Martin Movie Teaser Release : ಮಾರ್ಟಿನ್‌ ಟೀಸರ್‌ ನೋಡಿ ಬಾಲಿವುಡ್‌ ಮಂದಿ ಕಂಗಲಾಗಿದ್ದು ಯಾಕೆ ?

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಕಲ ಸಿದ್ಧತೆಯನ್ನು ನಡೆಸಿದೆ. ಹೌದು ನಿನ್ನೆಯಷ್ಟೇ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾದ ಟೀಸರ್‌ (Martin Movie Teaser Release) ಬಿಡುಗಡೆಯಾಗಿದೆ. ಈಗಾಗಲೇ ಟೀಸರ್‌ ನೋಡಿದ ಹಲವು ಪರಭಾಷಾ ನಟರು ಹಾಗೂ ತಂತ್ರಜ್ಞರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ಸಿನಿಮಾಗಳು ಒಂದರ ಹಿಂದೆ ಮತ್ತೊಂದು ಎನ್ನುವಂತೆ ಬರುತ್ತಿರುವುದನ್ನು ನೋಡಿ ಬಾಲಿವುಡ್‌ ಘಟಾನುಘಟಿಗಳು ಕಂಗಲಾಗಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಕೆಜಿಎಫ್‌, ಕಾಂತಾರ ಸಿನಿಮಾಳು ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿದ್ದು, ಇನ್ನಷ್ಟೇ ಕಬ್ಜ ರಿಲೀಸ್‌ ಆಗುತ್ತಿದೆ. ಕಬ್ಜ ಸಿನಿಮಾ ನಂತರ ಮಾರ್ಟಿನ್‌ ಸಿನಿಮಾ ಬಿಡುಗಡೆಯಾಗಿ ಬಾಲಿವುಡ್‌ ಅವರ ನಿದ್ದೆಗೆಡಿಸಲಿದೆ.

ಧ್ರುವ ಸರ್ಜಾ ಹಾಗೂ ಎ.ಪಿ.ಅರ್ಜುನ್‌ ಕಾಂಬಿನೇಷನ್‌ನ ಮಾರ್ಟಿನ್‌ ಸಿನಿಮಾದ ಟೀಸರ್‌ನ್ನು ಬೆಂಗಳೂರಿನ ವೀರೇಶ್‌ ಸಿನಿಮಂದಿರದಲ್ಲಿ ಬಿಡುಗಡೆ ಮಾಡಲಾಯಿತು. ಈ ಟೀಸರ್‌ ನೋಡಲೆಂದೇ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಅಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಟೀಸರ್‌ ನೋಡುವುದಕ್ಕಾಗಿ ಅಭಿಮಾನಿಗಳು ಟೀಕೆಟ್‌ ಖರೀದಿಸಬೇಕಿತ್ತು. ಸಿನಿಮಾದ ಟೀಸರ್‌ ನೋಡಿದ ಅಭಿಮಾನಿಗಳು ಟಿಕೆಟ್‌ ಹಣಕ್ಕೆ ಮೋಸವಾಗಿಲ್ಲ ಎಂದಿದ್ದಾರೆ. ಆ ರೀತಿಯಲ್ಲಿ ಟೀಸರ್‌ ಅದ್ಭುತವಾಗಿ ಮೂಡಿ ಬಂದಿದೆ.

ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಸಾಹಸ ಪ್ರಧಾನ ಸಿನಿಮಾ ಎನ್ನುವುದನ್ನು ಪ್ರತಿ ಫೋಸ್ಟರ್‌ನಲ್ಲಿಯೂ ನಿರೂಪಿಸುತ್ತಾ ಬಂದಿದೆ. ಅದರಲ್ಲೂ ಆಶ್ಚರ್ಯ ಮೂಡಿಸುವಂತಹ ಮೈಕಟ್ಟಿನಲ್ಲಿ ಧ್ರುವ ಸರ್ಜಾ ಎದುರಾಳಿಗಳನ್ನು ಕುಟ್ಟು ಪುಡಿ ಮಾಡುವುದನ್ನು ಟೀಸರ್‌ನಲ್ಲಿ ನೋಡುವುದೇ ರೋಮಾಂಚನ. ಆ ಮಟ್ಟಿಗೆ ಸಿನಿಮಾದಲ್ಲಿ ತಮ್ಮ ಇರುವಿಕೆಯನ್ನು ನಟ ಧ್ರುವ ಸರ್ಜಾ ತೋರಿಸಿದ್ದಾರೆ. ಇನ್ನು ಸಿನಿಮಾದ ಟೀಸರ್‌ ತುಂಬಾ ನಾಯಕ ಹಾಗೂ ಎದುರಾಳಿಗಳ ಹೊಡೆದಾಟ, ಬಂದೂಕು. ಬಾಂಬುಗಳನ್ನೇ ನೋಡಬಹುದು. ಸಿನಿಮಾಕ್ಕೆ ತೂಕ ಎನ್ನಿಸುವಂತೆ ಕಾರ್‌ ಚೇಸ್‌ ದೃಶ್ಯ ಮತ್ತಷ್ಟು ತೂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ : Prajaakeeya Party : ಉತ್ತಮ ಪ್ರಜಾಕೀಯ ಪಾರ್ಟಿಗೆ ‘ಆಟೋ ರಿಕ್ಷಾ’ ಗುರುತು : ಏನಿದು ಉಪ್ಪಿದ್ದು ಲೆಕ್ಕಚಾರ

ಇದನ್ನೂ ಓದಿ : ಪುನೀತ್ ಮಾಲೆ ಹಾಕುವವರ ವಿರುದ್ಧ ನಟ ಪ್ರಥಮ್‌ ಕಿಡಿಕಾರಿದ್ಯಾಕೆ ?

ಇದನ್ನೂ ಓದಿ : Tagaru movie : ಸ್ಯಾಂಡಲ್‌ವುಡ್‌ ನಟ ಶಿವ ರಾಜ್‌ಕುಮಾರ್‌ ಅಭಿನಯದ ‘ಟಗರು’ ಸಿನಿಮಾಕ್ಕೆ 5 ವರ್ಷ ಸಂಭ್ರಮ

ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ, ಆ ಪಾತ್ರದ ಸುತ್ತ ಹೆಣೆದಿರುವ ಕಥೆ ಎನ್ನುವುದನ್ನು ಮಾರ್ಟಿನ್‌ ಟೀಸರ್‌ನಲ್ಲಿ ಕಾಣಬಹುದಾಗಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್‌ ಏನಿರಲಿದೆ ಎನ್ನುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆ ಹೇಳುವುದಾದರೇ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಇದರಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣಿಸುತ್ತಿದ್ದು, ಈ ಸಿನಿಮಾ ಪ್ಯಾನ್‌ ಇಂಡಿಯ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

Martin Movie Teaser Release: Why are Bollywood people shocked after seeing Martin Teaser?

Comments are closed.