Family problem: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ವಿಜಯಪುರ: (Family problem) ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಉಕ್ಕಲಿ ಗ್ರಾಮದಲ್ಲಿ ನಡೆದಿದೆ. ರೇಣುಕಾ ಅಮೀನಪ್ಪ ಕೋನಿನ್(26 ವರ್ಷ), ಯಲ್ಲವ್ವ(2 ವರ್ಷ), ಅಮೃತಾ(1 ವರ್ಷ) ಮೃತ ದುರ್ದೈವಿಗಳು.

ಉಕ್ಕಲಿ ಗ್ರಾಮದ ಬಳಿಯ ಮುಳವಾಡ ಏತ ನೀರಾವರಿ ಕಾಲುವೆಗೆ ಹಾರಿ ಇಬ್ಬರು ಹೆಣ್ಣು ಮಕ್ಕಳ ಜೊತೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ(Family problem)ದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮಾಹಿತಿಗಳ ಪ್ರಕಾರ ರೇಣುಕಾ ಎರಡು ದಿನಗಳ ಹಿಂದೆ ಪತಿಯ ಜೊತೆಗೆ ಜಗಳವಾಡಿಕೊಂಡು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಬಿಟ್ಟು ಬಂದಿದ್ದರು. ಹೀಗಾಗಿ ಗಂಡನ ಮನೆಯವರು ಆಕೆ ಹಾಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಹುಡುಕಾಟ ನಡೆಸಿದರು ರೇಣುಕಾ ಹಾಗೂ ಮಕ್ಕಳು ಸಿಗದ ಹಿನ್ನಲೆಯಲ್ಲಿ ಪತಿ ಮನೆಯವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸ್‌ ಠಾಣೆಗೆ ದೂರು ನೀಡಿದ ಹಿನ್ನಲೆ ತನಿಖೆ ನಡೆಯುವಾಗ ಮುಳವಾಡದ ಏತ ನೀರಾವರಿ ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗಳ ಶವ ಪತ್ತೆಯಾಗಿದೆ. ಇನ್ನೋರ್ವ ಹೆಣ್ಣು ಮಗಳ ಶವಕ್ಕಾಗಿ ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ : Cyber Crime: ಅಪ್ಪನ 2 ಲಕ್ಷ ರೂ. ಸಾಲ ತೀರಿಸಲು ಮಗಳು ತೆಗೆದುಕೊಂಡಿದ್ದು ‘ಆ’ ಒಂದು ದಿಟ್ಟ ನಿರ್ಧಾರ; ಆಮೇಲೆ ಏನಾಯ್ತು..?

ಇದನ್ನೂ ಓದಿ : Mangaluru crime: ಮಂಗಳೂರಿನ ಲಾಡ್ಜ್ ನಲ್ಲಿ ನಗ್ನ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ

ಇದನ್ನೂ ಓದಿ : Hassan Murder Case : ಗಂಡನ ಬಿಟ್ಟು ಪ್ರಿಯಕರನೊಂದಿಗೆ ಅಕ್ರಮ ಸಂಬಂಧ : ಕಬ್ಬಿನಗದ್ದೆಯಲ್ಲಿ ಶವ ಪತ್ತೆ

(Family problem) The incident in which the mother committed suicide by jumping into the canal with her two daughters took place in Ukkali village of Basavanbagewadi in Vijayapur district. Renuka Aminappa Konin (26 years), Yallavva (2 years), Amrita (1 year) are the unfortunate dead.

Comments are closed.