Araga Jnanendra: ಪಿಎಫ್ಐ ಬ್ಯಾನ್ ಸ್ವಾಗತಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : Araga Jnanendra ಪಿಎಫ್ಐ ಸಂಘಟನೆಯನ್ನ ಐದು ವರ್ಷಗಳವರೆಗೆ ಬ್ಯಾನ್ ಮಾಡಿರೋ ಕೇಂದ್ರದ ಆದೇಶವನ್ನ ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ನೆರವು ನೀಡುತ್ತಿರುವ ಕೋಮುವಾದಿ ಪಿಎಫ್‌ಐ ಮತ್ತು ಅದರ ಇತರ ಅಂಗಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಅಂತಾ ಸಚಿವರು ತಿಳಿಸಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ಕೇಂದ್ರ ನಿರ್ಧಾರವನ್ನ ಸ್ವಾಗತಿಸಿದ್ದಾರೆ. ಪಿಎಫ್ಐ ಸಂಘಟನೆಯಿಂದಾಗಿ ರಾಷ್ಟ್ರ ವಿಭಜಿಸುವ ಹುನ್ನಾರ, ಹಿಂಸಾಚಾರ ನಡೆಯುತ್ತಿದ್ವು. ಹೀಗಾಗಿ ಐದು ವರ್ಷಗಳವರೆಗೆ ಪಿಎಫ್ಐ ನಿಷೇಧಿಸಿ ಹೊರಡಿಸಿರೋ ಅಧಿಸೂಚನೆಯನ್ನ ಸ್ವಾಗತಿಸೋದಾಗಿ ಅರುಣ್ ಸಿಂಗ್ ಹೇಳಿದ್ದಾರೆ.

ಪಿಎಫ್ಐ ವಿರುದ್ಧ ಸಮರ ಸಾರಿರೋ ಕೇಂದ್ರ ಸರ್ಕಾರ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಪಿಎಫ್ಐ ಸಂಘಟನೆಯನ್ನ ಐದು ವರ್ಷಗಳ ಕಾಲ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ PFI ಮತ್ತದರ ಅಂಗಸಂಸ್ಥೆಗಳನ್ನ ಕಾನೂನು ಬಾಹಿರ ಎಂದು ಆದೇಶಿಸಿ ಮುಂದಿನ ಐದು ವರ್ಷಗಳವರೆಗೆ ನಿಷೇಧಿಸಲಾಗಿದೆ.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಜತೆಗೆ ಅದರ ಇತರೆ ಸಂಘಟನೆಗಳಾದ ರೆಹಾಬ್‌ ಇಂಡಿಯಾ ಫೌಂಡೇಷನ್‌ (RIF), ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (CFI), ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (AIIC), ನ್ಯಾಷನಲ್‌ ಕಾನ್‌ಫೆಡರೇಷನ್‌ ಆಪ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಜೇಷನ್‌ (NCRHO), ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌, ಜೂನಿಯರ್‌ ಫ್ರಂಟ್‌, ಎಂಪವರ್‌ ಇಂಡಿಯಾ ಫೌಂಡೇಷನ್‌ ಮತ್ತು ರೆಹಾಬ್‌ ಫೌಂಡೇಷನ್‌, ಜತೆಗೆ ಕೇರಳದಲ್ಲಿ ಪಿಎಫ್‌ಐ ಜತೆಗೆ ನಂಟು ಹೊಂದಿರುವ ಇತರೆ ಸಂಘಟನೆಗಳಿಗೆ ನಿಷೇಧ ಹೇರಲಾಗಿದೆ. ಪಿಎಫ್​ಐ ಸಂಘಟನೆ ಮೇಲೆ ಸೆಪ್ಟೆಂಬರ್ 22ರಂದು NIA  ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ ದಾಳಿ ಮಾಡಿತ್ತು. ಈ ವೇಳೆ ನೂರಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು. ಕರ್ನಾಟಕ ಸೇರಿದಂತೆ ದೇಶದ 93 ಸ್ಥಳಗಳಲ್ಲಿ ಎನ್​ಐಎ ಈ ಕಾರ್ಯಾಚರಣೆ ನಡೆಸಿತ್ತು. ಎನ್​ಐಎ ದಾಳಿ ಬೆನ್ನಲ್ಲೇ ಮಂಗಳವಾರ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳ ಪೊಲೀಸರು ಪಿಎಫ್ಐ ಮತ್ತು SDPI ಸಂಘಟನೆ ಮೇಲೆ ದಾಳಿ ನಡೆಸಿದ್ರು. ಈ ಕಾರ್ಯಾಚರಣೆ ವೇಳೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಮತ್ತು ಗಲಭೆ, ದೊಂಬಿ ಸೇರಿದಂತೆ ಪ್ರಚೋದನಕಾರಿ ಕೃತ್ಯ ಎಸಗುವ ಆರೋಪದಡಿ ಮುಂಜಾಗ್ರತ ಕ್ರಮವಾಗಿ ಪಿಎಫ್​ಐ, SDPI ಮುಖಂಡರನ್ನು ವಶಕ್ಕೆ ಪಡೆದಿರುವುದಾಗಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್​ಕುಮಾರ್ ತಿಳಿಸಿದ್ರು.  ಇದೀಗ ಕೇಂದ್ರ ಸರ್ಕಾರ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನ ಬ್ಯಾನ್ ಮಾಡಿ ಆದೇಶಿಸಿದೆ.

ಇದನ್ನೂ ಓದಿ : PFI Ban : ಭಾರತದಲ್ಲಿ 5 ವರ್ಷ PFI ನಿಷೇಧ :ಕೇಂದ್ರ ಸರಕಾರದ ಅಧಿಸೂಚನೆ

Araga Jnanendra Central Government declares PFI and its associates as an unlawful association

Comments are closed.