ಭಾನುವಾರ, ಏಪ್ರಿಲ್ 27, 2025
HomeCinemaMeghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್‌ ಸರ್ಜಾ : ಅಭಿಮಾನಿಗಳಿಗೆ...

Meghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್‌ ಸರ್ಜಾ : ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಕುಟ್ಟಿಮಾ

- Advertisement -

Meghana Raj Sarja good news : ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರೋ ಸ್ಯಾಂಡಲ್ ವುಡ್ ಸ್ಟಾರ್ ಮೇಘನಾ ಸರ್ಜಾ ಸದ್ಯ ಕ್ಯಾಲಿಪೋರ್ನಿಯಾಗೆ ಹಾರಿದ್ದಾರೆ. ಕ್ಯಾಲಿಪೋರ್ನಿಯಾ ಬೀದಿಗಳಲ್ಲಿ ಮೇಘನಾ ಸರ್ಜಾ ಸೋಲೋ ಟ್ರಿಪ್ ಎಂಜಾಯ್ ಮಾಡ್ತಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡಿದ್ದಾರೆ.

ಹೌದು ಕಳೆದ ಎರಡು ವರ್ಷಗಳಿಂದ ಕಣ್ಣೀರಿನ ಕಾಲುವೆಯಲ್ಲೇ ಮುಳುಗಿ ಹೋಗಿದ್ದ ನಟಿ ಮೇಘನಾ ಸರ್ಜಾ ಈಗ ದುಃಖದಿಂದ ಹೊರಬಂದು ಸಹಜ ಜೀವನ ಆರಂಭಿಸಿದ್ದಾರೆ. ಮುದ್ದಾದ ಮಗನ ಪಾಲನೆ ಹಾಗೂ ಚಿರು ಕನಸುಗಳನ್ನು ಈಡೇರಿಸೋದಿಕ್ಕೇ ತಮ್ಮ ಬದುಕನ್ನು ಮೀಸಲಾಗಿಟ್ಟಿರೋ ಮೇಘನಾ ರಾಜ್ ಸರ್ಜಾ, ಚಿರು ಆಸೆಯಂತೆ ಮತ್ತೆ ನಟನೆಗೂ ಮರಳಿದ್ದಾರೆ.

ಚಿರು ಲೈಫ್ ನಲ್ಲಿ ನಮಗೆ ಇಷ್ಟವಾದ ಕೆಲಸವನ್ನು ಎಂದೂ ಬಿಡಬಾರದು. ಮಾಡುತ್ತಲೇ ಇರಬೇಕು ಎಂದಿದ್ದರಂತೆ. ಹೀಗಾಗಿ ಚಿರು ಅಗಲಿಕೆಯ ನೋವಿನ ನಡುವೆಯೂ ಮೇಘನಾ ರಾಜ್ ಸರ್ಜಾ ವೃತ್ತಿ ಬದುಕಿಗೆ ಮರಳಿದ್ದಾರೆ. ಸದ್ಯ ಮೇಘನಾ ಕನ್ನಡ ಕಿರಿತೆರೆಉತ ರಿಯಾಲಿಟಿ ಶೋಗಳ ನಿರ್ಣಾಯಕರ ಸ್ಥಾನದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು, ಇದರೊಂದಿಗೆ ನಿರ್ದೇಶಕ ಪನ್ನಗಾಭರಣ ಜೊತೆ ಹೊಸ ಚಿತ್ರವೊಂದಕ್ಕೆ ಸಹಿಹಾಕಿದ್ದಾರೆ‌

ಸದ್ಯದಲ್ಲೇ ಈ ಸಿನಿಮಾ ಸೆಟ್ಟೆರಲಿದೆ. ಇದೆಲ್ಲದರ ಮಧ್ಯೆ ಮೇಘನಾ ಎರಡನೇ ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. ಆದರೆ ಇತರರಂತೆ ಈ ರೂಮರ್ ಗಳು ಬೆಳೆಯಲು ಅವಕಾಶ ಕೊಡದ ಮೇಘನಾ ನಾನು ನನ್ನ ಮನಸ್ಸಿನ ಮಾತಿನಂತೆ ನಡೆಯುತ್ತೇನೆ ಎನ್ನುವ ಮೂಲಕ ಎಲ್ಲ ವಿವಾದ ಕ್ಕೂ ತೆರೆ ಎಳೆದಿದ್ದಾರೆ.

ಸದ್ಯ ನಟಿ ಮೇಘನಾ ತಮ್ಮ ಪ್ರೀತಿಯ ಮಗನನ್ನು ಇಂಡಿಯಾದಲ್ಲಿ ಬಿಟ್ಟು ಕ್ಯಾಲಿಪೋರ್ನಿಯಾಗೆ ಹಾರಿದ್ದಾರೆ. ಇಷ್ಟಕ್ಕೂ ಚಿರು ಅಗಲಿಕೆಯ ಬಳಿಕ ಬಹುತೇಕ ಸಾರ್ವಜನಿಕ ಸಮಾರಂಭಗಳು, ಸಿನಿಮಾ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳದ ಮೇಘನಾ ದಿಢೀರ್ ಕ್ಯಾಲಿಫೋರ್ನಿಯಾಗೆ ಹಾರಿದ್ದ್ಯಾಕೆ ಅನ್ನೋ ಎಲ್ಲರನ್ನೂ ಕಾಡ್ತಿದೆ. ಇಷ್ಟಕ್ಕೂ ಮೇಘನಾ ದೂರ ದೇಶಕ್ಕೆ ಹಾರಿರೋದು ಟ್ರಿಪ್, ಶೂಟ್ ಅಥವಾ ರೆಕಾರ್ಡಿಂಗ್ ಗಲ್ಲ. ಬದಲಾಗಿ ಮೇಘನಾಗೆ ಸಂದಿದೋ ಹೀರೋ ಪ್ರಶಸ್ತಿ ಸ್ವೀಕರಿಸಲು ಮೇಘನಾ ಕ್ಯಾಲಿಫೋರ್ನಿಯಾಗೆ ಹೋಗಿದ್ದಾರೆ.

ಮೇಘನಾಗೆ ಫೆಡರೇಶನ್ ಆಫ್ ಇಂಡೋ ಅಮೇರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಪೋರ್ನಿಯಾ ಸಂಘಟನೆಯು ನೀಡುವ ಫಾಗ್ ಹೀರೋ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭ ಸ್ವೀಕರಿಸಲು ಮೇಘನಾ ಕ್ಯಾಲಿಪೋರ್ನಿಯಾಗೆ ಹೋಗಿದ್ದಾರೆ. ‌ಕ್ಯಾಲಿಪೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆಯುವ ಸಮಾರಂಭದಲ್ಲಿ ಮೇಘನಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ : Meghana Raj Sarja : ಮತ್ತೊಂದು ಮದುವೆಯಾಗ್ತಾರಾ ನಟಿ ಮೇಘನಾ ರಾಜ್ ಸರ್ಜಾ ; ಇಲ್ಲಿದೇ ಕುಟ್ಟಿಮಾ ಬೋಲ್ಡ್ ಆನ್ಸರ್

ಇದನ್ನೂ ಓದಿ : Anirudh Jatkar Reaction : ಜೊತೆ ಜೊತೆಯಲಿ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ : ನಿರ್ದೇಶಕ, ನಿರ್ಮಾಪಕರ ವಿರುದ್ದ ನಟ ಅನಿರುದ್ದ್ ಆರೋಪ

Meghana Raj Sarja good news to fans in California

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular