Lawrence bishop : ಭಾರಿ ಭದ್ರತೆಯಲ್ಲಿ ದೆಹಲಿಯಿಂದ ಪಂಜಾಬ್​​ಗೆ ಬಿಶ್ನೋಯಿ : 2 ಡಜನ್​ ಪೊಲೀಸ್​ ವಾಹನಗಳಿಂದ ಸೆಕ್ಯೂರಿಟಿ

Lawrence bishop : ಪಂಜಾಬ್​ನ ಪ್ರಸಿದ್ಧ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನಿಸಿರುವ ಗ್ಯಾಂಗ್​​ಸ್ಟರ್​ ಲಾರೆನ್ಸ್​ ಬಿಶ್ನೋಯಿ ಯನ್ನು ಏಳು ದಿನಗಳ ಕಾಲ ಪೊಲೀಸ್​ ಕಸ್ಟಡಿಯಲ್ಲಿ ಇರಿಸಲಾಗಿದೆ. ಸಿಧು ಮೂಸೆವಾಲಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಎದುರಿಸುತ್ತಿರುವ ಬಿಶ್ನೋಯಿಯನ್ನು ಬಾರೀ ಭದ್ರತೆಯಲ್ಲಿ ಮಾನ್ಸಾದಿಂದ ಮೊಹಾಲಿಗೆ ಕರೆದೊಯ್ಯಲಾಗಿದೆ.

ಗ್ಯಾಂಗ್​ಸ್ಟರ್​​​ ಆಗಿರುವ ಬಿಶ್ನೋಯಿಗೆ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್​ ಪೊಲೀಸರ ವಿಶೇಷ ತಂಡ ಹಾಗೂ ಗ್ಯಾಂಗ್​ಸ್ಟರ್​​ ನಿಗ್ರಹ ಕಾರ್ಯಪಡೆಗಳು ವಿಚಾರಣೆಗೆ ಒಳಪಡಿಸಿವೆ. ಮಾನ್ಸಾದಿಂದ ಹೊರಟ ಬಿಶ್ನೋಯಿಯನ್ನು ಪಂಜಾಬ್​ ಪೊಲೀಸರು ಗುಂಡು ನಿರೋಧಕ ವಾಹನದಲ್ಲಿ ಕರೆದೊಯ್ದಿದ್ದಾರೆ. ಅಲ್ಲದೇ ಬಿಶ್ನೋಯಿಗೆ 100 ಮಂದಿ ಪೊಲೀಸರಿಗೆ ಭದ್ರತೆ ನೀಡಲಾಗಿದೆ.

ಪಂಜಾಬ್​ನ ಸಿಎಂ ಭಗವಂತ್​ ಮಾನ್​ ನೀಡಿರುವ ಸೂಚನೆಯಂತೆ ಪಂಜಾಬ್​​ನ ಅಡ್ವೋಕೇಟ್​ ಜನರಲ್​​ ಅನ್ಮೋಲ್​ ರತನ್​ ಸಿಧಯಮ ಬಿಶ್ನೋಯಿಯನ್ನು ಪೊಲೀಸರ ವಶಕ್ಕೆ ನೀಡುವಂತೆ ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ಗೆ ಮನವಿ ಮಾಡಿದ್ದರು. ಈ ವೇಳೆಯಲ್ಲಿ ಬಿಶ್ನೋಯ್​ ಭದ್ರತೆಯ ಸಂಪೂರ್ಣ ಜವಾಬ್ದಾರಿ ಪಂಜಾಬ್​ ಸರ್ಕಾರ ನೋಡಿಕೊಳ್ಳಲಿದೆ ಎಂದು ಹೇಳಲಾಗಿತ್ತು . ಅದರಂತೆ ಭದ್ರತೆಯನ್ನು ನೀಡಲಾಗಿದೆ.

ದೆಹಲಿಯಿಂದ ಹೊರಟ ಬಿಶ್ನೋಯ್​ ವಾಹನಕ್ಕೆ 12 ಡಜನ್​ ವಾಹನಗಳಲ್ಲಿ 100ಕ್ಕೂ ಅಧಿಕ ಪಂಜಾಬ್​ ಪೊಲೀಸರು ಭದ್ರತೆ ನೀಡಿದ್ದಾರೆ.ಬುಲೆಟ್​ ಪ್ರೂಫ್​ ವಾಹನದಲ್ಲಿ ಬಿಶ್ನೋಯ್​​ಯನ್ನು ಪಂಜಾಬ್​ಗೆ ಕರೆತರಲಾಗಿದೆ.

ಇದನ್ನು ಓದಿ : Shopian Encounter Update : ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ, ಉಗ್ರನನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸರು

ಇದನ್ನೂ ಓದಿ : KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive

sidhu moose wala murder case gangster Lawrence bishop transported with bulletproof vehicle 100 cops

Comments are closed.