ವಿಶ್ವಕಪ್‌ 2023 : ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?

ಈ ಬಾರಿಯ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ನಾಯಕನಾಗಿದ್ದು, ಹಾರ್ದಿಕ್‌ ಪಾಂಡ್ಯ ಉಪನಾಯಕನಾಗಿದ್ದಾರೆ. ಆದ್ರೀಗ ಹಾರ್ದಿಕ್‌ ಪಾಂಡ್ಯ ಗಾಯಗೊಂಡು, ಮೂರು ಪಂದ್ಯಗಳನ್ನು ಆಡಿಲ್ಲ.

ವಿಶ್ವಕಪ್‌ 2023 (World Cup 2023) ರಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಶ್ರೀಲಂಕಾ ವಿರುದ್ದದ ಪಂದ್ಯವನ್ನು ಜಯಿಸಿ ಈಗಾಗಲೇ ಭಾರತ ವಿಶ್ವಕಪ್‌ ಸೆಮಿಫೈನಲ್‌ ಗೆ ಎಂಟ್ರಿ ಕೊಟ್ಟಿದೆ. ಆದರೆ ತಂಡಕ್ಕೆ ನಾಯಕತ್ವದ್ದೇ ಚಿಂತೆ ಶುರುವಾಗಿದೆ. ಈಗಾಗಲೇ ಉಪನಾಯಕ ಹಾರ್ದಿಕ್‌ ಪಾಂಡ್ಯ ಗಾಯಗೊಂಡು ಹೊರ ನಡೆದಿದ್ದಾರೆ. ಇದೀಗ ರೋಹಿತ್‌ ಶರ್ಮಾ (Rohit Sharma) ಅನುಪಸ್ಥಿತಿ ಯಲ್ಲಿ ನಾಯಕ ಯಾರೂ ಅನ್ನೋ ಕುತೂಹಲ ಮೂಡಿಸಿದೆ.

ಕಳೆದ ವಿಶ್ವಕಪ್‌ನಲ್ಲಿ ನಾಯಕನಾಗಿದ್ದ ವಿರಾಟ್‌ ಕೊಹ್ಲಿ ವಿಶ್ವಕಪ್‌ ಸೋಲಿನ ಬೆನ್ನಲ್ಲೇ ನಾಯಕತ್ವ ತೊರೆದಿದ್ದರು. ಈ ವೇಳೆಯಲ್ಲಿ ರೋಹಿತ್‌ ಶರ್ಮಾ ಟೀಂ ಇಂಡಿಯಾದ ಉಪನಾಯಕನಾಗಿದ್ದರು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ನಾಯಕನಾಗಿದ್ದು, ಹಾರ್ದಿಕ್‌ ಪಾಂಡ್ಯ ಉಪನಾಯಕನಾಗಿದ್ದಾರೆ. ಆದ್ರೀಗ ಹಾರ್ದಿಕ್‌ ಪಾಂಡ್ಯ ಗಾಯಗೊಂಡು, ಮೂರು ಪಂದ್ಯಗಳನ್ನು ಆಡಿಲ್ಲ.

World Cup 2023 Who Will Lead indian cricket team In Absence Of Rohit Sharma
Image Credit to Original Source

ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಬದಲಿ ಆಟಗಾರನ ಆಯ್ಕೆಯನ್ನೂ ಬಿಸಿಸಿಐ ಮಾಡಿಲ್ಲ. ಜೊತೆಗೆ ಟೀಂ ಇಂಡಿಯಾ ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಉಪ ನಾಯಕ ಯಾರೂ ಅನ್ನೋದನ್ನೂ ತಿಳಿಸಿಲ್ಲ. ಸದ್ಯ ರೋಹಿತ್‌ ಶರ್ಮಾ ತಂಡದ ನಾಯಕನಾಗಿದ್ದಾರೆ. ಒಂದೊಮ್ಮೆ ರೋಹಿತ್‌ ಶರ್ಮಾ ವಿಶ್ವಕಪ್‌ನಲ್ಲಿ ಪಂದ್ಯದಿಂದ ಹೊರಗುಳಿದ್ರೆ ಆ ಸಂದರ್ಭದಲ್ಲಿ ಯಾರು ತಂಡವನ್ನು ಮುನ್ನೆಡೆಸಬೇಕು ಅನ್ನೋ ಚಿಂತೆ ಟೀಂ ಇಂಡಿಯಾಕ್ಕೆ ಶುರುವಾಗಿದೆ.

World Cup 2023 Who Will Lead indian cricket team In Absence Of Rohit Sharma
Image Credit to Original Source

ಇದನ್ನೂ ಓದಿ : ಕೇವಲ 55 ರನ್‌ಗೆ ಶ್ರೀಲಂಕಾ ಆಲೌಟ್‌ : ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ವಿರಾಟ್‌ ಕೊಹ್ಲಿ ರಾಜೀನಾಮೆಯ ನಂತರ ರೋಹಿತ ಶರ್ಮಾ, ಶಿಖರ್‌ ಧವನ್‌, ಕೆಎಲ್‌ ರಾಹುಲ್‌, ಜಸ್ಪ್ರಿತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ ಭಾರತ ಕ್ರಿಕೆಟ್‌ ತಂಡವನ್ನು ಮುನ್ನೆಡೆಸಿದ್ದಾರೆ. ಸದ್ಯಕ್ಕೆ ರೋಹಿತ್‌ ಶರ್ಮಾ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಈ ಹಿಂದೆ ಕನ್ನಡಿಗ ಕೆಎಲ್‌ ರಾಹುಲ್‌ ಟೀಮ್‌ ಇಂಡಿಯಾದ ಉಪ ನಾಯಕನಾಗಿದ್ದರು.

ಆದರೆ ಗಾಯದ ಹಿನ್ನೆಲೆಯಲ್ಲಿ ಹಾರ್ದಿಕ್‌ ಪಾಂಡ್ಯವನ್ನು ಟೀಂ ಇಂಡಿಯಾದ ಉಪನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಪಾಂಡ್ಯ ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಿಂದಲೇ ಹೊರಬಿದ್ದಿದ್ದಾರೆ. ಅಲ್ಲದೇ ಅವರ ಚೇತರಿಕೆಯ ಬಗ್ಗೆಯೂ ಯಾವುದೇ ಮಾಹಿತಿಯನ್ನು ಬಿಸಿಸಿಐ ನೀಡಿಲ್ಲ. ಕೆಎಲ್‌ ರಾಹುಲ್‌ ಟೀಂ ಇಂಡಿಯಾದ ಉಪನಾಯಕ ಆಗ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆಯೂ ಘೋಷಣೆ ಆಗಿಲ್ಲ.

World Cup 2023 Who Will Lead indian cricket team In Absence Of Rohit Sharma
Image Credit to Original Source

ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಆಡಿದ ಎಲ್ಲಾ 7  ಪಂದ್ಯಗಳನ್ನು ಜಯಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಒಂದೊಮ್ಮೆ ಶ್ರೀಲಂಕಾ ವಿರುದ್ದದ ಪಂದ್ಯ ವನ್ನು ಜಯಿಸಿದ್ದೇ ಆದ್ರೆ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಜೊತೆಗೆ ಸೆಮಿಫೈನಲ್‌ಗೆ ಎಂಟ್ರಿ ಪಡೆದ ಮೊದಲ ತಂಡ ಎನಿಸಿಕೊಳ್ಳಲಿದೆ.

ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಉಪನಾಯಕನ ರೇಸ್‌ನಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಇದ್ದಾರೆ. ವಿಶ್ವಕಪ್‌ಗೂ ಮೊದಲು ನಡೆದ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಟೀಂ ಇಂಡಿಯಾವನ್ನು ರಾಹುಲ್‌ ಮುನ್ನೆಡೆಸಿದ್ದು ಮೂರು ಪಂದ್ಯ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆಲ್ಲಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದ್ದರು.

World Cup 2023 Who Will Lead indian cricket team In Absence Of Rohit Sharma
Image Credit to Original Source

ಇದನ್ನೂ ಓದಿ : IPL 2024 : ನಿವೃತ್ತಿ ಘೋಷಿಸಿದ RCB ಸ್ಟಾರ್ ಆಟಗಾರ

ಇನ್ನೊಂದೆಡೆಯಲ್ಲಿ ಶ್ರೇಯಸ್‌ ಅಯ್ಯರ್‌, ಜಸ್ಪ್ರಿತ್‌ ಬೂಮ್ರಾ ಅವರ ಹೆಸರು ಕೂಡ ಟೀಂ ಇಂಡಿಯಾದ ಉಪನಾಯಕ ಸ್ಥಾನಕ್ಕೆ ಕೇಳಿ ಬರುತ್ತಿದೆ. ಆದರೆ ಅನುಭವದ ಆಧಾರದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಅವರಿಗೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ ಮಣೆ ಹಾಕುವ ಸಾಧ್ಯತೆಯಿದೆ.

World Cup 2023 Who Will Lead indian cricket team In Absence Of Rohit Sharma

Comments are closed.