Heath Davis : ಸಲಿಂಗ ಕಾಮಿಯಾಗಿದ್ದ ನ್ಯೂಜಿಲೆಂಡ್‌ನ ಈ ಟೆಸ್ಟ್ ಕ್ರಿಕೆಟರ್

ಆಕ್ಲೆಂಡ್: ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ರೋಚಕ ಕಥೆಗಳು ಕಾಣ ಸಿಗುತ್ತವೆ. ಗೆಳೆಯನ ಪತ್ನಿಯ ಜೊತೆಯೇ ಸಂಬಂಧವಿಟ್ಟುಕೊಂಡು ಕೊನೆಗೆ ಆಕೆಯನ್ನೇ ಮದುವೆಯಾದ ಕಥೆ, ಸಹ ಆಟಗಾರನ ಪ್ರೇಯಸಿಯನ್ನೇ ಪಟಾಯಿಸಿಕೊಂಡ ಕಥೆ.. ಹೀಗೆ ಸಿಗೋ ಕಥೆಗಳು ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್. ಇದು ಅಂಥದ್ದೇ ಇಂಟ್ರೆಸ್ಟಿಂಗ್ ಕಥೆ… ಇದು ನ್ಯೂಜಿಲೆಂಡ್’ನ ಟೆಸ್ಟ್ ಕ್ರಿಕೆಟಿಗನೊಬ್ಬ ಆಟದ ದಿನಗಳಲ್ಲಿ ಸಲಿಂಗಿ ಕಾಮಿಯಾಗಿದ್ದ ಕಥೆ. ತನ್ನ ಜೀವನದ ಅತ್ಯಂತ ಇಂಟ್ರೆಸ್ಟಿಂಗ್ ಕಥೆಯನ್ನು ಸ್ವತಃ ಆ ಕ್ರಿಕೆಟಿಗನೇ ಬಹಿರಂಗಗೊಳಿಸಿದ್ದಾನೆ. ಅಂದ ಹಾಗೆ ಆತನ ಹೆಸರು ಹೀಥ್ ಡೇವಿಸ್ (Heath Davis Comes Out as Gay).

1994ರಿಂದ 1997ರ ಅವಧಿಯಲ್ಲಿ ಹೀಥ್ ಡೇವಿಸ್ ನ್ಯೂಜಿಲೆಂಡ್ ಪರ 5 ಟೆಸ್ಟ್ ಹಾಗೂ 11 ಏಕದಿನ ಪಂದ್ಯಗಳನ್ನಾಡಿದ್ದರು. ಬಲಗೈ ವೇಗಿಯಾಗಿದ್ದ ಡೇವಿಸ್ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 28 ವಿಕೆಟ್’ಗಳನ್ನು ಪಡೆದಿದ್ದರು. ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ 50 ವರ್ಷದ ಹೀಥ್ ಡೇವಿಸ್ ಇದುವರೆಗೆ ರಹಸ್ಯವಾಗಿದ್ದ ತಮ್ಮ ಜೀವನದ ಅತ್ಯಂತ ಕುತೂಹಲಕಾರಿ ಗುಟ್ಟನ್ನು ಬಿಚ್ಚಿಟ್ದಿದ್ದಾರೆ. “ಈ ಗುಟ್ಟನ್ನು ನಾನು ಇಲ್ಲಿಯವರೆಗೆ ಬಚ್ಚಿಟ್ಟಿದ್ದೆ. ಅದನ್ನು ನನ್ನೊಳಗೆ ಇಟ್ಟುಕೊಂಡು ಕಾಯಿಲೆಗೊಳಗಾದ ಹಾಗೆ ಅನ್ನಿಸುತ್ತಿತ್ತು. ಆ ಗಟ್ಟನ್ನು ಈಗ ಜಗತ್ತಿಗೆ ಹೇಳಬೇಕು ಅನ್ನಿಸುತ್ತಿದೆ. ನಾನು ಸಲಿಂಗ ಕಾಮಿಯಾಗಿದ್ದೆ ಎಂಬುದು ಆಕ್ಲೆಂಡ್’ನಲ್ಲಿ ಕ್ರಿಕೆಟ್ ಆಡುತ್ತಿದ್ದ ಎಲ್ಲರಿಗೂ ಗೊತ್ತಿತ್ತು” ಎಂದು ಹೀಥ್ ಡೇವಿಸ್ ಹೇಳಿದ್ದಾರೆ.

ತಾನು ಸಲಿಂಗ ಕಾಮಿ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡ ಪುರುಷ ಕ್ರಿಕೆಟಿಗರಲ್ಲಿ ಹೀಥ್ ಡೇವಿಸ್ ಎರಡನೆಯವರು. ಇದಕ್ಕೂ ಮೊದಲು ಇಂಗ್ಲೆಂಡ್”ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸ್ಟೀವನ್ ಡೇವಿಸ್ ತಾನು ಸಲಿಂಗ ಕಾಮಿ ಎಂಬುದನ್ನು 2011ರಲ್ಲಿ ಒಪ್ಪಿಕೊಂಡಿದ್ದರು.

ಮಹಿಳಾ ಕ್ರಿಕೆಟ್’ನಲ್ಲಿ ಸಾಕಷ್ಟು ಸಲಿಂಗ ಮದುವೆಗಳೇ ನಡೆದಿವೆ. ಆಸ್ಟ್ರೇಲಿಯಾದ ಅಲೆಕ್ಸ್ ಬ್ಲ್ಯಾಕ್’ವೆಲ್ ಮತ್ತು ಇಂಗ್ಲೆಂಡ್”ನ ಲೈನ್ಸೀ ಆಸ್ಕ್ಯೂ, ನ್ಯೂಜಿಲೆಂಡ್ ಮಹಿಳಾ ತಂಡದ ಹಾಲಿ ಆಟಗಾರರಾದ ಲೀ ತಹುಹು ಮತ್ತು ಏಮಿ ಸ್ಯಾಟರ್’ವೇಟ್. ದಕ್ಷಿಣ ಆಫ್ರಿಕಾದ ತಂಡದ ಆಟಗಾರ್ತಿಯರಾದ ಡೇವ್ ವಾನ್ ನೀಕರ್ಕ್ ಮತ್ತು ಮರಿಜೇನ್ ಕಪ್ಪ್, ಆಸ್ಟ್ರೇಲಿಯಾದ ಮೆಗಾನ್ ಶುಟ್ ಮತ್ತು ಜೆಸ್ ಹೋಲಿಯೋಕ್, ಆಸ್ಟ್ರೇಲಿಯಾದ ಜೆನ್ ಜೊನಾಸೆನ್ ಮತ್ತು ಸಾರಾ ವೀರ್ನ್, ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ನೆತಾಲೀ ಸಿವರ್ ಮತ್ತು ಕ್ಯಾಥರಿನ್ ಬ್ರಂಟ್, ದಕ್ಷಿಣ ಆಫ್ರಿಕಾದ ಲಿಜೆಲ್ ಲೀ ಮತ್ತು ಜಾನ್ಜಾ ಕ್ರೋನ್ಯೆ, ಇಂಗ್ಲೆಂಡ್”ನ ಲೌರೆನ್ ವಿನ್’ಫೀಲ್ಡ್-ಹಿಲ್ ಮತ್ತು ಕೌರ್ಟ್ನೀ ಹಿಲ್, ನ್ಯೂಜಿಲೆಂಡ್’ನ ಮ್ಯಾಡ್ಡೀ ಗ್ರೀನ್ ಮತ್ತು ಲಿಜ್ ಪೆರ್ರೀ, ಆಸ್ಟ್ರೇಲಿಯಾದ ರಚೆಲ್ ಹೇಯ್ನ್ಸ್ ಮತ್ತು ಲೇ ಪೌಲ್ಟನ್, ಆಸೀಸ್’ನ ಎಲೈಸ್ ವಿಲಾನಿ ಮತ್ತು ನಿಕೋಲ್ ಬೋಲ್ಟನ್ ಮಹಿಳಾ ಕ್ರಿಕೆಟ್’ನಲ್ಲಿ ಸಲಿಂಗಿ ಮದುವೆಯಾದ ಜೋಡಿಗಳು.

ಇದನ್ನೂ ಓದಿ : India Vs West Indies T20 : ಒಂದೇ ಮ್ಯಾಚಲ್ಲಿ 3 ಅರ್ಷದೀಪ್’ಗಳು, ಇದು ಹೇಗೆ ಸಾಧ್ಯ ?

ಇದನ್ನು ಓದಿ : Shreyas Iyer : ಶ್ರೇಯಸ್ ಅಯ್ಯರ್‌ಗೆ ಪದೇ ಪದೇ ಅವಕಾಶದ ಗುಟ್ಟೇನು..? ಮುಂಬೈ ಲಾಬಿನಾ..? ದ್ರಾವಿಡ್ ಇದ್ದೂ ಹೀಗಾದ್ರೆ ಹೇಗೆ..?

This test cricketer from New Zealand Heath Davis who was gay

Comments are closed.