manoranjan ravichandran : ಕ್ರೇಜಿಸ್ಟಾರ್​ ರವಿಚಂದ್ರನ್​ ಪುತ್ರನಿಗೆ ಕಂಕಣ ಭಾಗ್ಯ : ಮುಂದಿನ ತಿಂಗಳು ಮನೋರಂಜನ್​ ಮದುವೆ

manoranjan ravichandran : ಸರಿಯಾಗಿ ಮೂರು ವರ್ಷಗಳ ಹಿಂದೆ ಕ್ರೇಜಿಸ್ಟಾರ್​ ರವಿಚಂದ್ರನ್​ ತಮ್ಮ ಪುತ್ರಿ ಗೀತಾಂಜಲಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದರು. ಗೀತಾಂಜಲಿ ವಿವಾಹದ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಕೂಡ ಆಗಿತ್ತು. ಮೂರು ವರ್ಷಗಳ ಬಳಿಕ ಇದೀಗ ಮತ್ತೆ ರವಿಚಂದ್ರನ್​ ನಿವಾಸದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ರವಿಚಂದ್ರನ್ ಪ್ರಥಮ ಪುತ್ರ ನಟ ಮನೋರಂಜನ್​ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗ್ತಿದ್ದಾರೆ ಎನ್ನಲಾಗಿದೆ.

ಹೌದು..! ಕ್ರೇಜಿಸ್ಟಾರ್​ ರವಿಚಂದ್ರನ್​ ಸದ್ಯ ತಮ್ಮ ಮೊದಲ ಪುತ್ರನ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ರವಿಚಂದ್ರನ್​ ಮನೆಗೆ ಸೊಸೆಯಾಗಿ ಬರ್ತಿರುವ ಆ ಹುಡುಗಿ ಯಾರು ಎಂಬುದನ್ನು ಕ್ರೇಜಿಸ್ಟಾರ್​ ಕುಟುಂಬ ಇನ್ನೂ ಗುಟ್ಟಾಗಿಯೇ ಇಟ್ಟಿದೆ. ಮುಂದಿನ ತಿಂಗಳು ಅಂದರೆ ಆಗಸ್ಟ್​ 21 ಹಾಗೂ 22ರಲ್ಲಿ ಮನೋರಂಜನ್​ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಆಪ್ತ ಮೂಲಗಳು ಮಾಹಿತಿಯನ್ನು ನೀಡಿದೆ.

ಮನೋರಂಜನ್​ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಕ್ರೇಜಿಸ್ಟಾರ್​ ಕುಟುಂಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರವಿಚಂದ್ರನ್​ ಕುಟುಂಬದ ಯಾವೊಬ್ಬ ಸದಸ್ಯರೂ ಕೂಡ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ. ರವಿಚಂದ್ರನ್​ ಆಪ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಮನೋರಂಜನ್​ ಭಾವಿ ಪತ್ನಿ ವೈದ್ಯಕೀಯ ವೃತ್ತಿಯವರು ಎಂದು ತಿಳಿದು ಬಂದಿದೆ.

ಕ್ರೇಜಿಸ್ಟಾರ್​ ರವಿಚಂದ್ರನ್​ 2019ರಲ್ಲಿ ತಮ್ಮ ಮಗಳು ಗೀತಾಂಜಲಿ ವಿವಾಹವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿದ್ದರು. ರಜನಿಕಾಂತ್​ ಸೇರಿದಂತೆ ದೊಡ್ಡ ದೊಡ್ಡ ತಾರಾಗಣವೇ ಗೀತಾಂಜಲಿ ವಿವಾಹಕ್ಕೆ ಆಗಮಿಸಿ ಶುಭ ಕೋರಿತ್ತು. ಹೀಗಾಗಿ ಮನೋರಂಜನ್​ ಮದುವೆ ಕೂಡ ಇದೇ ರೀತಿ ಅದ್ಧೂರಿಯಾಗಿ ನಡೆಯಬಹುದು ಎಂದು ಅಂದಾಜಿಸಬಹುದಾಗಿದೆ.

ಇದನ್ನು ಓದಿ : Virat Kohli Mets Childhood Friend : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

ಇದನ್ನೂ ಓದಿ : kgf-2 star yash : ಯಶ್​ ಮುಂದಿನ ಸಿನಿಮಾ ಕುರಿತಂತೆ ಹೊರಬಿತ್ತು ಬಹು ಮುಖ್ಯ ಮಾಹಿತಿ

manoranjan ravichandran marriage crazy star son reportedly will tie the knot soon

Comments are closed.