kondagaon : ಪತ್ನಿಯ ಎದುರೇ ಪತಿಯ ಅಕ್ರಮ ಸಂಬಂಧ ಎದುರು : ಯುವತಿ ಹಾಗೂ ಪತಿಯ ಬೆತ್ತಲೆ ಮೆರವಣಿಗೆ

ಛತ್ತೀಸಗಢ : kondagaon : ಅಕ್ರಮ ಸಂಬಂಧಗಳಿಗಾಗಿ ಕೊಲೆ ನಡೆದ ಅನೇಕ ಪ್ರಕರಣಗಳನ್ನು ಕೇಳಿರುತ್ತೀರಿ . ಆದರೆ ಛತ್ತೀಸಗಢದ ಕೊಂಡಗಾಂವ ಜಿಲ್ಲೆಯಲ್ಲಿ ಗೆಳತಿಯೊಂದಿಗೆ ಲವ್ವಿ ಡವ್ವಿ ಮಾಡುತ್ತಿದ್ದ ಪತಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತ್ನಿಯು ಗ್ರಾಮಸ್ಥರ ನೆರವಿನಿಂದ ಬೆತ್ತಲೆ ಮೆರವಣಿಗೆ ನಡೆಸಿದ ಘಟನೆಯೊಂದು ವರದಿಯಾಗಿದೆ. ಬರ್ಗೈ ಎಂಬ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ಯುವತಿ ಹಾಗೂ ಪತಿಯನ್ನು ಗ್ರಾಮದ ತುಂಬೆಲ್ಲ ಬೆತ್ತಲೆ ಮೆರವಣಿಗೆ ಮಾಡಿದ್ದಲ್ಲದ್ದೇ ವಿಡಿಯೋ ಚಿತ್ರೀಕರಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ.

ಬಡಗಾಯಿ ನಿವಾಸಿಯಾಗಿದ್ದ ವ್ಯಕ್ತಿಯು ವಿವಾಹಿತನಾಗಿದ್ದರೂ ಸಹ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ . ಈ ವಿಚಾರ ತಿಳಿದ ಬಳಿಕ ಪತಿಯನ್ನು ಯುವತಿಯ ಜೊತೆ ಏಕಾಂತದ ಕ್ಷಣ ಕಳೆಯುತ್ತಿದ್ದಾಗ ಪತಿಯು ರೆಡ್​ ಹ್ಯಾಂಡ್​ ಆಗಿ ಕಂಡು ಹಿಡಿದಿದ್ದಾಳೆ. ಪತಿ ಹಾಗೂ ಆತನ ಗೆಳತಿಯಿದ್ದ ಕೋಣೆಯನ್ನು ಬಂದ್​ ಮಾಡಿ ಗ್ರಾಮಸ್ಥರೆಲ್ಲರನ್ನೂ ಕರೆದು ಪತ್ನಿಯು ರಂಪಾಟ ಮಾಡಿದ್ದಾಳೆ. ಮಹಿಳೆಗೆ ಆದ ಅನ್ಯಾಯವನ್ನು ಸಹಿಸದ ಗ್ರಾಮಸ್ಥರು ಪತಿಗೆ ಶಿಕ್ಷೆ ನೀಡಲು ಮುಂದಾಗಿದ್ದಾರೆ.

ಪತಿ ಹಾಗೂ ಆತನ ಗೆಳತಿಗೆ ಥಳಿಸಿದ ಗ್ರಾಮಸ್ಥರು ಬಳಿಕ ಇಬ್ಬರನ್ನೂ ಬೆತ್ತಲು ಮಾಡಿದ್ದಾರೆ. ಬಳಿಕ ಇವರ ಕೈಗಳನ್ನು ಕಟ್ಟಿಗೆ ಕಟ್ಟಿ ಕಟ್ಟಿಗೆಯನ್ನು ಹೆಗಲ ಮೇಲೆ ಇರಿಸಿ ಗ್ರಾಮದ ಸುತ್ತೆಲ್ಲ ತಿರುಗಾಡಿಸಿದ್ದಾರೆ . ಈ ಘಟನೆ ಬಳಿಕ ಯುವತಿಯ ಪೊಲೀಸ್​ ಠಾಣೆಗೆ ತೆರಳಿ ದೂರನ್ನು ನೀಡಿದ್ದಾಳೆ. ಯುವತಿಯು ನೀಡಿದ ದೂರನ್ನು ಆಧರಿಸಿ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್

ಇದನ್ನೂ ಓದಿ : Successor of Rohit Sharma : ಈ ಹುಡುಗನಿಗೆ ಸಪೋರ್ಟ್ ಮಾಡಿದ್ರೆ ಮತ್ತೊಬ್ಬ ರೋಹಿತ್ ಶರ್ಮಾ ಆಗ್ತಾನೆ

ಇದನ್ನೂ ಓದಿ : mbbs student ends life : ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ : ಮದುವೆಯಾಗಿ ಮೂರೇ ತಿಂಗಳಿಗೆ ಆತ್ಮಹತ್ಯೆ

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

shameful act with loving couple in kondagaon

Comments are closed.