World famous Kohinoor diamond : ಕೊಹಿನೂರು ವಜ್ರ ಭಾರತಕ್ಕೆ ಹಿಂದಿರುಗಿಸಿ, ಟ್ವಿಟರ್ ನಲ್ಲಿ ಶುರುವಾಯ್ತು ಅಭಿಯಾನ

ನವದೆಹಲಿ : (World famous Kohinoor diamond ) ಬ್ರಿಟಿಷ್‌ ರಾಣಿ ಎರಡನೇ ಎಲಿಜಬೆತ್‌ ಸಾವಿನ ಬೆನ್ನಲ್ಲೇ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿವೆ. ಅದ್ರಲ್ಲೂ ಭಾರತದಲ್ಲಿ ಕೊಹಿನೂರ್‌ ವಜ್ರ ಭಾರತಕ್ಕೆ ಮರಳಬೇಕು ಎಂಬ ಕೂಗು ಕೇಳಿಬಂದಿದೆ. ಬ್ರಿಟಿಷರ ವಶದಲ್ಲಿರುವ ಕೊಹಿನೂರ್‌ ವಜ್ರದ ವಿಚಾರಕ್ಕೆ ಸಂಬಧಿಸಿದಂತೆ ಸುಪ್ರೀಂಕೋರ್ಟನಲ್ಲಿ 2016 ಎಪ್ರಿಲ್ ನಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಕೇಂದ್ರ ಸರಕಾರ ಬ್ರಿಟನ್ “ಕೊಹಿನೂರು ವಜ್ರವನ್ನು ಬಲಂತವಾಗಿಯೂ ತೆಗೆದುಕೊಂಡು ಹೋಗಿಲ್ಲ ಅಥವಾ ಕಳವು ಮಾಡಲಾಗಿಲ್ಲ ಎಂದು ಹೇಳಲಾಗಿತ್ತು. ಬ್ರಿಟಿಷ್‌ ರಾಣಿ ಎರಡನೇ ಎಲಿಜಬೆತ್‌ ಹಲವು ವರ್ಷಗಳಿಂದಲೂ ಈ ಕೊಹಿನೂರ್‌ ವಜ್ರವನ್ನು ಧರಿಸುತ್ತಿದ್ದು, ಆದರೀಗ ಬ್ರಿಟನ್ ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಕೊಹಿನೂರು ವಜ್ರವನ್ನು ಹಿಂದಿರಿಗಿಸುವಂತೆ ಜನರ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.

ವಿಡಿಯೋ, ಮೆಮ್ ಪೋಸ್ಟಗಳು ಮತ್ತು ಟ್ವಿಟ್ ಮಾಡುವ ಮೂಲಕ ಕೆಲವು ಟ್ವಿಟರ್ ಬಳಕೆದಾರರು ಕೊಹಿನೂರು ವಜ್ರವನ್ನು ಹಿಂದಿರುಗಿಸುವಂತೆ ಧ್ವನಿ ಎತ್ತುತ್ತಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ ದೂಮ್ ಸಿನಿಮಾದ ರೈಲಿನಲ್ಲಿ ಚಲಿಸುವಾಗ ವಜ್ರವನ್ನು ಕದಿಯುವ ವಿಡಿಯೋದ ತುಣಕನ್ನು ಶೇರ್‌ ಮಾಡಲಾಗುತ್ತಿದೆ.ಇನ್ನು ಕೆಲವರು ಮಿಮ್ಸ್ ಗಳನ್ನು ಪೋಸ್ಟ್ ಮಾಡುವುದು ಮತು ಕಮೆಂಟ್ ಮಾಡುವುದರ ಮೂಲಕ ಕೊಹಿನೂರು ವಜ್ರ ಭಾರತಕ್ಕೆ ಮರಳಿ ಬರಲಿ ಅನ್ನೋ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಾರತದ ಗೋಲ್ಕೊಂಡ ಗಣಿಯಲ್ಲಿ ಸುಮಾರು 14ನೇ ಶತಮಾನದಲ್ಲಿ ಈ ಕೊಹಿನೂರು ವಜ್ರ ಸಿಕ್ಕಿತು. ಆರಂಭದಲ್ಲಿಕೊಹಿನೂರ್‌ ಮೊಘಲ್ ದೊರೆಗಳ ಬಳಿಯಲ್ಲಿತ್ತು. ತದನಂತರ ಇರಾನ್ ದೊರೆಗಳ ಪಾಲಾಯಿತು. ಅಲ್ಲಿಂದ ಅಫ್ಘಾನಿಸ್ತಾನ್ ರಾಜರ ಕೈವಶವಾಯಿತು. ಆದರೆ ಅಂತಿಮವಾಗಿ ಪಂಜಾಬಿನ ಮಹಾರಾಜನ ಒಡೆತನಕ್ಕೆ ಧಕ್ಕಿತ್ತು. ದುರದೃಷ್ಟವಶಾತ್‌ ಆಂಗ್ಲೋ – ಸಿಖ್‌ ಕದನದಲ್ಲಿ ಸೋತ ನಂತರದಲ್ಲಿ ದಂಡದ ರೂಪದಲ್ಲಿ ಈ ಕೊಹಿನೂರ್‌ ವಜ್ರವನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ:ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ನಿಧನ : ಮೋದಿ ಸಂತಾಪ

ಇದನ್ನೂ ಓದಿ: ಕ್ವೀನ್​ ಎಲೆಜೆಬೆತ್​​ II ಮರಣದ ಬೆನ್ನಲ್ಲೇ ಕೊಹಿನೂರ್​ ವಜ್ರ ಮರಳಿ ಕೊಡುವಂತೆ ಭಾರತೀಯರಿಂದ ಬೇಡಿಕೆ

ಬ್ರಿಟಿಷ್ ರಾಣಿ ಎಲಿಜಬೆತ್ ಮರಣದ ನಂತರ ಅವರ ಮಗನಾದ ಚಾರ್ಲ್ಸ್ ಅವರನ್ನು ಪಟ್ಟಕ್ಕೇರಿಸಲಾಗುತ್ತದೆ. ಬ್ರಿಟನ್‌ ದೊರೆಗಳ ಸಂಪ್ರದಾಯದ ಪ್ರಕಾರ ಗಂಡುಮಕ್ಕಳು ಕೀರಿಟ ತೊಡುವವಂತಿಲ್ಲ. ಒಂದೊಮ್ಮೆ ಧರಿಸಿದ್ರೆ ಅದು ಅಶುಭ ಎಂದು ಪರಿಗಣಿಸುತ್ತಾರೆ. ಹಾಗಾಗಿ ಈ ಕೀರಿಟವನ್ನು ಅವರ ಪತ್ನಿ ಕೆಮಿಲ್ಲಾ ಅವರಿಗೆ ನೀಡಲಾಗುತ್ನತದೆ. ಹೀಗಾಗಿ ಬ್ರಿಟನ್‌ ರಾಣಿಯ ಸಾವಿನ ನಂತರದಲ್ಲಾದ್ರೂ ಕೊಹಿನೂರ್‌ ವಜ್ರದ ಕೀರಿಟ ಇಗಲಾದರೂ ಮರಳಲಿ ಎಂದು ಭಾರತೀಯರು ತಮ್ಮ ಆಶಯವನ್ನು ವ್ಯಕ್ತಪಡಿಸಿತ್ತಿದ್ದಾರೆ. ಇನ್ನು ಭಾರತ, ಪಾಕಿಸ್ತಾನ, ಇರಾನ್, ಅಫ್ಘಾನಿಸ್ತಾನ ದೇಶಗಳು ಕೂಡ ಕೊಹಿನೂರು ವಜ್ರದ ಮೇಲೆ ಮಾಲಿಕತ್ವ ಹೊಂದಿದೆ. ಈ ಸಂದರ್ಭದಲ್ಲಿ ಭಾರತದವರು ಕೊಹಿನೂರು ವಜ್ರವನ್ನು ಭಾರತಕ್ಕೆ ತರುವ ಪ್ರಯತ್ನ ಸ್ವಲ್ಪ ಕಷ್ಟ ಎನ್ನಬಹುದು. ಇನ್ನು ಕಾನೂನಿನ ಪ್ರಕಾರ ಹೊರಾಡಿ ತರಲು ಸಾಧ್ಯವಾಗದ ಮಾತು.

world famous kohinoor diamond twitter-users return kohinoor to india

Comments are closed.