Siddaramaiah :ಬಿಜೆಪಿಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ ನಾನು ಹೆದರುವ ಮಗ ಅಲ್ಲ ಎಂದ ಸಿದ್ದರಾಮಯ್ಯ

ಬಾಗಲಕೋಟೆ : Siddaramaiah : ಮಾಜಿ ಸಿ.ಎಂ ಸಿದ್ದರಾಮಯ್ಯ ಆಗಾಗ ಬಿಜೆಪಿ ನಾಯಕರ ವಿರುದ್ಧ ಸೆಡ್ಡು ಹೊಡೆಯುತ್ತಿರುತ್ತಾರೆ‌‌. ಇದೀಗ ಬಿಜೆಪಿಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ. ನಾನು ಹೆದರುವ ಮಗ ಅಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ ಮತ್ತೆ 40% ಸರ್ಕಾರದ ವಿಚಾರವಾಗಿ ಬಿಜೆಪಿಯವರ ವಿರುದ್ದ ಗುಡುಗಿದ್ದಾರೆ‌. ಮಾತೆತ್ತಿದರೆ ಸಿ.ಎಂ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಗೋವಿಂದ ಕಾರಜೋಳ, ಆರ್.ಅಶೋಕ, ಸಿ.ಸಿ. ಪಾಟೀಲ್ ದಾಖಲಾತಿ ಅಂತಾರೆ. ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಅಂದ್ರು ದಾಖಲೆ ಕೊಟ್ಟಿದ್ದಾರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯಾರೆ ಎಂಜಲು ತಿಂದರೂ ಅದು ಎಂಜಲೇ ಆಗುತ್ತದೆ. ಯಾರೆ ಲಂಚ ಹೊಡೆದರೂ ಅದು ಲಂಚ ಆಗುತ್ತದೆ. ಅದು ಯಾವ ಜಾತಿಯವರಾಗಲಿ ಅಷ್ಟೇ ಎಂದು ಸಿದ್ದರಾಮಯ್ಯ ಇದೇ ಸಂದರ್ಭ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ನನ್ನನ್ನು ಅಟ್ಯಾಕ್ ಮಾಡಿದ್ರು. ಆದ್ರೆ ಮೋರ್ ಸ್ಟ್ರಾಂಗ್ ಆದಂತೆ ಮೋರ್ ಎನೆಮಿಗಳು ಹುಟ್ಟಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನನ್ ಕಂಡ್ರೆ ಬಿಜೆಪಿಯವರಿಗೆ ಭಯ ಎಂದ ಸಿದ್ದು ನನ್ ಕಂಡ್ರೆ ರಣಹದ್ದುಗಳ ತರಹ ಬೀಳ್ತಾರೆ‌ ಎಂದರು. ಆದ್ರೆ ನಾನು ಹೆದರುವ ಮಗ ಅಲ್ಲ ಎಂದು‌ ಸೆಡ್ಡು ಹೊಡೆಯುವ ರೀತಿ ಭರ್ಜರಿ ಭಾಷಣ ಮಾಡಿದರು. ಈ ರೀತಿ ಸಿದ್ದರಾಮಯ್ಯ ಭಾಷಣ ಮಾಡುವ ಮೂಲಕ ಬಿಜೆಪಿಯವರು ಏನೇ ಮಾಡಿದರು ನಾನು ಹೆದರಲ್ಲ ಎಂಬ ಸಂದೇಶವನ್ನು ಸಿದ್ದರಾಮಯ್ಯ ಇದೇ ವೇದಿಕೆಯ ಮೂಲಕ ರವಾನಿಸಿದರು. ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮುಖಂಡರು ಜಿದ್ದಿಗೆ ಬಿದ್ದವರಂತೆ ಭಾಷಣ, ಹೇಳಿಕೆಯನ್ನು ನೀಡುತ್ತಿದ್ದು ಈ ವಾಕ್ಸಮರಗಳು ಇನ್ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.ಬಿಜೆಪಿ ಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ ನಾನು ಹೆದರುವ ಮಗ ಅಲ್ಲ ಎಂದ ಸಿದ್ದರಾಮಯ್ಯ

ಮಾಜಿ ಸಿ.ಎಂ ಸಿದ್ದರಾಮಯ್ಯ ಆಗಾಗ ಬಿಜೆಪಿ ನಾಯಕರ ವಿರುದ್ಧ ಸೆಡ್ಡು ಹೊಡೆಯುತ್ತಿರುತ್ತಾರೆ‌‌. ಇದೀಗ ಬಿಜೆಪಿಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ. ನಾನು ಹೆದರುವ ಮಗ ಅಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ ಮತ್ತೆ 40% ಸರ್ಕಾರದ ವಿಚಾರವಾಗಿ ಬಿಜೆಪಿಯವರ ವಿರುದ್ದ ಗುಡುಗಿದ್ದಾರೆ‌. ಮಾತೆತ್ತಿದರೆ ಸಿ.ಎಂ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಗೋವಿಂದ ಕಾರಜೋಳ, ಆರ್.ಅಶೋಕ, ಸಿ.ಸಿ. ಪಾಟೀಲ್ ದಾಖಲಾತಿ ಅಂತಾರೆ. ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಅಂದ್ರು ದಾಖಲೆ ಕೊಟ್ಟಿದ್ದಾರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯಾರೆ ಎಂಜಲು ತಿಂದರೂ ಅದು ಎಂಜಲೇ ಆಗುತ್ತದೆ. ಯಾರೆ ಲಂಚ ಹೊಡೆದರೂ ಅದು ಲಂಚ ಆಗುತ್ತದೆ. ಅದು ಯಾವ ಜಾತಿಯವರಾಗಲಿ ಅಷ್ಟೇ ಎಂದು ಸಿದ್ದರಾಮಯ್ಯ ಇದೇ ಸಂದರ್ಭ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ನನ್ನನ್ನು ಅಟ್ಯಾಕ್ ಮಾಡಿದ್ರು. ಆದ್ರೆ ಮೋರ್ ಸ್ಟ್ರಾಂಗ್ ಆದಂತೆ ಮೋರ್ ಎನೆಮಿಗಳು ಹುಟ್ಟಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನನ್ ಕಂಡ್ರೆ ಬಿಜೆಪಿಯವರಿಗೆ ಭಯ ಎಂದ ಸಿದ್ದು ನನ್ ಕಂಡ್ರೆ ರಣಹದ್ದುಗಳ ತರಹ ಬೀಳ್ತಾರೆ‌ ಎಂದರು. ಆದ್ರೆ ನಾನು ಹೆದರುವ ಮಗ ಅಲ್ಲ ಎಂದು‌ ಸೆಡ್ಡು ಹೊಡೆಯುವ ರೀತಿ ಭರ್ಜರಿ ಭಾಷಣ ಮಾಡಿದರು. ಈ ರೀತಿ ಸಿದ್ದರಾಮಯ್ಯ ಭಾಷಣ ಮಾಡುವ ಮೂಲಕ ಬಿಜೆಪಿಯವರು ಏನೇ ಮಾಡಿದರು ನಾನು ಹೆದರಲ್ಲ ಎಂಬ ಸಂದೇಶವನ್ನು ಸಿದ್ದರಾಮಯ್ಯ ಇದೇ ವೇದಿಕೆಯ ಮೂಲಕ ರವಾನಿಸಿದರು. ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮುಖಂಡರು ಜಿದ್ದಿಗೆ ಬಿದ್ದವರಂತೆ ಭಾಷಣ, ಹೇಳಿಕೆಯನ್ನು ನೀಡುತ್ತಿದ್ದು ಈ ವಾಕ್ಸಮರಗಳು ಇನ್ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.

ಇದನ್ನು ಓದಿ : Dhruva sarja Rayan Raj Sarja : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ

Leader of Opposition Siddaramaiah is outraged against BJP

Comments are closed.