Hijab Row Explainer: ಮುಖ ಮುಚ್ಚುವ ಉಡುಪುಗಳನ್ನು ನಿಷೇಧಿಸಿದ ದೇಶಗಳಿವು

ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಒಂದು ಘಟನೆ-ಪ್ರತಿಭಟನೆ-ಹೋರಾಟ ಇಡೀ ದೇಶವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.  ಹಿಜಾಬ್‌ ವಿವಾದಕ್ಕೆ (Hijab Row) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ (Karnataka High Court) ತ್ರಿ ಸದಸ್ಯ ಪೀಠ ವಿಚಾರಣೆಯನ್ನು(Hijab controversy hearing postponement) ಸೋಮವಾರಕ್ಕೆ ಮುಂದೂಡಿದೆ. ಮುಂದಿನ ಆದೇಶದವರೆಗೆ ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು (Hijab and Saffron Shawl Controversy) ಸೇರಿದಂತೆ ಯಾವುದೇ ಧಾರ್ಮಿಕ ಉಡುಗೆಗಳನ್ನು ತೊಡುವಂತಿಲ್ಲಎಂದು ಮೌಖಿಕ ಸೂಚನೆ (Hijab controversy hearing postponement) ನೀಡಿದೆ ಹೈಕೋರ್ಟ್. ಸದ್ಯ ಭಯಂಕರ ಚರ್ಚೆ ಮತ್ತು ವಿವಾದದ ಸ್ವರೂಪದಲ್ಲಿರುವ ಮುಸ್ಲಿಂ ಮಹಿಳೆಯರು ಧರಿಸುವ ಉಡುಪು ಹಿಜಾಬ್. ಇದು ಹಲವು ಬಣ್ಣಗಳಲ್ಲಿರುತ್ತದೆ ಮತ್ತು ವಿವಿಧ ತೆರನಾದ ಬಟ್ಟೆಗಳಿಂದ ರೂಪಿಸಲಾಗುವ ಉಡುಪಾಗಿದೆ. ಹಿಜಾಬ್ ಮಹಿಳೆಯರ ಕೂದಲು ಮತ್ತು ಕುತ್ತಿಗೆಯನ್ನು ಮುಚ್ಚುತ್ತದೆ. ಆದರೆ ಮುಖವನ್ನು ಮುಚ್ಚುವುದಿಲ್ಲ. ಆದರೆ ಹಿಜಾಬ್‌ನ್ನು ಕೆಲವು ದೇಶಗಳಲ್ಲಿ (Countries banned Face Veils) ನಿಷೇಧಿಸಲಾಗಿದೆ. ಹಾಗಾದರೆ ಆ ದೇಶಗಳು (Hijab Row Explainer) ಯಾವುವು ಎಂಬ ಮಾಹಿತಿ ಇಲ್ಲಿದೆ.

ಫ್ರೆಂಚ್ ಸರ್ಕಾರವು 2010 ರಲ್ಲಿ ಪೂರ್ಣ ಮುಖದ ಮುಸುಕುಗಳನ್ನು ನಿಷೇಧಿಸುವ ಕಾಯಿದೆಯನ್ನು ಅಂಗೀಕರಿಸಿತು. ಇದು ಮಹಿಳೆಯರನ್ನು ರಕ್ಷಿಸುತ್ತದೆ ಮತ್ತು ಅವರಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ ಎಂದು ಪ್ರತಿಪಾದಿಸಿತು. ಈ ಕಾಯಿದೆಯು ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಮುಚ್ಚುವ ಬುರ್ಖಾಗಳೊಂದಿಗೆ ಮುಖವಾಡಗಳು, ಹೆಲ್ಮೆಟ್‌ಗಳು, ಬಾಲಾಕ್ಲಾವಾಗಳು, ನಿಖಾಬ್‌ಗಳು ಮತ್ತು ಮುಖವನ್ನು ಮುಚ್ಚುವ ಇತರ ಮುಸುಕುಗಳನ್ನು ಒಳಗೊಂಡಂತೆ ಮುಖವನ್ನು ಮುಚ್ಚುವ ಶಿರಸ್ತ್ರಾಣಗಳನ್ನು ಧರಿಸುವುದನ್ನು ನಿಷೇಧಿಸಿದೆ. ಇಂಡಿಯಾ ಟುಡೇ ಪ್ರಕಾರ, ಮುಸುಕು ಧರಿಸುವುದರಿಂದ 150 ಯೂರೋ ದಂಡವನ್ನೂ ವಿಧಿಸಬಹುದಾಗಿದೆ. 

2017 ರಲ್ಲಿ, ಧಾರ್ಮಿಕ ಉಗ್ರವಾದದ ವಿರುದ್ಧದ ಶಿಸ್ತುಕ್ರಮದ ಭಾಗವಾಗಿ ಚೀನಾವು ಮುಸ್ಲಿಂ ಪ್ರಾಬಲ್ಯದ ಕ್ಸಿನ್‌ಜಿಯಾನ್ ಪ್ರಾಂತ್ಯದಲ್ಲಿ ಬುರ್ಖಾ, ಮುಸುಕು ಮತ್ತು ಉದ್ದನೆಯ ಗಡ್ಡವನ್ನು ನಿಷೇಧಿಸಿತು. ತಲೆಗೆ ಶಿರವಸ್ತ್ರ, ಮುಸುಕು, ಬುರ್ಖಾಗಳು ಅಥವಾ ಅರ್ಧಚಂದ್ರ ಮತ್ತು ನಕ್ಷತ್ರ ಮತ್ತು ಉದ್ದನೆಯ ಗಡ್ಡವಿರುವ ಬಟ್ಟೆಗಳನ್ನು ಧರಿಸಿರುವ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಡೆನ್ಮಾರ್ಕ್ 2018 ರಲ್ಲಿ ಮುಸುಕು ಧರಿಸುವುದನ್ನು ನಿಷೇಧಿಸಿತು ಮತ್ತು ಅಪರಾಧಿಗಳಿಗೆ 1,000 ಡ್ಯಾನಿಶ್ ಕ್ರೌನ್‌ (160 ಯುರೋಗಳು) ದಂಡವನ್ನು ವಿಧಿಸುವ ಆದೇಶ ಹೊರಡಿಸಿತು. ಈ ಆದೇಶವನ್ನು ನಾಲ್ಕು ಬಾರಿ ಉಲ್ಲಂಘಿಸಿದರೆ ದಂಡವನ್ನೂ ಹೆಚ್ಚಿಸುವುದಾಗಿ ತಿಳಿಸಿತು.

2017 ರಲ್ಲಿ ಜರ್ಮನ್ ಸಂಸತ್ತು ನ್ಯಾಯಾಧೀಶರು, ನಾಗರಿಕ ಸೇವೆಯಲ್ಲಿ ನಿರತರಾದವರು ಮತ್ತು ದೇಶದ ಸೈನಿಕರಿಗೆ ಮುಖ ಮುಚ್ಚುವ ಮುಸುಕುಗಳನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿತು.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ರಿಪಬ್ಲಿಕ್ ಆಫ್ ದಿ ಕಾಂಗೋ (Congo-Brazzaville) 2015 ರಲ್ಲಿ ಬುರ್ಖಾ ನಿಷೇಧವನ್ನು ಜಾರಿಗೆ ತಂದ ಆಫ್ರಿಕಾದ ಮೊದಲ ದೇಶವಾಗಿದೆ. ಬಿಬಿಸಿ ಪ್ರಕಾರ, ಕೆಲವು ಮಹಿಳೆಯರು ಭಯೋತ್ಪಾದಕ ಅಪರಾಧಗಳನ್ನು ಮಾಡಲು ಮುಸುಕಿನ ವೇಷವನ್ನು ಬಳಸಿದ್ದರು.

ಸಾರ್ವಜನಿಕವಾಗಿ ಪೂರ್ಣ ಮುಖವನ್ನು ಮುಚ್ಚುವ ಮುಸುಕುಗಳನ್ನು ಧರಿಸುವುದು ನೆದರ್ಲ್ಯಾಂಡ್‌ನಲ್ಲಿ ಕನಿಷ್ಠ 150 ಯುರೋಗಳಷ್ಟು ದಂಡ ವಿಧಿಸಲು ಕಾರಣವಾಗಬಹುದು. ಈ ನಿಷೇಧವು ಆಗಸ್ಟ್ 2019 ರಲ್ಲಿ ಜಾರಿಗೆ ಬಂದಿದೆ. ಇದು ಬುರ್ಖಾ, ಮುಸುಕು, ಪೂರ್ಣ ಮುಖದ ಹೆಲ್ಮೆಟ್‌ಗಳಿಗೆ ಅನ್ವಯಿಸುತ್ತದೆ. ಈ ವಿಷಯದ ಬಗ್ಗೆ 14 ವರ್ಷಗಳ ಚರ್ಚೆಯ ನಂತರ ಈ ಆದೇಶ ಜಾರಿಯಾಗಿದೆ.

ಇಂಡಿಯಾ ಟುಡೇ  ವರದಿ ಮಾಡಿರುವ ಪ್ರಕಾರ, ಬೆಲ್ಜಿಯಂ ಸಂಪೂರ್ಣ ಮುಖವನ್ನು ಮುಚ್ಚುವ ಉಡುಪುಗಳು, ಬುರ್ಖಾ, ನಿಖಾಬ್‌ ಅಥವಾ ಮುಖದ ಕೆಳಗಿನ ಅರ್ಧವನ್ನು ಮುಚ್ಚುವ ಯಾವುದೇ ಉಡುಪುಗಳನ್ನು ನಿಷೇಧಿಸಿತು.

(ಈ ಸುದ್ದಿಯನ್ನು ವಿವಿಧ ಪ್ರಸಿದ್ಧ ಮತ್ತು ಮುಖ್ಯವಾಹಿನಿಯ ಆಂಗ್ಲ ಸುದ್ದಿ ಜಾಲತಾಣಗಳ ವರದಿ ಆಧರಿಸಿ ಮಾಹಿತಿಯ ಉದ್ದೇಶದಿಂದ ಪ್ರಕಟಿಸಲಾಗಿದೆ. ಸುದ್ದಿಯ ಯಾವುದೇ ಪರಿಣಾಮಗಳಿಗೆ ನ್ಯೂಸ್‌ನೆಕ್ಸ್ಟ್‌ಲೈವ್ ಕನ್ನಡ ಬಾಧ್ಯಸ್ಥನಾಗಿರುವುದಿಲ್ಲ)

ಇದನ್ನೂ ಓದಿ: Hijab controversy hearing postponement : ಹಿಜಾಬ್‌ ವಿವಾದ ವಿಚಾರಣೆ ಮುಂದೂಡಿಕೆ : ಅಂತಿಮ ಆದೇಶದವರೆಗೂ ಹಿಜಾಬ್‌, ಕೇಸರಿ ಧರಿಸುವಂತಿಲ್ಲ

Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Hijab Row Explainer Countries banned Face Veils)

Comments are closed.