ಸೋಮವಾರ, ಏಪ್ರಿಲ್ 28, 2025
HomeBreakingMegha Shetty : ಜೊತೆಜೊತೆಯಲಿಯಿಂದ ದೂರವಾಗಿದ್ಯಾಕೆ ಮೇಘಾ ಶೆಟ್ಟಿ : 100 ನೇ ಎಪಿಸೋಡ್‌...

Megha Shetty : ಜೊತೆಜೊತೆಯಲಿಯಿಂದ ದೂರವಾಗಿದ್ಯಾಕೆ ಮೇಘಾ ಶೆಟ್ಟಿ : 100 ನೇ ಎಪಿಸೋಡ್‌ ನಂತ್ರ ಆಗಿದ್ದೇನು..?

- Advertisement -

ಮೇಘಾ ಶೆಟ್ಟಿ.. ಅಪ್ಪಟ ಕರಾವಳಿಯ ಬೆಡಗಿ. ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಮೇಘಾ ಹಾಗೂ ಅನಿರುದ್ದ ಜೋಡಿ ಬೇರೆಯಾಗಿದ್ದಾರೆ. ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಕಿರುತೆರೆ ಲೋಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದ ಧಾರವಾಹಿ. ಖ್ಯಾತ ನಟ ಅನಿರುದ್ದ ಅವರಿಂದಾಗಿ ಆರಂಭದಲ್ಲಿ ಸಖತ್‌ ಸುದ್ದಿ ಮಾಡಿದ್ದ ಜೊತೆ ಜೊತೆಯಲಿ ನಂತರದಲ್ಲಿ ಅನಿರುದ್ದ ಹಾಗೂ ಮೇಘಾ ಶೆಟ್ಟಿ ಅವರ ಅಭಿನಯಕ್ಕೆ ಮನಸೋತು ಹೋಗಿತ್ತು.

ಖ್ಯಾತ ನಿರ್ದೇಶಕ ಆರೂರು ಜಗದೀಶ್‌ ಅವರು ಜೊತೆ ಜೊತೆಯಲಿ ಧಾರವಾಹಿಯನ್ನು ಅಷ್ಟೇ ಚೆನ್ನಾಗಿ ಕಟ್ಟಿಕೊಟ್ಟಿದ್ದರು. ಕಿರುತೆರೆಯ ಮಟ್ಟಿಗೆ ಜೊತೆ ಜೊತೆಯಲಿ ಹಲವು ಹೊಸತುಗಳನ್ನು ಹುಟ್ಟುಹಾಕಿದೆ. ದಿನೇ ದಿನೇ ಪ್ರೇಕ್ಷಕರಿಗೆ ಬೇಸರವಾಗದಂತೆ ಪ್ರಸಾರವಾಗುತ್ತಿದ್ದ ಧಾರವಾಹಿಯಿಂದ ಅನುಸಿರಿಮನೆ ಖ್ಯಾತಿ ಯ ಮೇಘಾ ಶೆಟ್ಟಿ ಹೊರ ನಡೆದಿದ್ದಾರೆ. ಮೇಘಾ ಶೆಟ್ಟಿ ಧಾರವಾಹಿಯಿಂದ ದೂರವಾಗಿರೋ ಕುರಿತು ಹಲವು ಕಾರಣಗಳು ಕೇಳಿಬರುತ್ತಿದೆ.

ಮೇಘಾ ಶೆಟ್ಟಿ ಜೊತೆ ಜೊತೆಯಲ್ಲಿ ತಂಡದಿಂದ ಹೊರ ನಡೆದಿರುವುದರ ಕುರಿತು ಖುದ್ದು ಚಾನೆಲ್‌ ಹೆಡ್‌ ರಾಘವೇಂದ್ರ ಹುಣಸೂರು ಹಾಗೂ ಧಾರವಾಹಿ ನಿರ್ದೇಶಕ ಆರೂರು ಜಗದೀಶ್‌ ಅವರೇ ದೃಢಪಡಿಸಿ ದ್ದಾರೆ. ಮೂಲಗಳ ಪ್ರಕಾರ ಮೇಘಾ ಶೆಟ್ಟಿ ಅಭಿನಯದ ಹತ್ತು ಸಂಚಿಕೆಗಳು ಪ್ರಸಾರವಾಗಲಿದೆಯಂತೆ. ನಂತರದಲ್ಲಿ ಹೊಸ ನಾಯಕಿಗಾಗಿ ಧಾರವಾಹಿ ತಂಡ ಹುಡುಕಾಟವನ್ನು ನಡೆಸುತ್ತಿದೆ.

ಜೊತೆಜೊತೆಯಲಿ ನೂರು ಸಂಚಿಕೆಗಳನ್ನು ಪೂರೈಸುವವರೆಗೂ ಎಲ್ಲವೂ ಸರಿಯಾಗಿಯೇ ಇತ್ತಂತೆ. ಆದ್ರೆ ನೂರನೇ ಸಂಚಿಕೆ ಪೂರೈಸುತ್ತಲೇ ಮೇಘಾ ಶೆಟ್ಟಿ ಸಿನಿಮಾ ಆಫರ್‌ ನಿಂದಾಗಿ ಬ್ಯುಸಿಯಾಗಿದ್ದರಂತೆ. ಅಲ್ಲದೇ ಸರಿಯಾದ ಸಮಯಕ್ಕೆ ಶೂಟಿಂಗ್‌ಗೆ ಬರ್ತಾ ಇರಲಿಲ್ಲ. ಜೊತೆಗೆ ಪೇಮೆಂಟ್‌ ವಿಚಾರದಲ್ಲಿಯೂ ಕಿರಿಕ್‌ ಆಗಿದೆ ಅನ್ನೋ ಕಾರಣಗಳು ಕೇಳಿಬಂದಿದೆ.

ಇನ್ನೊಂದೆಡೆ ಮೇಘಾ ಶೆಟ್ಟಿ ಅವರು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಟ್ರಿಬಲ್‌ ರೈಡಿಂಗ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾ ಆಫರ್‌ ಮೇಘಾ ಶೆಟ್ಟಿ ಅವರನ್ನು ಹುಡುಕಿ ಬರ್ತಿದೆ ಅಂತೆ ಹೀಗಾಗಿಯೇ ಅವರು ಧಾರವಾಹಿಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.

ಐಎಎಸ್‌ ಅಧಿಕಾರಿಯಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದಿದ್ದ ಕರಾವಳಿಯ ಬೆಡಗಿ ಇಂದು ಕಿರುತೆರೆಯ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ. ಜೊತೆ ಜೊತೆಯಲಿ ಸಿರೀಯಲ್‌ಗೆ ಹೊಸ ಮುಖದ ಹುಡುಕಾಟದಲ್ಲಿದ್ದಾಗ ಆರೂರು ಜಗದೀಶ್‌ ಅವರ ಕಣ್ಣಿಗೆ ಬಿದ್ದಿದ್ದ ಮೇಘಾ ಶೆಟ್ಟಿ ಅವರಿಗೆ ನಟನೆ ಗೊತ್ತೇ ಇರಲಿಲ್ಲ.

ತಮ್ಮದೇ ಶೈಲಿಯಲ್ಲಿ ಪಳಗಿಸಿದ ಆರೂರು ಜಗದೀಶ್‌ ಅವರು ಇಂದು ಮೇಘಾ ಶೆಟ್ಟಿಯವರ ಖ್ಯಾತಿಯನ್ನು ಹೆಚ್ಚಿಸಿದ್ದಾರೆ. ಆದ್ರೆ ಪ್ರೇಕ್ಷಕರ ಮನಗೆದ್ದಿದ್ದ ಧಾರವಾಹಿಯಿಂದ ಮೇಘಾ ಶೆಟ್ಟಿ ಹೊರ ನಡೆಯುತ್ತಿರೋದು ಸಹಜವಾಗಿ ಪ್ರೇಕ್ಷಕರಿಗೆ ಬೇಸರವನ್ನುಂಟು ಮಾಡಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular