ನಟಿ ಮೇಘನಾರಾಜ್‌ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್‌ವುಡ್‌ ನಟಿ ಮುದ್ದು ಮೊಗದ ಚಲುವೆ ಮೇಘನಾರಾಜ್‌ ಸರ್ಜಾ ಅವರಿಗೆ ಇಂದು (ಏಪ್ರಿಲ್‌ 3) ಹುಟ್ಟುಹಬ್ಬದ (Meghana Raj Sarja birthday) ಸಂಭ್ರಮ. ಚಿರಂಜೀವಿ ಸರ್ಜಾ ಪತ್ನಿಗೆ ಇದೀಗ ಹುಟ್ಟುಹಬ್ಬದ ಶುಭಾಶಯಗಳೇ ಹರಿದು ಬರುತ್ತಿದೆ. ಕನ್ನಡ ಮಾತ್ರವಲ್ಲ ಮಲಯಾಲಂ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿರುವ ಮೇಘನಾ ರಾಜ್‌ ಸರ್ಜಾ ಮತ್ತೆ ಸಿನಿಮಾ ರಂಗಕ್ಕೆ ಮರಳಿದ್ದು, ಸದ್ಯದಲ್ಲಿಯೇ ಹೊಸ ಸಿನಿಮಾ ತೆರೆಗೆ ಬರಲಿದೆ.

ಕಳೆದ ಎರಡು ವರ್ಷಗಳ ಹಿಂದೆ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ಮೇಘನಾ ರಾಜ್‌ ಸರ್ಜಾ ನಂತರದಲ್ಲಿ ರಾಯನ್‌ ಸರ್ಜಾಗೆ ಜನ್ಮ ನೀಡಿದ್ದರು. ಮಗನಿಗಾಗಿ ತನ್ನೆಲ್ಲಾ ನೋವನ್ನು ಮರೆತು ಪತಿಯನ್ನು ಕಳೆದುಕೊಂಡು ಧೈರ್ಯಗುಂದುವ ಅದೆಷ್ಟೋ ಮಹಿಳೆಯರಿಗೆ ಮೇಘನಾ ರಾಜ್‌ ಸರ್ಜಾ ಮಾದರಿಯಾಗಿದ್ದಾರೆ.

ನಟಿ ಮೇಘನಾ ರಾಜ್‌ ಸರ್ಜಾ ಅತ್ಯಂತ ಧೈರ್ಯಶಾಲಿ. ಮಗನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿದ್ದಾರೆ. ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ಮೇಘನಾರಾಜ್‌ ಸರ್ಜಾ ತನ್ನ ಮಗನಿಗಾಗಿ ಯೂಟ್ಯೂಬ್‌ ಚಾನೆಲ್‌ವೊಂದನ್ನು ಆರಂಭಿಸಿದ್ದರು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜೀವನದ ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಸುಂದರ್‌ ರಾಜ್‌ ಹಾಗೂ ಪ್ರಮಿಳಾ ಜೋಶಾಯ್‌ ಅವರ ಪುತ್ರಿಯಾಗಿರುವ ಮೇಘನಾ ರಾಜ್‌ 2009 ರಲ್ಲಿ ಬೆಂಡು ಅಪ್ಪಾರಾವ್ RMP ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿರಿಸಿದ್ದಾರೆ. ರಾಜಾಹುಲಿ, ಬಹುಪರಾಕ್‌, ಆಟಗಾರ, ವಂಶೋದ್ದಾರಕ, ಲಕ್ಷ್ಮಣ, ಭುಜಂಗ, ಕುರುಕ್ಷೇತ್ರ, ಇರುವುದೆಲ್ಲವ ಬಿಟ್ಟು, ಎಂಎಂಸಿಎಚ್‌, ಜಿಂದಾ, ನೂರೊಂದು ನೆನಪು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಚೆಂಡು, ಪುಂಡಾ, ಕಾಧೋಲ್‌ ಸೊಲ್ಲಾ ವಂದೇನ್‌, ಯಕ್ಷಯಮ್‌ ಎನ್ಶುನುಮ್‌, ಅಗಸ್ಟ್‌ ೧೫, ರಘುವಿಂಟೆ ಸ್ವಾಂತಂ ರಶಿಯಾ, ಉಯರ್ಥಿರು ೪೨೦. ಪಚುವಮ್‌ ಕೋವಲನಮ್‌, ಬ್ಯೂಟಿಪುಲ್‌, ಪೊನ್ನು ಕೊಂಡೊರು ಅಲ್ರೂಪಾಮ್‌, ನಂದಾ ನಂದಿತಾ, ಅಚಂತೆ ಅನ್‌ಮಕ್ಸಲ್‌, ಲಕ್ಕಿ ಸೇರಿದಂತೆ ಹಲವು ತಮಿಳು, ಮಲಯಾಲಂ ಹಾಗೂ ತೆಲುಗು ಸಿನಿಮಾಗಳಲ್ಲಿ ಮೇಘನಾರಾಜ್‌ ಸರ್ಜಾ ನಟಿಸಿದ್ದಾರೆ.

ಇದನ್ನೂ ಓದಿ : ಸದ್ದಿಲ್ಲದೇ ಹೊಸ ಸಿನಿಮಾಗೆ ಸಜ್ಜಾದ ನಟಿ: ಮೇಘನಾ ನ್ಯೂ ಲುಕ್ ರಿವೀಲ್

ಇದನ್ನೂ ಓದಿ : ಮೊದಲ ವಾರದಲ್ಲೇ ಒಂದು ಕೋಟಿಯಷ್ಟು ಕಲೆಕ್ಷನ್‌ ಕಂಡ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ

ಸದ್ಯ ತತ್ಸಮ ತದ್ಬವ್ ಸಿನಿಮಾ ಶೂಟಿಂಗ್ ಮುಗಿಸಿರೋ ಮೇಘನಾ ಸರ್ಜಾ ಸದ್ಯದಲ್ಲೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಲಿದ್ದಾರಂತೆ. ‌ಇದುವರೆಗೂ ಕಾಣಿಸಿಕೊಳ್ಳದ ವಿಭಿನ್ನ ಬಾಂಡ್ ಪಾತ್ರ ವೊಂದರಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ‌ ಈ ಹೊಸ ಲುಕ್ ಗೆ ಮೇಘನಾ ಬದಲಾಗಿದ್ದಾರಂತೆ. ತತ್ಸಮ ತದ್ಬವ ಸಿನಿಮಾದ‌ ಮೂಲಕ ಮೇಘನಾ ಸರ್ಜಾ ತಮ್ಮ ತಾಯ್ತನದ ಬ್ರೇಕ್ ಬಳಿಕ ಸ್ಯಾಂಡಲ್ ವುಡ್ ಗೆ ರ್ರೀ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮೇಘನಾ ಹಲವು ರಿಯಾಲಿಟಿ ಶೋ ಹಾಗೂ ಜಾಹೀರಾತಿಗಾಗಿ ಬಣ್ಣ ಹಚ್ಚಿದ್ದರು.

Meghana Raj Sarja birthday : Happy birthday to actress Meghana Raj Sarja

Comments are closed.