Condom wrapper on woman’s head: ಗಾಯಕ್ಕೆ ಹಾಕಿದ ಬ್ಯಾಂಡೇಜ್ ನಲ್ಲಿ ಕಾಂಡೋಮ್ ಕವರ್..!

ಮೊರೆನಾ, ಮಧ್ಯಪ್ರದೇಶ : ಆಪರೇಷನ್ ಮಾಡಿ ಹೊಲಿಗೆ ಹಾಕುವಾಗ ಕತ್ತರಿ, ಬ್ಲೇಡ್ ಬಿಟ್ಟ ಡಾಕ್ಟರ್ ಗಳ ಬಗ್ಗೆ ಕೇಳಿದ್ದೀವಿ ನೋಡಿದ್ದೀವಿ, ಆದ್ರೆ ಇಲ್ಲೊಬ್ಬ ಮಹಾಶಯ ಡಾಕ್ಟರ್ ಗಾಯಕ್ಕೆ Condom wrapper on woman’s head ಕಾಂಡೋಮ್ ಪ್ಯಾಕೇಟ್ ಕವರ್ ಇಟ್ಟು ಬ್ಯಾಂಡೇಜ್ ಕಟ್ಟಿದ್ದಾನೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಇಂಥ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಬ್ಬ ಡಾಕ್ಟರ್ ಬ್ಯಾಂಡೇಜ್ ತೆಗೆಯುವಾಗ ಕಾಂಡೋಮ್ ಪ್ಯಾಕೇಟ್ ಕವರ್ ಕಂಡು ಶಾಕ್ ಆಗಿದ್ದಾರೆ.ಅಷ್ಟಕ್ಕೂ ಆಗಿದ್ದೇನು ಅಂದ್ರೆ ಕಳೆದ ಗುರುವಾರ 70 ವರ್ಷದ ವೃದ್ಧೆಗೆ ತಲೆಗೆ ಗಂಭೀರ ಗಾಯವಾಗಿತ್ತು.ಹೀಗಾಗಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೋರ್ಸಾ ಅನ್ನೋ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ರು. ಅಲ್ಲಿನ ವೈದ್ಯರು ವೃದ್ಧೆಯ ತಲೆ ಗಾಯಕ್ಕೆ ಚಿಕಿತ್ಸೆನೀಡಿ ಬ್ಯಾಂಡೇಜ್ ಕಟ್ಟಿದ್ರು. ಎರಡು ದಿನದ ಬಳಿಕ ತಲೆ ಗಾಯದ ನೋವು ಜಾಸ್ತಿ ಆಗಿತ್ತು. ಹೀಗಾಗಿ ವೃದ್ಧೆ ಕುಟುಂಬದವರ ಜೊತೆ ಮೊರೆನಾ ಜಿಲ್ಲಾಸ್ಪತ್ರೆಗೆ ಆಗಮಿಸಿದ್ಲು. ಆಗ ಜಿಲ್ಲಾಸ್ಪತ್ರೆಯ ವೈದ್ಯರು ವೃದ್ಧೆಯ ತಲೆಗೆ ಕಟ್ಟಿದ್ದ ಬ್ಯಾಂಡೇಜ್ ತೆಗೆಯುವಾಗ ಬ್ಯಾಂಡೇಜ್ಒಳಗೆ ಕಾಂಡೋಮ್ ಪ್ಯಾಕೇಟ್ ಕವರ್ ಇಟ್ಟಿರೋದು ಗೊತ್ತಾಗಿದೆ ಅಂತಾ ವರದಿಯಾಗಿದೆ. ಕಾಂಡೋಮ್ ಕವರ್ ಕಂಡು ಜಿಲ್ಲಾಸ್ಪತ್ರೆಯ ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ

ಸದ್ಯ  ವೃದ್ಧೆಯ ತಲೆಗೆ ಕಟ್ಟಲಾಗಿದ್ದ ಬ್ಯಾಂಡೇಜ್ ನಲ್ಲಿ ಕಾಂಡೋಮ್ ಕವರ್ ಸಿಕ್ಕ ವಿಡಿಯೋ ಹೇಟ್ ಡಿಟೆಕ್ಟರ್ ಅನ್ನೋ ಟ್ವಿಟ್ಟರ್ ಪೇಜ್ ನಲ್ಲಿದ್ದು, ಈ ಶಾಕಿಂಗ್ ವಿಡಿಯೋ ವೈರಲ್ ಆಗ್ತಿದೆ.

ಇನ್ನು ಘಟನೆ ಕುರಿತು ಮಾಹಿತಿ ಪಡೆದಿರುವ ಮೊರೆನಾ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರಾಕೇಶ್ ಶರ್ಮಾ ತನಿಖೆಗೆ ಆದೇಶಿಸಿದ್ದಾರೆ. ಅಷ್ಟೇ ಅಲ್ದೆ ಗಾಯಕ್ಕೆ ಬ್ಯಾಂಡೇಜ್ ಕಟ್ಟುವಾಗ ಕಾಂಡೋಮ್ ಕವರ್ ಇಟ್ಟು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ : Meghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್‌ ಸರ್ಜಾ : ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಕುಟ್ಟಿಮಾ

ಇದನ್ನೂ ಓದಿ : Boycott Amazon : ರಾಧಾ-ಕೃಷ್ಣರ ಅಶ್ಲೀಲ ಭಂಗಿಯ ಪೇಟಿಂಗ್​ ಮಾರಾಟಕ್ಕೆ ಮುಂದಾದ ಅಮೆಜಾನ್​ : ಹಿಂದೂಗಳ ಆಕ್ರೋಶ

Condom wrapper on woman’s head shocker Madhya Pradesh doctors Awkward doctor

Comments are closed.