ಭಾನುವಾರ, ಜೂನ್ 15, 2025
HomeCinemaMeghana Raj Sarja body shaming : ಮೇಘನಾ ರಾಜ್ ಸರ್ಜಾಗೂ ಎದುರಾಗಿತ್ತು ಬಾಡಿ ಶೇಮಿಂಗ್...

Meghana Raj Sarja body shaming : ಮೇಘನಾ ರಾಜ್ ಸರ್ಜಾಗೂ ಎದುರಾಗಿತ್ತು ಬಾಡಿ ಶೇಮಿಂಗ್ : ನೋವು ತೋಡಿಕೊಂಡ ಬಹುಭಾಷಾ ನಟಿ

- Advertisement -

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಎಲ್ಲ ಸಿನಿಮಾ ರಂಗದಲ್ಲೂ ನಟ-ನಟಿಯರಿಗೆ ಕೆರಿಯರ್ ಕಂಡುಕೊಳ್ಳೋದು ಸುಲಭದ ಮಾತಲ್ಲ. ಸಿನಿಮಾ ಕಲಾವಿದರ ಕುಟುಂಬದವರಿಗೂ ಈ ಹೋರಾಟ ತಪ್ಪಿದ್ದಲ್ಲ. ಅದರಲ್ಲೂ ನಟಿಯರಿಗೆ ಬಣ್ಣದ ಲೋಕ ಒಡ್ಡುವ ಸವಾಲು ನೊರೆಂಟು. ಹೀಗೆ ಸಿನಿ ಕುಟುಂಬದಿಂದಲೇ ಬಂದು ಬಾಡಿ ಶೇಮಿಂಗ್ ಗೆ ಒಳಗಾಗಿದ್ದ ನಟಿ ಮೇಘನಾ (Meghana Raj Sarja body shaming) ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ನಟಿ ಮೇಘನಾ ಸರ್ಜಾ ವೈಯಕ್ತಿಕ ಬದುಕಿನಂತೆ ತಮ್ಮ ಕೆರಿಯರ್ ನಲ್ಲೂ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ‌. ತಮ್ಮ ಸಿನಿ ಜರ್ನಿಯ ಬಗ್ಗೆ ಮಾಧ್ಯಮವೊಂದರ ಜೊತೆ ಮುಕ್ತವಾಗಿ ಮಾತನಾಡಿದ ನಟಿ ಮೇಘನಾ ಸರ್ಜಾ ತಾವು ಬಣ್ಣದ ಲೋಕದಲ್ಲಿ ಕೆರಿಯರ್ ಆರಂಭಿಸಿದಾಗ ಎದುರಿಸಿದ ಬಾಡಿ ಶೇಮಿಂಗ್ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ನಾನು ಸಿನಿಕುಟುಂಬದಿಂದಲೇ ಬಂದವಳು. ನೋಡಲು ಮುದ್ದು ಮುದ್ದಾಗಿದ್ದೆ. ಎಲ್ಲರೂ ನನ್ನನ್ನು ರಾಜಕುಮಾರಿಯಂತೆ ಕಂಡರು. ಆದರೆ ನಾನು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ನನ್ನ ದೇಹದ ತೂಕ, ಬಣ್ಣ, ಸ್ಕಿನ್ ಹಾಗೂ ಕೂದಲು ಸೇರಿದಂತೆ ಎಲ್ಲದಕ್ಕೂ ನನ್ನನ್ನು ಟೀಕಿಸಿದರು ಎಂದಿದ್ದಾರೆ. ನನಗೆ ನೆನಪಿರುವಂತೆ ನನ್ನ ಮೊದಲ ಪೋಟೋಶೂಟ್ ಬಳಿಕ ನಾನು ಅಕ್ಷರಷಃ ಕಣ್ಣೀರಿಟ್ಟಿದ್ದೆ.ಯಾಕೆಂದರೇ ನನ್ನ ಕೂದಲು, ಚರ್ಮ ಹಾಗೂ ಬಣ್ಣದ ಕಾರಣಕ್ಕೆ ನಾನು ಅಷ್ಟೊಂದು ಟೀಕೆಗಳನ್ನು ಎದುರಿಸಿದೆ ಎಂದು ಮೇಘನಾ ನೆನಪಿಸಿಕೊಂಡಿದ್ದಾರೆ.

ಮಾತ್ರವಲ್ಲ ತಮಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಮಲೆಯಾಳಂ ಮತ್ತು ತಮಿಳು ಇಂಡಸ್ಟ್ರಿಗೆ ತೆರಳಿದ್ದೆ. ಆದರೆ ಅದಕ್ಕೂ ಕೂಡ ನಾನು ಟೀಕೆಗಳನ್ನು ಎದುರಿಸಬೇಕಾಯಿತು.‌ನೋಡಿ ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆಗೆ ಹೋಗ್ತಿದ್ದಾರೆ. ಹಾಗಿದ್ದರೇ ಅವರಿಗೆ ತಮ್ಮ ಭಾಷೆಯ ಮೇಲೆ ಪ್ರೀತಿ ಇಲ್ಲವೇ ಎಂದೆಲ್ಲ ಟೀಕಿಸಿದರು ಎಂದಿದ್ದಾರೆ. ಅಲ್ಲದೇ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮುಂಬೈ ಬೆಡಗಿಯರ ಹಾವಳಿ ಜೋರಿತ್ತು. ಅವರ ಫಿಟ್ ಆ್ಯಂಡ್ ಫೈನ್ ಮೈಕಟ್ಟಿನ ಕಾರಣಕ್ಕೆ ಸೌತ್ ನ ನಟಿಮಣಿಯರು ಅವಕಾಶವೆ ಎಲ್ಲದಂತೆ ಕಾದಿದ್ದ ಸ್ಥಿತಿಯೂ ನಿರ್ಮಾಣವಾಗಿತ್ತು ಎಂದಿದ್ದಾರೆ.

ಈಗ ಎಲ್ಲ ಟೀಕೆಗಳನ್ನು ಎದುರಿಸಿ ಬಂದಿರೋ ಮೇಘನಾ ಮತ್ತೆ ಕನ್ನಡದಲ್ಲಿ ಸಿನಿಮಾವೊಂದಕ್ಕೆ ನಾಯಕಿಯಾಗಿದ್ದು, ಚಿರು ಕನಸಿನಂತೆ ಪ್ರೊಡಕ್ಷನ್ ಹೌಸ್ ಆರಂಭಿಸಿರೋ ಪನ್ನಗಾ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮ್ಮ ನೋವಿನ ವೈಯಕ್ತಿಕ ಬದುಕಿನ ಬಗ್ಗೆಯೂ ಮಾತನಾಡಿದ ಮೇಘನಾ ಒಂದು ಕಾಲದಲ್ಲಿ ನಾನು ಜೋರಾಗಿ ನಗುವುದಕ್ಕೂ ಯೋಚ್ನೇ ಮಾಡುತ್ತಿದ್ದೇ ಎಂದಿದ್ದಾರೆ.

ಇದನ್ನೂ ಓದಿ : Meghana Raj special Demand : ಮಗನಿಗಾಗಿ ಚಿರುವನ್ನು ವಾಪಸ್ ಕೊಡಿ: ಮೇಘನಾ ರಾಜ್ ವಿಶೇಷ ಬೇಡಿಕೆ ಸಲ್ಲಿಸಿದ್ದ್ಯಾರಿಗೆ ಗೊತ್ತಾ?!

ಇದನ್ನೂ ಓದಿ : ಚಿರು ಮಾತು ಮೀರಲಾರೇ….! ದಿಟ್ಟ ನಿರ್ಧಾರ ಪ್ರಕಟಿಸಿದ ಮೇಘನಾ ರಾಜ್…!!

Meghana Raj Sarja also faced body shaming Sandalwood Famous actress who showed pain

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular