ಕಿರುತೆರೆಯಲ್ಲಿ ತಮ್ಮ ಕೆರಿಯರ್ ಆರಂಭಿಸಿರೋ ನಟಿ ಮೇಘನಾ ರಾಜ್ ಈಗ ಮತ್ತೊಮ್ಮೆ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮನೆ ಮನ ತಟ್ಟಿದ್ದಾರೆ. ಗೋಲ್ಡನ್ ಗ್ಯಾಂಗ್ ತಾರೆಯರ ಗೆಳೆಯರನ್ನು, ಗೆಳತಿಯರನ್ನು ಪರಚಿಸುವ ಶೋ. ಈ ಶೋದಲ್ಲಿ ಈಗಾಗಲೇ ಹಲವು ನಟರು ತಮ್ಮ ಕಚಗುಳಿ ಇಡೋ ಸ್ನೇಹಿತರ ತಂಡದ ಜೊತೆ ಬಂದು ಹೋಗಿದ್ದಾರೆ. ಈಗ ಈ ಶೋದಲ್ಲಿ ನಟಿ ಮೇಘನಾ ಹಾಗೂ ಅವರ ಆತ್ಮೀಯ ಸ್ನೇಹಿತರ ತಂಡ ಬಂದಿದ್ದು ಇಲ್ಲೂ ಚಿರುವನ್ನು ನೆನೆದ ಮೇಘನಾ, (Meghana Raj Golden Gang ) ಚಿರು ತನಗೆ ಕೊಟ್ಟು ಹೋದ ವಿಶೇಷ ಗಿಫ್ಟ್ ಬಗ್ಗೆ ರಿವೀಲ್ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡೋ ಈ ಶೋದಲ್ಲಿ ಗೆಳೆಯರ ತಂಡವೊಂದು ಭಾಗವಹಿಸೋದು ಮಾತು,ಹರಟೆ ಡ್ಯಾನ್ಸ್ ಎಲ್ಲವೂ ಇರುತ್ತೆ. ಈ ವಾರ ಶೋದಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಸ್ನೇಹಿತರ ತಂಡ ಪಾಲ್ಗೊಂಡಿದೆ. ಚಿರು ಸ್ನೇಹಿತರಾದ ಮೇಘನಾ ಸರ್ಜಾ, ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್, ಪನ್ನಗಾಭರಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಈ ಎಪಿಸೋಡ್ ಸಖತ್ ಫನ್ನಿ ಹಾಗೂ ಅಷ್ಟೇ ಎಮೋಶನಲ್ ಆಗಿ ಕೂಡ ಮೂಡಿಬಂದಿದೆ.
ಈಗಾಗಲೇ ಶೋದ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಪ್ರೋಮೋದಲ್ಲಿ ಚಿರು, ಭಾವಚಿತ್ರದ ಜೊತೆ ಮೇಘನಾ ಹಾಗೂ ಚಿರು, ಪನ್ನಗಾಭರಣ, ಮೇಘನಾ ಸ್ನೇಹಕ್ಕೆ ಮುನ್ನುಡಿ ಬರೆದ ಸುಂದರ ರಾಜ್ ಹಾಗೂ ನಾಗಾಭರಣ ಕೂಡಾ ಶೋದಲ್ಲಿ ಪಾಲ್ಗೊಂಡಿದ್ದಾರೆ. ಶೋದಲ್ಲಿ ಲವಲವಿಕೆ ಯಿಂದಲೇ ಪಾಲ್ಗೊಂಡಿರೋ ಮೇಘನಾ ರಾಜ್, ಕೊನೆಯಲ್ಲಿ ಚಿರು ನೆನೆದು ಭಾವುಕರಾಗಿದ್ದು, ಇಷ್ಟು ದೊಡ್ಡ ಕುಟುಂಬವನ್ನು ನನಗಾಗಿ ಕಟ್ಟಿಕೊಟ್ಟು ಹೋಗಿದ್ದಾರೆ ಚಿರಂಜೀವಿ ಸರ್ಜಾ ಎಂದು ತನ್ನ ಸ್ನೇಹಿತರ ಗ್ಯಾಂಗ್ ಬಗ್ಗೆ ಮೇಘನಾ ಮಾತನಾಡಿದ್ದಾರೆ.
ಅಲ್ಲದೇ ಶೋದಲ್ಲಿ ಭಾವುಕರಾದ ಪ್ರಜ್ಚಲ್ ದೇವರಾಜ್ ಕೂಡ ಚಿರು ನೆನೆದು, ಚಿರನಂಥ ಸ್ನೇಹಿತ ಹಾಗೂ ಆ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಈ ಕಿರಿಯರ ಸ್ನೇಹಕ್ಕೆ ಮುನ್ನುಡಿ ಬರೆದ ಸುಂದರರಾಜ್ ಹಾಗೂ ನಾಗಾಭರಣ ಕೂಡ ಶೋದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲ ಶೋದಲ್ಲಿ ಮಾತನಾಡಿದ ಸುಂದರರಾಜ್, ಚಿರು ಯಾವಾಗಲೂ ಮೇಘನಾಗೆ ಹೇಳ್ತಿದ್ದ ನನ್ನ ಸ್ನೇಹಿತರು ಎಂದೂ ನಿನ್ನ ಕೈಬಿಡಲ್ಲ ಅಂತ ಎಂದು ಅಳಿಯನನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಾರದ ಗೋಲ್ಡನ್ ಗ್ಯಾಂಗ್ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದ್ದು ಪ್ರೋಮೋದಿಂದಲೇ ಗಮನ ಸೆಳೆದಿದೆ.
ಇದನ್ನೂ ಓದಿ : ಮೊಟ್ಟೆ ಬಾಸ್ ಇನ್ ಹೌಸ್: ಹೊಸ ಪೋಸ್ಟ್ ಗೆ ಮೇಘನಾರಾಜ್ ಟ್ಯಾಗ್ ಲೈನ್
ಇದನ್ನೂ ಓದಿ : Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್
( Meghana Raj in Golden Gang, Chiranjeevi Sarja who Share Donate special gift for actress)