ಮೇಘನಾ ರಾಜ್ ಸರ್ಜಾ ಸದ್ಯ ತತ್ಸಮ ತದ್ಭವ ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಸಿನಿಮಾಗಳ ಮೂಲಕವೂ ಮತ್ತೆ ಸಿನಿ ಕೆರಿಯರ್ ಮುಂದುವರಿಸುವ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಮೇಘನಾ ರಾಜ್ ಸರ್ಜಾ ತಮ್ಮದೇ ಒಂದು ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ಇಷ್ಟಕ್ಕೂ ಮೇಘನಾ ರಾಜ್ ಸರ್ಜಾ (Meghanaraj Sarja) ಯೂಟ್ಯೂಬರ್ ಆಗಿದ್ದೇಕೆ? ಈ ಪ್ರಶ್ನೆಗೆ ಮೇಘನಾ ತುಂಬ ನೋವಿನ ಉತ್ತರವೊಂದನ್ನು ನೀಡಿದ್ದು ಮನಮಿಡಿಯುವಂತಿದೆ.
ನಟಿ ಮೇಘನಾ ರಾಜ್ ಸರ್ಜಾ 2020 ರಲ್ಲಿ ಬದುಕಿನ ಅತಿ ದೊಡ್ಡ ನೋವೊಂದಕ್ಕೆ ಸಾಕ್ಷಿಯಾದರು. ಅದಾದ ಬಳಿಕ ಎರಡು ವರ್ಷಗಳ ಕಾಲ ಮೇಘನಾ ರಾಜ್ ಸರ್ಜಾ ಬಹುತೇಕ ತೆರೆಯ ಹಿಂದೆಯೇ ಉಳಿದು ಹೋದರು. ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನು ಕಳೆದುಕೊಂಡ ಮೇಘನಾ, ಮಗನಿಗಾಗಿ ಮತ್ತೆ ಬದುಕನ್ನು ಶೃಂಗರಿಸಿಕೊಂಡು ಸಹಜ ಜೀವನಕ್ಕೆ ಮರಳಲಾರಂಭಿಸಿದರು.

ಆದರೆ ಈ ಕಮ್ ಬ್ಯಾಕ್ ಅಥವಾ ಸಹಜ ಜೀವನಕ್ಕೆ ಮರಳೋದು ಮೇಘನಾ ಪಾಲಿಗೆ ಸುಲಭವಾಗಿರಲಿಲ್ಲ. ಈ ಮಧ್ಯೆ ರಿಯಾಲಿಟಿ ಶೋ ಮೂಲಕ ಮತ್ತೆ ಕ್ಯಾಮರಾ ಮುಂದೇ ಬಂದ ಮೇಘನಾ ಬಳಿಕ ಜಾಹೀರಾತು, ಸಿನಿಮಾ ಅಂತ ಬೆಳ್ಳಿ ತೆರೆಗೂ ಮತ್ತೊಮ್ಮೆ ಎರಡನೇ ಇನ್ನಿಂಗ್ಸ್ ಆರಂಭಿಸಿದರು.
ಇದನ್ನೂ ಓದಿ : ಬಂಗಾಳಿ ಬ್ಯೂಟಿ ನಟಿ ಐಂದ್ರಿತಾ ರೈ ಹೊಸ ಪೋಟೋಶೂಟ್
ಇಷ್ಟೆಲ್ಲ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಮೇಘನಾ ತಮ್ಮದೇ ಆದ ವ್ಲೋಗ್ ರೀತಿಯ ಮೇಘನಾ ರಾಜ್ ಯೂಟ್ಯೂಬ್ ಚಾನೆಲ್ (Meghana Raj Youtube Channel) ವೊಂದನ್ನು ಆರಂಭಿಸಿದರು. ತಮ್ಮ ಮೇಕಪ್, ಸಿನಿಮಾ, ಕೆರಿಯರ್, ಮನೆ, ಬೆಡ್ ರೂಂ, ಬ್ಯಾಗ್ ಕಲೆಕ್ಷನ್. ಮೇಕಪ್ ಸ್ಟೈಲ್, ಹೇರ್ ಬ್ಯೂಟಿ ಸಿಕ್ರೇಟ್ ಹೀಗೆ ನಾನಾ ರೀತಿಯ ವಿಡಿಯೋಗಳನ್ನು ಹಂಚಿಕೊಂಡರು. ತಮ್ಮ ವರ್ಕೌಟ್, ಶಾಪಿಂಗ್ , ಔಟಿಂಗ್ ಎಲ್ಲ ವಿವರಗಳನ್ನು ಸುಂದರವಾದ ವೀಡಿಯೋ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಟ್ಟರು.
ಇದನ್ನೂ ಓದಿ : ಚಿರು ಸರ್ಜಾ ಜೊತೆ ಧ್ರುವ ಸರ್ಜಾ: ಅಳಿಯಂದಿರ ಬಗ್ಗೆ ಮಾವ ಅರ್ಜುನ್ ಸರ್ಜಾ ಕನಸೇನಿತ್ತು ಗೊತ್ತಾ ?
ಮೂಲತಃ ಸಂಕೋಚ ಸ್ವಭಾವದ ಮೇಘನಾ ರಾಜ್ ಸರ್ಜಾ ತಮ್ಮ ಬದುಕಿನ ಬಗ್ಗೆ ಇಷ್ಟೇಕೇ ಮುಕ್ತವಾಗಿ ಮಾತನಾಡಲಾರಂಭಿಸಿದ್ರೂ ? ಇಂತಹದೊಂದು ಬ್ಲಾಗ್ ಆರಂಭಿಸಿದ್ದಕ್ಕೇ ಕಾರಣವೇನು ಎಂಬ ಕುತೂಹಲದ ಪ್ರಶ್ನೆಗೆ ಮೇಘನಾ ಸಂದರ್ಶನವೊಂದರಲ್ಲಿ ನೇರ ಉತ್ತರ ನೀಡಿದ್ದಾರೆ. ಚಿರು ನಿಧನದ ಬಳಿಕ ಮೌನ ಗೌರಿಯಂತಾಗಿದ್ದ ಮೇಘನಾ ಮತ್ತೆ ಮುಕ್ತವಾಗಿ ಬದುಕಲು ಆರಂಭಿಸಿ, ಯೂಟ್ಯೂಬ್ ಆರಂಭಿಸಿದ ಕಾರಣವೇ ಈ ಟ್ರೋಲ್ ಹಾಗೂ ಫೇಕ್ ಯೂಟ್ಯೂಬ್ ಗಳ ಕಾಟ.

ಈ ಬಗ್ಗೆ ಮಾತನಾಡಿರೋ ಮೇಘನಾ, ಚಿರು ನಿಧನದ ಬಳಿಕ ನನ್ನ ಬದುಕು ಈ ಯುಟ್ಯೂಬ್ ಚಾನೆಲ್ ಗಳ ಬಾಯಿಗೆ ಆಹಾರವಾಯ್ತು. ಏನೇನೋ ಸುದ್ದಿ ಹಾಕಿ,ಇನ್ನೇನೋ ತಂಬ್ ನೇಲ್ ಸಿದ್ಧಪಡಿಸಿ ಪ್ರಕಟಿಸುವ ಮೂಲಕ ತಮ್ಮ ಪಬ್ಲಿಸಿಟಿಗಾಗಿ ನನ್ನ ವೈಯಕ್ತಿಕ ಬದುಕನ್ನು ಚರ್ಚೆಗೆ ಗ್ರಾಸವಾಗಿಸಿದರು. ನಾನು ಈ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದೇ ಇದ್ದರೂ ವಯಸ್ಸಾದ ನನ್ನ ಹೆತ್ತವರ ನೋವು ನನ್ನನ್ನು ಕಾಡಲಾರಂಭಿಸಿತು.
ಇದನ್ನೂ ಓದಿ : 7 ವರ್ಷಗಳ ಬಳಿಕ ಮಲೆಯಾಳಂನಲ್ಲಿ ಮೇಘನಾ ರಾಜ್ ಸರ್ಜಾ ಸಿನಿಮಾ : ತತ್ಸಮ ತದ್ಬವ ಅ.27 ಕ್ಕೆ ರಿಲೀಸ್
ಹೀಗಾಗಿ ಅದ್ಯಾರೋ ನನ್ನ ಬಗ್ಗೆ ಗೊತ್ತಿಲ್ಲದವರು ನನ್ನ ಬಗ್ಗೆ ಮಾತನಾಡೋ ಬದಲು ನಾನೇ ನನ್ನ ಬದುಕಿನ ಬಗ್ಗೆ ಅಭಿಮಾನಿಗಳಿಗೆ ವಿವರ ಕೊಡೋಣ. ನಾನೇಷ್ಟು ಸಹಜವಾಗಿ ಬದುಕುತ್ತಿದ್ದೇನೆ ಅನ್ನೋದನ್ನು ಚಿರು ಅಭಿಮಾನಿಗಳಿಗೆ ತೋರಿಸೋಣ ಎನ್ನಿಸಿತು. ಅದಕ್ಕಾಗಿ ನಾನೇ ನನ್ನದೊಂದು ಚಾನೆಲ್ ಆರಂಭಿಸಿದೆ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಹಿಂಜರಿಕೆಯಿಂದಲೇ ಆರಂಭಿಸಿದ ನನ್ನ ಯೂಟ್ಯೂಬ್ ಗೆ ಈ ಮಿಲಿಯನ್ ಗಟ್ಟಲೇ ಫ್ಯಾನ್ಸ್ ಸಿಕ್ಕಿದ್ದಾರೆ. ಇದು ನನ್ನ ಧೈರ್ಯ ಹಾಗೂ ಉತ್ಸಾಹವನ್ನು ಹೆಚ್ಚಿಸಿದೆ. ಹಾಗೇ ನನ್ನ ಬಗ್ಗೆ ಪ್ರತಿನಿತ್ಯ ಹರಡುತ್ತಿದ್ದ ನೂರಾರು ಗಾಸಿಪ್ ಗಳಿಗೂ ಕಡಿವಾಣ ಬಿದ್ದಿದೆ ಎಂದು ಮೇಘನಾ ಖುಷಿಯಿಂದ ಹೇಳಿಕೊಂಡಿದ್ದಾರೆ. ಅಲ್ಲದೇ ಜನರೂ ಕೂಡ ಸತ್ಯ ತಿಳಿದು ನನ್ನ ಮೇಲೆ ಮತ್ತಷ್ಟು ಅಭಿಮಾನ ತೋರುತ್ತಿದ್ದಾರೆ ಎಂದಿದ್ದಾರೆ.
Meghana Raj Sarja why start YouTube channel Behind Kuttima Channel is a story of tears