Sushil Mantri Arrested : ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಬಂಧನ

ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಕೇಸ್‌ಗೆ ಸಂಬಂಧಿಸಿದಂತೆ ಮಂತ್ರಿ ಡೆವಲಪರ್ಸ್ ನಿರ್ದೇಶಕ, ಖ್ಯಾತ ಉದ್ಯಮಿ ಸುಶೀಲ್ ಮಂತ್ರಿ (Mantri Developers Director Sushil Mantri Arrested) ಅವರನ್ನು ಸಿಐಡಿ ವಿಶೇಷ ತಂಡ ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜೂನ್ 25 ರಂದು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಆದ್ರೆ ಇದೀಗ ಮತ್ತೆ ಸುಶೀಲ್‌ ಮಂತ್ರಿ ಅವರು ಬಂಧಿಸಲಾಗಿದೆ.

ಸಿಐಡಿ ಎಸ್ಪಿ ರವಿ ಡಿ ಚೆನ್ನಣ್ಣನವರ್ ಅವರ ತಂಡ ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅವರನ್ನುಬಂಧಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಸುಶೀಲ್‌ ಮಂತ್ರಿ ಅವರು ತನ್ನ ಗ್ರಾಹಕರಿಗೆ ವಂಚಿಸಿದ ಆರೋಪದ ಜೊತೆಗೆ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಕೇಳಿಬಂದಿದೆ. ಸಾವಿರಾರು ಗ್ರಾಹಕರಿಂದ 1000 ಕೋಟಿ ಸಂಗ್ರಹಿಸಿದ ಉದ್ಯಮಿ ಸುಶೀಲ್ ಮಂತ್ರಿ, 7 ರಿಂದ 10 ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಸುಳ್ಳು ಕರಪತ್ರಗಳನ್ನು ತೋರಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಗ್ರಾಹಕರಿಂದ ಸಂಗ್ರಹ ಮಾಡಿರುವ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು 2022ರಲ್ಲಿಯೇ ಸಾವಿರಾರು ಗ್ರಾಹಕರು ದೂರು ನೀಡಿದ್ದರು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯ ಕೆಲವು ಯೋಜನೆಗಳಲ್ಲಿ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸದ್ಯ ಸುಶೀಲ್ ಮಂತ್ರಿಯನ್ನು ಬಂಧಿಸಲಾಗಿದ್ದು, ಅರಮನೆ ರಸ್ತೆಯಲ್ಲಿರುವ ಕಾರ್ಲ್ಟನ್ ಭವನ ಸಿಐಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.

ಇನ್ನೊಂದೆಡೆಯಲ್ಲಿ ದೂರುದಾರರನ್ನು ಕಚೇರಿಗೆ ಕರೆಯಿಸಿಕೊಂಡಿರುವ ಸಿಐಡಿ ಅಧಿಕಾರಿಗಳು ದಾಖಲೆಗಳ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ 1200 ಜನರ ವಿರುದ್ಧ ವಂಚನೆ ಆರೋಪವಿದೆ. 1350 ಕೋಟಿ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

ಹೂಡಿಕೆ ಮಾಡಿದ ಹಣ ಕೇಳಲು ಹೋದವರಿಗೆ ಕಂಪನಿಯವರು ಹಣ ವಾಪಸ್ ನೀಡಿಲ್ಲ. ಫೋಜಿ ಯೋಜನೆ ಮೂಲಕ ಆಫರ್ ನೀಡಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಫೋಜಿ ಸ್ಕೀಮ್ ಹಾಗೂ ಬೈ ಬ್ಯಾಕ್ ಅಡಿಯಲ್ಲಿ ಅಕ್ರಮ ನಡೆದಿದೆ. ನಿವೇಶನ ಹಾಗೂ ಜಮೀನು ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ. ಅಲ್ಲದೇ ಸುಶೀಲ್ ಕೂಡ 1350 ಕೋಟಿ ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಏಳೆಂಟು ವರ್ಷಗಳ ಹಿಂದೆಯೇ ಹಣ ಪಾವತಿಯಾಗಿದ್ದು, ಇದುವರೆಗೂ ಮನೆ ನೀಡಿಲ್ಲ. ಹೂಡಿಕೆದಾರರ ಹಣವನ್ನು ವೈಯಕ್ತಿಕ ಬಳಕೆಗೆ ಬಳಸಲಾಗಿದೆ. ಒಂದು ಕಡೆಯಿಂದ ಹಣ ಪಡೆದು ಮತ್ತೊಂದು ಕಡೆ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗ ಮಂತ್ರಿ ಕಂಪನಿ ವಿವಿಧ ಬ್ಯಾಂಕ್‌ಗಳಿಂದ 5000 ಕೋಟಿ ಸಾಲ ಪಡೆದಿದೆ. ಪಡೆದ ಸಾಲದಲ್ಲಿ 1000 ಕೋಟಿಗಳು ಸ್ವಲ್ಪ ಮಿತಿಮೀರಿದ ಮೊತ್ತವನ್ನು ಹೊಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : World famous Kohinoor diamond : ಕೊಹಿನೂರು ವಜ್ರ ಭಾರತಕ್ಕೆ ಹಿಂದಿರುಗಿಸಿ, ಟ್ವಿಟರ್ ನಲ್ಲಿ ಶುರುವಾಯ್ತು ಅಭಿಯಾನ

ಇದನ್ನೂ ಓದಿ : painting a kitten with tiger paint : ಬೆಕ್ಕಿನ‌ ಮರಿಗೆ ಹುಲಿ ಬಣ್ಣ ಬಳಿದು ವಂಚನೆಗೆ ಯತ್ನ: ಖತರ್ನಾಕ್ ಯುವಕ‌ ಅಂದರ್

Mantri Developers Director Sushil Mantri Arrested

Comments are closed.