ಸ್ಯಾಂಡಲ್ ವುಡ್ ನಲ್ಲಿ (Sandalwood) ಆಕ್ಷ್ಯನ್ ಸಿನಿಮಾಗಳ ಮಧ್ಯೆ ಸದ್ದು ಮಾಡಿದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತತ್ಸಮ ತದ್ಭವ (Tatsama Tadbhava). ಸದ್ಯ ಕನ್ನಡದಲ್ಲಿ ಯಶಸ್ವಿ ಮೂವತ್ತು ದಿನಗಳ ಪ್ರದರ್ಶನ ಮುಗಿಸಿರೋ ತತ್ಸಮ ತದ್ಭವ ತನ್ನ ಯಶಸ್ಸಿನ ಯಾತ್ರೆ ಮುಂದುವರೆಸಿದೆ. ಈ ಮಧ್ಯೆ ಕನ್ನಡದಷ್ಟೇ ಪ್ರೀತಿಯನ್ನು ನಟಿಗೆ ಮೇಘನಾಗೆ (Meghana Raj) ನೀಡಿದ ಇನ್ನೊಂದು ಸಿನಿರಂಗ ಮಲೆಯಾಳಂಗೂ ತತ್ಸಮ ತದ್ಭವ ಎಂಟ್ರಿಕೊಡ್ತಿದೆ.
ನಟಿ ಮೇಘನಾ ರಾಜ್ ಗೆ ಕನ್ನಡ ಚಿತ್ರರಂಗ ಹೊಸದಲ್ಲ. ಚಿತ್ರರಂಗದ ನಡುವೆಯೇ ಹುಟ್ಟಿಬೆಳೆದ ಮೇಘನಾಗೆ ಸ್ಯಾಂಡಲ್ ವುಡ್ ತವರುಮನೆ ಇದ್ದಂತೆ. ಇನ್ನು ಸ್ಯಾಂಡಲ್ ವುಡ್ ನಷ್ಟೇ ಪ್ರೀತಿಯಿಂದ ಮೇಘನಾರನ್ನು ಬೆಳೆಸಿದ್ದು, ಮಲೆಯಾಳಂಚಿತ್ರರಂಗ. ಸಾಕಷ್ಟು ಇಂಟರವ್ಯೂಗಳಲ್ಲಿ ಮೇಘನಾ ರಾಜ್ ತಮಗೆ ಮಲೆಯಾಳಂ ಚಿತ್ರರಂಗ ನೀಡಿದ ಪ್ರೋತ್ಸಾಹ ಹಾಗೂ ಪ್ರೀತಿಯನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: ಚಿರು ಸರ್ಜಾ ಜೊತೆ ಧ್ರುವ ಸರ್ಜಾ: ಅಳಿಯಂದಿರ ಬಗ್ಗೆ ಮಾವ ಅರ್ಜುನ್ ಸರ್ಜಾ ಕನಸೇನಿತ್ತು ಗೊತ್ತಾ ?

ಈಗ ಅದೇ ಪ್ರೀತಿ ವಿಶ್ವಾಸದ ನೀರಿಕ್ಷೆಯಲ್ಲಿ ಮೇಘನಾ ರಾಜ್ (Meghana Raj) ಯಶಸ್ವಿ ಕಮ್ ಬ್ಯಾಕ್ ಸಿನಿಮಾ ತತ್ಸಮ ತದ್ಬವ (Tatsama Tadbhava) ಮಲಯಾಳಂನಲ್ಲಿ (Malayalam) ಬಿಡುಗಡೆಯಾಗುತ್ತಿದೆ.
ಹೀಗಾಗಿ ತತ್ಸಮ ತದ್ಭವ ಚಿತ್ರತಂಡದ ಜೊತೆ ಮೇಘನಾ ತಮ್ಮ ಬದುಕಿನ ಎರಡನೇ ತವರಿನತ್ತ ಮುಖಮಾಡಿದ್ದಾರೆ. ತಾವು ಪ್ರಮೋಶನ್ ಗಾಗಿ ಕೇರಳಕ್ಕೆ ತೆರಳ್ತಿರೋ ವಿಡಿಯೋವನ್ನು ನಟಿ ಮೇಘನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ನಟ ಯಶ್ ಕಾಲಿಗೆ ಪೊಲೀಯೋ ? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಸತ್ಯ
ಮೇಘನಾ ರಾಜ್ ಗೆ (Meghana Raj) ನಟ ಪ್ರಜ್ವಲ್ ದೇವರಾಜ್, ಚಿತ್ರದ ನಿರ್ಮಾಪಕ ಪನ್ನಗಾಭರಣ ಕೂಡ ಸಾಥ್ ನೀಡಿದ್ದಾರೆ. ಅಕ್ಟೋಬರ್ 27 ರಂದು ತತ್ಸಮ ತದ್ಭವ (Tatsama Tadbhava) ಕೇರಳದಾದ್ಯಂತ (Kerala) ಮಲೆಯಾಳಂ ನಲ್ಲಿ ತೆರೆಗೆ ಬರಲಿದೆ.
ಕಾಣೆಯಾದ ಪತಿಯನ್ನು ಹುಡುಕುವ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ, ಕನ್ನಡದಲ್ಲಿ ಸಪ್ಟೆಂಬರ್ ನಲ್ಲಿ ತೆರೆ ಕಂಡಿದ್ದು, ಈ ವರ್ಷದ ಅತ್ಯುತ್ತಮ ಸಸ್ಪೆನ್ಸ್‌ಥ್ರಿಲ್ಲರ್ ಸಿನಿಮಾ ಎಂಬ ಹೊಗಳಿಕೆಗೆ ಪಾತ್ರ ವಾಗಿರುವ ಸಿನಿಮಾ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: ಮಹಿಳೆಯರಿಗೆ ಬಡ್ಡಿಯಿಲ್ಲದೇ ಸಿಗುತ್ತೆ 2 ಲಕ್ಷ ರೂ ಸಾಲ : ಗೃಹಲಕ್ಷ್ಮೀ ಬೆನ್ನಲ್ಲೇ ಸರಕಾರದಿಂದ ಮತ್ತೊಂದ ಯೋಜನೆ
ಮೇಘನಾ ಕನ್ನಡದಲ್ಲೇ ಕೆರಿಯರ್ ಆರಂಭಿಸಿದ್ದರೂ ಇದುವರೆಗೂ ಕನ್ನಡಕ್ಕಿಂತ ಹೆಚ್ಚು ಅಂದ್ರೇ ಸುಮಾರು 20 ಕ್ಕೂ ಹೆಚ್ಚು ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. 2016 ರಲ್ಲಿ ತೆರೆಕಂಡ ಹಾಲೆಲೂಯ ಮೇಘನಾ ರಾಜ್ ನಟಿಸಿದ ಕೊನೆಯ ಚಿತ್ರ.ಅದಾದ ಬಳಿಕ ಮೇಘನಾ ಮದುವೆ, ಕರೋನಾ ಸೇರಿದಂತೆ ನಾನಾಕಾರಣಕ್ಕೆ ಮಲೆಯಾಳಂ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಕೊರೋನಾ ಹಾಗೂ ತಾಯ್ತನದ ಬ್ರೇಕ್ ಬಳಿಕ ಮಲೆಯಾಳಂ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ತತ್ಸಮ ತದ್ಭವ ಸಿನಿಮಾ ಮೇಘಮಾ ರಾಜ್ ಸರ್ಜಾ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ಸಿನಿಮಾ ಆಗಿರುವುದರಿಂದ ಇದನ್ನು ಮಲೆಯಾಳಂನಲ್ಲೂ ಪ್ರದರ್ಶಿಸುವ ಮೂಲಕ ಮೇಘನಾ ಅಭಿಮಾನಿಗಳಿಗೆ ಸಪ್ರೈಸ್ ನೀಡಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಮಲೆಯಾಳಂ ತತ್ಸಮ ತದ್ಭವ ಟ್ರೇಲರ್ ಕೂಡ ರಿಲೀಸ್ ಆಗಿದೆ.
ವಿಶಾಲ್ ಆತ್ರೇಯ ನಿರ್ಮಾಣದ ಈ ಸಿನಿಮಾದಲ್ಲಿ ಮೇಘನಾ ರಾಜ್ ಇದೇ ಮೊದಲ ಬಾರಿಗೆ ಇಂತಹದೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಾಸುಕಿ ವೈಭವ್ ಸಂಗೀತವಿರೋ ಈ ಸಿನಿಮಾದಲ್ಲಿ ಟಿ.ಎಸ್.ನಾಗಾಭರಣ್, ಗಿರಿಜಾ ಲೊಕೇಶ್ ಸೇರಿದಂತೆ ಹಲವರ ತಾರಾಗಣವಿದೆ. ಮೇಘನಾ ರಾಜ್ ಸರ್ಜಾ ಕುಟುಂಬಕ್ಕೆ ಅಕ್ಟೋಬರ್ ತಿಂಗಳು ಅತ್ಯಂತ ಸ್ಪೆಶಲ್. ಚಿರು ಸರ್ಜಾ, ಧ್ರುವ್ ಸರ್ಜಾ, ರಾಯನ್ ರಾಜ್ ಸರ್ಜಾ, ಧ್ರುವ್ ಸರ್ಜಾ ಪುತ್ರಿ ಕಣ್ಮನಿ ಸೇರಿದಂತೆ ಬಹುತೇಕರ ಜನ್ಮ ದಿನ ಅಕ್ಟೋಬರ್ ತಿಂಗಳಿನಲ್ಲೆ ಇದೆ. ಈಗ ಮಲೆಯಾಳಂನಲ್ಲಿ ಮೇಘನಾ ಸಿನಿಮಾ ತತ್ಸಮ ತದ್ಬವ ಕೂಡ ಅಕ್ಟೋಬರ್ ನಲ್ಲೆ ರಿಲೀಸ್ ಆಗ್ತಿದ್ದು ಕುಟ್ಟಿಮಾ ಅಲಿಯಾಸ್ ಮೇಘನಾ ಸರ್ಜಾ ಸಿನಿಮಾ ರಿಲೀಸ್ ಸಂಭ್ರಮದಲ್ಲಿದ್ದಾರೆ.