ಸೋಮವಾರ, ಏಪ್ರಿಲ್ 28, 2025
HomeCinemaಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

ಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

- Advertisement -

Meghana Raj Sarja Hoysala Movie : ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಸಿನಿಮಾಗಳ ಸದ್ದು ಜೋರಾಗಿದೆ. ಮಾತ್ರವಲ್ಲ ನಟ-ನಟಿಯರ ಕೆಮೆಸ್ಟ್ರಿಯೂ ಚೆನ್ನಾಗಿ ಮ್ಯಾಚ್ ಆಗ್ತಿದೆ. ಹಿಂದೆಂದಿಗಿಂತ ಹೆಚ್ಚಾಗಿ ಹೊಸ ತಲೆಮಾರಿನ ನಟ-ನಟಿಯರು ಒಬ್ಬರಿಗೊಬ್ಬರು ಒತ್ತಾಸೆಯಾಗಿ ನಿಲ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಿನಿಮಾ ಚಿತ್ರೀಕರಣದ ಸೆಟ್ ಗಳಿಗೆ ಪರಸ್ಪರ ಭೇಟಿ ನೀಡೋ ಪರಿಪಾಠ ಹೆಚ್ಚುತ್ತಿದೆ. ನಟಿ ಮೇಘನಾ ಸರ್ಜಾ ಕೂಡ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ನಟ ರಾಕ್ಷಸನ (Dhananjaya ) ಸೆಟ್ ಗೆ ಭೇಟಿ ಕೊಟ್ಟಿದ್ದು ಪೋಟೋ ವೈರಲ್ ಆಗಿದೆ.

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಎನ್ನಿಸಿಕೊಂಡ ಡಾಲಿ ಅಲಿಯಾಸ್ ಡಾಲಿ ಧನಂಜಯ್ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾ ನೀಡ್ತಿದ್ದಾರೆ. ಸದ್ಯ ಹೊಯ್ಸಳ ಸಿನಿಮಾದ ರಿಲೀಸ್ ಗೆ ಸಿದ್ಧವಾಗ್ತಿರೋ ಡಾಲಿ, ಸಿನಿಮಾದ ಕೊನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಡಾಲಿ ಧನಂಜಯ್ ಬಹು ನೀರಿಕ್ಷಿತ ಸಿನಿಮಾ ಹೊಯ್ಸಳ ಸೆಟ್ ಗೆ ಮೇಘನಾ ಸರ್ಜಾ ಹಾಗೂ ಸ್ನೇಹಿತರ ತಂಡ ಭೇಟಿ ಕೊಟ್ಟಿದೆ.

ತಮ್ಮ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ಮೇಘನಾ ಸರ್ಜಾ ಇದರ ಮಧ್ಯೆಯೇ ಡಾಲಿ ಧನಂಜಯ್ 25 ನೇ ಸಿನಿಮಾ ಗೆ ಶುಭ ಕೋರಲು ಸೆಟ್ ಭೇಟಿ ಕೊಟ್ಟಿದ್ದಾರೆ. ಮೇಘನಾ ಸರ್ಜಾ ಗೆ ನಿರ್ದೇಶಕ ಹಾಗೂ ನಿರ್ಮಾಪಕ ಪನ್ನಗಾಭರಣ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಆ ಸಾಥ್ ನೀಡಿದ್ದಾರೆ. ಈ ಪೋಟೋ ಸಖತ್ ವೈರಲ್ ಆಗಿದೆ.

ಸ್ವತಃ ಡಾಲಿ ಧನಂಜಯ್ ಮೇಘನಾ ಹಾಗೂ ಪನ್ನಗಾ ವಿಸಿಟ್ ಪೋಟೋ ಹಂಚಿಕೊಂಡಿದ್ದು, ಹೊಯ್ಸಳ ಸೆಟ್ ಗೆ ಯಾರುಭೇಟಿ ಕೊಟ್ಟಿದ್ದಾರೆ ನೋಡಿ ಎಂದು ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ. ಸದ್ಯ ಮೇಘನಾ ಪನ್ನಗಾಭರಣ ನಿರ್ಮಾಣದಲ್ಲಿ ವಿಶಾಲ್ ನಿರ್ದೇಶಿಸುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಆಕ್ಷ್ಯನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದೇ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಮೇಘನಾ ವಿದೇಶ ಪ್ರವಾಸ ಮುಗಿಸಿ ಬಂದಿದ್ದು, ವಿದೇಶ ಟ್ರಿಪ್ ಬಳಿಕ ಶೂಟಿಂಗ್ ಗೆ ಮರಳಿದ ಮೇಘನಾ ನಾನು ಎಲ್ಲಿಗೆ ಸೇರಿದವಳೋ ಅಲ್ಲಿಗೆ ಮರಳಿದ್ದೇನೆ ಎಂದಿದ್ದರು. ಈಗ ಶೂಟಿಂಗ್ ಸೆಟ್ ಗೂ ಬರೋ ಮೂಲಕ ಮೇಘನಾ ಎಲ್ಲ ಸಂಕಟಗಳನ್ನು ಹಿಂದೆ ಬಿಟ್ಟು ವೃತ್ತಿ ಬದುಕಿನ ಕಡೆಗೆ ಗಮನ ಹರಿಸಿದ್ದಾರೆ.

ಇದನ್ನೂ ಓದಿ : Sai Pallavi : ಪುಷ್ಪ2 ಸಿನಿಮಾದಲ್ಲಿ ಸಾಯಿ ಪಲ್ಲವಿ

ಇದನ್ನೂ ಓದಿ : ಧ್ರುವ ಸರ್ಜಾ ಪತ್ನಿ ಸೀಮಂತಕ್ಕೆ ಗೈರಾದ ಮೇಘನಾ ರಾಜ್‌ : ಸರ್ಜಾ ಕುಟುಂಬದ ಮೇಲೆ ಮುನಿಸಿಕೊಂಡ್ರಾ ಕುಟ್ಟಿಮಾ

Meghana Raj Sarja Visit Dhananjaya Hoysala Kannada Movie Set

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular