ಸೋಮವಾರ, ಏಪ್ರಿಲ್ 28, 2025
HomeCinemaMallika Sherawat : ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ, ಬಾಲಿವುಡ್ ಹೀರೋಸ್ ಅಸಲಿಯತ್ತು ಬಿಚ್ಚಿಟ್ಟ ಮಲ್ಲಿಕಾ...

Mallika Sherawat : ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ, ಬಾಲಿವುಡ್ ಹೀರೋಸ್ ಅಸಲಿಯತ್ತು ಬಿಚ್ಚಿಟ್ಟ ಮಲ್ಲಿಕಾ ಶೇರಾವತ್

- Advertisement -

ಬಾಲಿವುಡ್ ನ ಸೆಕ್ಸ್ ಬಾಂಬ್ ಅಂತಾನೇ ಕರೆಸಿಕೊಳ್ಳೋ ಮಲ್ಲಿಕಾ ಶೆರಾವತ್ (Mallika Sherawat) ಸದ್ಯ ಕೈಯಲ್ಲಿ ಸಿನಿಮಾಗಳಿಲ್ಲದೇ ಅವಕಾಶಕ್ಕಾಗಿ ಕಾದಿದ್ದಾರೆ. ಈ ಮಧ್ಯೆ ತಾವು ಅವಕಾಶಗಳಿಂದ ವಂಚಿತರಾಗಿರೋದರ ಹಿಂದಿನ ಸತ್ಯವನ್ನು ಮಲ್ಲಿಕಾ ಶರಾವತ್ ಕಹಿಯಾಗಿ ಬಿಚ್ಚಿಟ್ಟಿದ್ದು, ಎಲ್ಲ ಚಿತ್ರರಂಗದಲ್ಲೂ ಇರುವಂತ ಕಾಸ್ಟಿಂಗ್ ಕೌಚ್ ಬಾಲಿವುಡ್ ನಲ್ಲಿ ಎಷ್ಟು ತೀವ್ರ ಸ್ವರೂಪದಲ್ಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ನ ಟಾಪ್ ಹೀರೋಗಳನ್ನೇ ಟಾರ್ಗೆಟ್ ಮಾಡಿ ಮಾತನಾಡಿದ ಮಲ್ಲಿಕಾ ಶೆರಾವತ್ ಯಾವುದೇ ನಟರ ಹೆಸರನ್ನು ಪ್ರತ್ಯೇಕವಾಗಿ ಅಥವಾ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಬದಲಾಗಿ ಬಾಲಿವುಡ್ ನ ಹೀರೋಗಳು ನಟಿಮಣಿಯರನ್ನು ಹೇಗೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ ಎಂಬುದನ್ನು ಹೇಳಿದ್ದಾರೆ. ಅವಕಾಶಕ್ಕಾಗಿ ಕಾಂಪ್ರೈಸ್ ಮಾಡಿಕೊಳ್ಳುವ ಸ್ಥಿತಿ ಬಾಲಿವುಡ್ ನಲ್ಲೂ ಇದೆ ಎಂಬುದನ್ನು ಮಲ್ಲಿಕಾ ಪುನರುಚ್ಛರಿಸಿದ್ದಾರೆ.

ಮಲ್ಲಿಕಾ ಶೆರಾವತ್ ಮಾಧ್ಯಮ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡ ಈ ಸಂಗತಿಗಳು ಈಗ ಬಾಲಿವುಡ್ ನ ಕರಾಳ ಮುಖ್ಯವನ್ನು ಮತ್ತೊಮ್ಮೆ ಬಹಿರಂಗ ಪಡಿಸಿದ್ದು, ಈ ಬಗ್ಗೆ ಚರ್ಚೆ ಆರಂಭವಾಗಿದೆ. ಟಾಪ್ ಹೀರೋಗಳು , ಹಲವು ಖ್ಯಾತ ನಾಮ ನಟರು ನನ್ನೊಂದಿಗೆ ನಟಿಸಲು ಒಪ್ಪಲಿಲ್ಲ. ಯಾಕೆಂದರೇ ನಾನು ಅವರೊಂದಿಗೆ ಸಹಕರಿಸಲು ಸಿದ್ಧವಿರಲಿಲ್ಲ ಎಂದಿದ್ದಾರೆ. ಅಲ್ಲದೇ ನಾನು ವೃತ್ತಿ ಬದುಕಿನಲ್ಲಿ ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ ಅದರ ಅರ್ಥ ನಾನು ಬದುಕಿನಲ್ಲಿ ಯಾರೊಂದಿಗೆ ಬೇಕಾದರೂ ರಾಜಿ ಆಗುತ್ತೇನೆ ಎಂದರ್ಥವಲ್ಲ. ನಾನು ಯಾರ ಲೈಂಗಿಕ ಆಸಕ್ತಿಯ ವಿಷಯವಾಗಲು ಅಥವಾ ಆ ಕಾರಣಕ್ಕಾಗಿ ಅವಕಾಶ ಪಡೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಒಬ್ಬ ಹೀರೋ ನಿಮ್ಮನ್ನು ಪೋನ್ ಮಾಡಿ ಮಧ್ಯರಾತ್ರಿ ಮನೆಗೆ ಕರೆಯುತ್ತಾನೆ. ನೀವು ಆತನೊಂದಿಗೆ ಸಿನಿಮಾದಲ್ಲಿ ನಟಿಸಿರುತ್ತೀರಿ. ಅದೇ ಸರ್ಕಲ್ ನಲ್ಲಿ ಇರುತ್ತೀರಿ. ಆದರೆ ಆತನ ಕರೆಗೆ ನೀವು ಪಾಸಿಟಿವ್ ರೆಸ್ಪಾನ್ಸ್ ನೀಡದೇ ಇದ್ದರೇ, ನಿಮ್ಮನ್ನು ಆ ಸಿನಿಮಾದಿಂದಲೇ ಹೊರಗಿಡಲಾಗುತ್ತದೆ ಎಂದು ಮಲ್ಲಿಕಾ ಆರೋಪಿಸಿದ್ದು, ಈ ಮಾಹಿತಿ ಈಗ ಬಾಲಿವುಡ್ ನಲ್ಲಿ ಸೆನ್ಸೆಸನ್ ಸೃಷ್ಟಿಸಿದೆ. ಮಾತ್ರವಲ್ಲ ಆ ಹೀರೋ ಯಾರು ಎಂಬ ಚರ್ಚೆಯೂ ಜೋರಾಗಿದೆ. 2002 ರಲ್ಲಿ ಬಾಲಿವುಡ್ ಗೆ ಕಾಲಿಟ್ಟ ನಟಿ‌ಮಲ್ಲಿಕಾ ಶೆರಾವತ್ ತಮ್ಮ ಎದೆಗಾತ್ರವನ್ನು ಸರ್ಜರಿ ಮೂಲಕ ಹೆಚ್ಚಿಸಿಕೊಂಡು ಸದ್ದು ಮಾಡಿದ್ದರು. ಬಳಿಕ 2004 ರಲ್ಲಿ ನಟಿಸಿದ ಮರ್ಡರ್ ಸಿನಿಮಾ ಮಲ್ಲಿಕಾಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ : actress meghana raj : ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾದ ನಟಿ ಮೇಘನಾ ರಾಜ್​

ಇದನ್ನೂ ಓದಿ : ಪ್ರಣೀತಾ ಸುಭಾಶ್ ಫ್ಯಾಮಿಲಿಗೆ ಅರ್ನಾ ಎಂಟ್ರಿ: ಸ್ಪೆಶಲ್ ಪೋಟೋಶೂಟ್ ಮೂಲಕ ಮಗಳ ಮುಖ ರಿವೀಲ್

Mallika Sherawat says About Casting Couch calls in night

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular