Major Sandeep Unnikrishnan : ದೇಶಭಕ್ತರಿಗೆ ಸಿಹಿಸುದ್ದಿ: ತೆರೆಗೆ ಬರಲಿದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ

ಮೇಜರ್ ಸಂದೀಪ್ ಉನ್ನಿಕೃಷ್ಣನ್ (Major Sandeep Unnikrishnan) ಅಂದ್ರೇ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.‌ಭಾರತೀಯರ ಮೈಮನಗಳು ರೋಮಾಂಚನ ಗೊಳ್ಳುವಷ್ಟು ಸಾಹಸ ಮೆರೆದು ದೇಶರಕ್ಷಣೆಯಲ್ಲಿ ಹುತಾತ್ಮರಾದ ಕಮಾಂಡರ್ ಬಲಿದಾನಕ್ಕೆ ದೇಶವೇ ಕಣ್ಣೀರು ಮಿಡಿದಿದೆ. ಈಗ ಇಂಥ ಸಾಧಕ ದೇಶಭಕ್ತರ ಮೇಲೆ ಸಿನಿಮಾ‌ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಇದು ದೇಶಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ.

ಹದಿಮೂರು ವರ್ಷಗಳ ಹಿಂದೆ ನಡೆದ ಮುಂಬೈ ತಾಜ್ ಹೊಟೇಲ್ ಮೇಲಿನ ಟೆರರ್ ಅಟ್ಯಾಕ್ ಪ್ರಕರಣದಲ್ಲಿ ಪ್ರಾಣ ತೆತ್ತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತಾಗಿ ತೆಲುಗಿನಲ್ಲಿ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗ್ತಿದೆ. ವಿಶೇಷವಾಗಿ ಸಂದೀಪ್ ಉನ್ನಿಕೃಷ್ಣನ್ ಅವರ ತ್ಯಾಗ ಬಲಿದಾನಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗ್ತಿದ್ದು ಇದರೊಂದಿಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಲೈಫ್ ಸ್ಟೋರಿಯನ್ನು ಒಳಗೊಂಡಿದೆ. ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರದಲ್ಲಿ ಅಡವಿ ಶೇಷು ನಟಿಸಿದ್ದು, ಸಂದೀಪ್ ಅವರ ತಂದೆ ಪಾತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಕೂಡ ನಟಿಸಿದ್ದಾರೆ.

ಮುಂಬೈ ತಾಜ್ ಹೊಟೇಲ್ ಹೈಜಾಕ್ ಮಾಡಿ ಜನಸಾಮಾನ್ಯರು ಹಾಗೂ ಸೈನಿಕರ ಸಾವಿಗೆ ಕಾರಣವಾದ ಈ ಘಟನೆ ನಡೆದು ಇಷ್ಟು ವರ್ಷ ಕಳೆದರೂ ಜನರು ಈ ಕಹಿ ನೋವನ್ನು ಮರೆತಿಲ್ಲ. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾದ ಈ ಘಟನೆಯನ್ನು ತೆಲುಗಿನ‌ ಮಹೇಶ್ ಬಾಬು ಪ್ರಿನ್ಸ್ ಪ್ರೊಡಕ್ಷನ್ ಹೌಸ್ ತೆರೆಗೆ ತರಲು ಸಜ್ಜಾಗಿದೆ. ಮೂಲತಃ ಕೇರಳದವರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ತಮ್ಮ ಜೀವವನ್ನು ಲೆಕ್ಕಿಸದೇ ತಾಜ್ ಹೊಟೇಲ್ ನಲ್ಲಿ ಇದ್ದವರನ್ನು ರಕ್ಷಿಸುವ ಪ್ರಯತ್ನ ಮಾಡಿ ಹುತಾತ್ಮರಾಗಿದ್ದರು.

ಕೇರಳದವರಾಗಿದ್ದರೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿದ್ದು ಅವರ ಪೋಷಕರು ಇಲ್ಲಿಯೇ ಇದ್ದಾರೆ. ಹೀಗಾಗಿ ಈ ಸಿನಿಮಾವನ್ನು ಕರ್ನಾಟಕ,ಬೆಂಗಳೂರು ಹಾಗೂ ಕೇರಳ ಸೇರಿದಂತೆ ಹಲವೆಡೆ ಚಿತ್ರಿಸಲಾಗಿದೆಯಂತೆ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂಥಹ ಸತ್ಯ ಘಟನೆ ಆಧಾರಿತ ಸಿನಿಮಾಗಳು ಇನ್ನಷ್ಟು ಮೂಡಿಬರಬೇಕು ಎಂದು ಈ ಸಿನಿಮಾ ಟ್ರೇಲರ್ ನೋಡಿದ ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈ ಹಿಂದೆ ಸಂದೀಪ್ ಉನ್ನಿಕೃಷ್ಣನ್ ಸಾಧನೆ ಹಾಗೂ ತ್ಯಾಗದ ವಿಚಾರವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕೆಂಬ ಕೂಗು ಕೂಡ ಕೇಳಿಬಂದಿತ್ತು

ಇದನ್ನೂ ಓದಿ : KGF Chapter 2 OTT : ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ : OTT ಹಕ್ಕು ದಾಖಲೆಯ ಮೊತ್ತಕ್ಕೆ ಸೇಲ್‌

ಇದನ್ನೂ ಓದಿ : ವೀಕ್ಷಣೆಯಲ್ಲೂ ದಾಖಲೆ ಬರೆದ ಕೆಜಿಎಫ್‌ : ದೇಶದಲ್ಲಿ ಕೆಜಿಎಫ್‌ ಸಿನಿಮಾ ನೋಡಿದ್ದು ಎಷ್ಟು ಕೋಟಿ ಜನರು ಗೊತ್ತಾ ?

Major Sandeep Unnikrishnan is a life based movie.

Comments are closed.