾರಿಯಾದಾಗ ಈ ಧಾರಾವಾಹಿಯನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ . ಮತ್ತೊಮ್ಮೆ ಈ ಧಾರವಾಹಿಯ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ ಎಂಬ ಸುದ್ದಿ ಹರಿದಾಡಿತ್ತಾದರೂ ಸಹ ಅದು ಕಾಲಾಂತರದಲ್ಲಿ ಕಾಪಿ ರೈಟ್ ಸಮಸ್ಯೆ ಸೇರಿದಂತೆ ಅನೇಕ ಕಾರಣಗಳಿಂದ ರಿ ಲಾಂಚ್ ಆಗಲೇ ಇಲ್ಲ. ಹೀಗಾಗಿ ಮಗಳು ಜಾನಕಿ ಒಂದು ಅಪೂರ್ಣ ಕತೆಯಾಗಿಯೇ ಉಳಿದುಬಿಟ್ಟಿತ್ತು. ಅದಾದ ಬಳಿಕ ಸೀತಾರಾಮ್ ಹೊಸ ಧಾರವಾಹಿ ನಿರ್ದೇಶನದ ಗೋಜಿಗೂ ಸಹ ಹೋಗಿರಲಿಲ್ಲ.
ಆದರೆ ಇದೀಗ ಮಗಳು ಜಾನಕಿ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಮಗಳು ಜಾನಕಿ ಧಾರವಾಹಿಯು ಮತ್ತೆ ಅಭಿಮಾನಿಗಳ ಎದುರು ಪ್ರಸಾರವಾಗಲಿದೆ. ಹಾಗೆಂದು ಈ ಧಾರವಾಹಿ ಕಿರುತೆರೆಯಲ್ಲಿ ಮರುಪ್ರಸಾರವಾಗುತ್ತಿಲ್ಲ. ಬದಲಾಗಿ ಈ ಧಾರವಾಹಿ ಎಲ್ಲಿಂದ ನಿಂತಿತ್ತೋ ಅಲ್ಲಿಂದಲೇ ಮತ್ತೆ ಮುಂದುವರಿಯಲಿದೆ. ಈಗಾಗಲೇ ಧಾರವಾಹಿ ತಂಡ ಶೂಟಿಂಗ್ ಆರಂಭಿಸಿದ್ದು ಮಗಳು ಜಾನಕಿಯ ಮುಂದುವರಿದ ಭಾಗವು ಆಗಸ್ಟ್ ತಿಂಗಳಿನಿಂದ ಅಭಿಮಾನಿಗಳ ಎದುರು ಪ್ರಸಾರವಾಗಲಿದೆ. ಆದರೆ ಸಣ್ಣ ಬದಲಾವಣೆ ಏನೆಂದರೆ ಈ ಬಾರಿ ಮಗಳು ಜಾನಕಿ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಬದಲಾಗಿ ಯುಟ್ಯೂಬ್ನಲ್ಲಿ ತೆರೆ ಕಾಣಲಿದೆ ಎಂದು ಧಾರವಾಹಿ ತಂಡ ಮಾಹಿತಿ ನೀಡಿದೆ.
ಇದನ್ನು ಓದಿ : KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive
ಇದನ್ನೂ ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್
magalu janaki is coming again : serial shooting already started