Dhruva sarja Rayan Raj Sarja : ಸ್ಯಾಂಡಲ್ ವುಡ್ ನ ಸ್ಮೈಲಿಂಗ್ ಹೀರೋ ಚಿರು ಸರ್ಜಾ ಇನ್ನಿಲ್ಲವಾಗಿ ವರ್ಷ ಕಳೆದಿದೆ. ಈ ಮಧ್ಯೆ ಚಿರು ಹಾಗೂ ಧ್ರುವ ಸರ್ಜಾ ಕುಟುಂಬದ ಬಗ್ಗೆ ನೊರೆಂಟು ಊಹಾಪೋಹಗಳು ಸೃಷ್ಟಿಯಾದವು. ಮೇಘನಾ ಸರ್ಜಾ (Megahana Raj ) ಹಾಗೂ ರಾಯನ್ ಸರ್ಜಾ ರನ್ನು ಮನೆಯಿಂದ ದೂರ ಇಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುವಂತಹ ಮಾತೊಂದನ್ನು ಧ್ರುವ ಸರ್ಜಾ ಹೇಳಿದ್ದು, ರಾಯನ್ ಸರ್ಜಾನೇ ನಮ್ಮ ಮನೆಯ ಮಗ ಎನ್ನುವ ಮೂಲಕ ಹುಟ್ಟಿಕೊಂಡಿದ್ದ ರೂಮರ್ ಗಳಿಗೆ ಒಂದೇ ಮಾತಿನಲ್ಲಿ ಅಂತ್ಯಹಾಡಿದ್ದಾರೆ.
ಧ್ರುವ ಸರ್ಜಾ ತಮ್ಮ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಪ್ರೀತಿಸಿದ ಪ್ರೇರಣಾ ಜೊತೆ ಸಪ್ತಪದಿ ತುಳಿದ ಧ್ರುವ ಸರ್ಜಾ ಸಪ್ಟೆಂಬರ್ ಅಂತ್ಯದ ವೇಳೆಗೆ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಕುಟುಂಬದ ಬಗ್ಗೆ ಧ್ರುವಸರ್ಜಾ ತುಂಬಾ ಪ್ರೀತಿಯಿಂದ ಮಾತನಾಡಿದ್ದಾರೆ. ಸಿನಿಮಾ ಪ್ರಮೋಶನ್ ವಿಚಾರಕ್ಕೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧ್ರುವಸರ್ಜಾ ತಮಗೆ ಗಂಡು ಮಗು ಜನಿಸಿದರೇ ಬೇಸರವಾಗುತ್ತೆ ಎಂದಿದ್ದಾರೆ.
ನೀವು ಯಾವ ಮಗುವನ್ನು ನೀರಿಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಧ್ರುವ ಸರ್ಜಾ , ನಾನು ಹಾನೆಸ್ಟ್ ಆಗಿ ಹೇಳಬೇಕೆಂದರೇ ಹೆಣ್ಣುಮಗುವಿನ ನೀರಿಕ್ಷೆಯಲ್ಲಿದ್ದೇನೆ. ಮನೆಗೆ ಗಂಡು ಮಗ ರಾಯನ್ ರಾಜ್ ಸರ್ಜಾ. ಅವನೇ ನನ್ನ ಮಗ. ಕೇವಲ ಅಣ್ಣನ ಮಗ ಮಾತ್ರವಲ್ಲ ಅವನು ನಮ್ಮ ಸರ್ಜಾ ಕುಟುಂಬದ ಉತ್ತರಾಧಿಕಾರಿ. ಹೀಗಾಗಿ ಮನೆಗೆ ಒಬ್ಬ ಗಂಡು ಮಗ ಇರೋದರಿಂದ ನಾನು ಹಾಗೂ ಪ್ರೇರಣಾ ಹೆಣ್ಣು ಮಗುವನ್ನು ನೀರಿಕ್ಷೆ ಮಾಡ್ತಿದ್ದೇವೆ ಎಂದಿದ್ದಾರೆ.
ಮಗು ಬರುತ್ತೆ ಅನ್ನೋ ಖುಷಿ ಇದ್ದರೂ ಅಣ್ಣ ಹಾಗೂ ಅಜ್ಜಿಯನ್ನು ಮರೆಯೋಕೆ ಸಾಧ್ಯವೇ ಇಲ್ಲ. ಹೀಗಾಗಿ ಖುಷಿಯ ಮಧ್ಯೆಯೂ ಬೇಸರ ಇದ್ದೇ ಇದೆ ಎಂದಿದ್ದಾರೆ. ಆದರೇ ಪ್ರೇರಣಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರುತ್ತಾರೋ ಅಥವಾ ಅಜ್ಜಿ ಹುಟ್ಟಿ ಬರುತ್ತಾರೋ ಅನ್ನೋ ನೀರಿಕ್ಷೆಯಲ್ಲಿದ್ದೇವೆ ಎಂದಿದ್ದಾರೆ. ಸದ್ಯ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಸಿದ್ಧತೆ ಯಲ್ಲಿದ್ದು, ಕೆಲ ದಿನಗಳ ಹಿಂದೆಯಷ್ಟೇ ತುಂಬು ಗರ್ಭಿಣಿ ಪ್ರೇರಣಾ ಜೊತೆ ಕಲರ್ ಫುಲ್ ಪೋಟೋಶೂಟ್ ಹಾಗೂ ಅದ್ದೂರಿ ಸೀಮಂತ ನಡೆಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ದರು.
ಇದನ್ನೂ ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್
ಇದನ್ನೂ ಓದಿ : ಮೇಘನಾರಾಜ್ ಬದುಕಿನ ಮಿರಾಕಲ್ ಕ್ಷಣ…! ಪೋಟೋ ಜೊತೆ ಕುಟ್ಟಿಮಾ ಬರೆದ್ರು ಹೃದಯಸ್ಪರ್ಶಿ ಸಾಲು
Meghana Raj Chiranjeevi Sarja Son Rayan Raj Sarja is our son Says Dhruva sarja