ಸೋಮವಾರ, ಏಪ್ರಿಲ್ 28, 2025
HomeCinemaMeghana Sarja Shabda movie : ಶಬ್ದ ಸಿನಿಮಾದಲ್ಲಿ ನಟಿಸಲಿದ್ದಾರೆ ಮೇಘನಾ ಸರ್ಜಾ: ಇನ್ ಸ್ಟಾಗ್ರಾಂ...

Meghana Sarja Shabda movie : ಶಬ್ದ ಸಿನಿಮಾದಲ್ಲಿ ನಟಿಸಲಿದ್ದಾರೆ ಮೇಘನಾ ಸರ್ಜಾ: ಇನ್ ಸ್ಟಾಗ್ರಾಂ ನಲ್ಲಿ ಕೊಟ್ರು ಸಿಹಿಸುದ್ದಿ

- Advertisement -

ಸುಂದರವಾದ ಬದುಕಿನಲ್ಲಿ ಅಪ್ಪಳಿಸಿದ ನೋವಿನಿಂದ ಕಂಗಾಲಾದ ನಟಿ ಮೇಘನಾ ರಾಜ್ ಬಹುತೇಕ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಬರೋಬ್ಬರಿ ಎರಡು ವರ್ಷಗಳ ಬಳಿಕ ಮೇಘನಾ ನಿಧಾನಕ್ಕೆ ಮನೆಯಿಂದ ಹೊರಬಂದು ಮತ್ತೆ ನಟನೆ ಆರಂಭಿಸಿದ್ದರು. ಮೊದಲು ಜಾಹೀರಾತು ಬಳಿಕ ರಿಯಾಲಿಟಿ ಶೋಗೆ ಬಂದ ಮೇಘನಾ ರಾಜ್ ಸರ್ಜಾ ಈಗ ಮತ್ತೊಂದು ಸಿಹಿಸುದ್ದಿ‌ (Meghana Sarja Shabda movie) ನೀಡಿದ್ದಾರೆ.

ಕನ್ನಡ, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡ ಮೇಘನಾ ರಾಜ್ ಸರ್ಜಾ ಪ್ರೀತಿಸಿ ಮದುವೆಯಾಗಿದ್ದು ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ಚಿರಂಜೀವಿ ಸರ್ಜಾರನ್ನು. ಇನ್ನೇನೂ ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಷ್ಟರಲ್ಲಿ ನಾಲ್ಕು ತಿಂಗಳ ಗರ್ಭಿಣಿ ಮೇಘಾನರನ್ನು ಚಿರು ಅಗಲಿ ಇನ್ನೆಂದು ಬಾರದ ಲೋಕಕ್ಕೆ ಹೋದರು. ಚಿರು ಅಗಲಿ ಕೆ ಬಳಿಕ‌‌ ಜನಿಸಿದ ಮಗನ ಆರೈಕೆಯಲ್ಲೇ ಇದ್ದ ಮೇಘನಾ ಕಳೆದ ಆರು ತಿಂಗಳ ಹಿಂದೆ ಮತ್ತೆ ನಟನೆಗೆ ಮರಳಿದರು. ಹಲವು ಜಾಹೀರಾತಿನಲ್ಲಿ ನಟಿಸಿದ ಮೇಘನಾ ಬಳಿಕ ಡ್ಯಾನ್ಸ್ ರಿಲಾಯಿಟಿ ಶೋಗೆ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮೇಘನಾ ಫ್ಯಾಮಿಲಿ ಪ್ರೆಂಡ್ ಹಾಗೂ ಸ್ನೇಹಿತ ಪನ್ನಗಾಭರಣ ನಿರ್ದೇಶನದ ಸಿನಿಮಾಕ್ಕೆ ಸಹಿಹಾಕಿದ್ದಾರೆ.

ಇದರ ಜೊತೆಗೆ ಈಗ ಮತ್ತೊಂದು ಸಿನಿಮಾಕ್ಕೆ ಮೇಘನಾ ಸಹಿ ಹಾಕಿದ್ದಾರಂತೆ. ಈ ಹಿಂದೆ ಮೇಘನಾ ನಟಿಸಿದ್ದ ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದ ಜೊತೆಗೆ ಹೊಸ ಸಿನಿಮಾಕ್ಕೆ ಮೇಘನಾ ಒಪ್ಪಿಕೊಂಡಿದ್ದಾರೆ. ಮೇಘನಾ ರಾಜ್ ಸರ್ಜಾ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ಶಬ್ದ. ಸ್ವತಃ ಸೋಷಿಯಲ್ ಮೀಡಿಯಾ ದಲ್ಲಿ ಮೇಘನಾ ರಾಜ್ ಈ ವಿಚಾರವನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ತಾಯ್ತನದ ಸಂಭ್ರಮದಲ್ಲಿದ್ದ ಮೇಘನಾ ನಟನೆಯಿಂದ ದೂರ ಉಳಿದಿದ್ದರು. ಅದೇ ಹೊತ್ತಿನಲ್ಲಿ ಚಿರು ನಿಧನ ರಾಗಿದ್ದರಿಂದ ಮೇಘನಾ ಇನ್ನು ನಟನೆಗೆ ಮರಳೋದೇ ಎಲ್ಲ ಎಂಬಂತಾಗಿತ್ತು. ಆದರೆ ಈಗ ಮತ್ತೆ ಮಗನ ಪಾಲನೆಯ ಜೊತೆಗೆ ನಟನೆಗೂ ಮೇಘನಾ ಸೈ ಎಂದಿದ್ದಾರೆ.

ನಟನೆ ನನ್ನ ರಕ್ತದಲ್ಲಿ ಬಂದಿದೆ. ನನಗೆ ಅದನ್ನು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ನಾನು ನಟನೆಯಲ್ಲಿ ಮುಂದುವರೆಯಬೇಕೆಂಬುದು ಚಿರು ಕನಸು ಕೂಡ. ಹೀಗಾಗಿ ನಟನೆಗೆ ಮರಳುತ್ತೇನೆ ಎಂದು ಮೇಘನಾ ಹೇಳಿಕೊಂಡಿದ್ದರು. ಆಡಿದ ಮಾತಿನಂತೆ ಮೇಘನಾ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದು ಚಿರು ಹಾಗೂ ಮೇಘನಾ ಅಭಿಮಾನಿಗಳಿಗೆ ಈ ವಿಚಾರ ಖುಷಿಕೊಟ್ಟಿದೆ.

ಇದನ್ನೂ ಓದಿ : Prakash Padukone Biopic : ದೀಪಿಕಾ ಪಡುಕೋಣೆಗೆ ತಮ್ಮ ತಂದೆಯ ಬಯೋಪಿಕ್ ನಿರ್ಮಾಣದ ಕನಸು !

ಇದನ್ನೂ ಓದಿ : ಮತ್ತೆ ಮುಖ್ಯಮಂತ್ರಿಯಾಗ್ತಿದ್ದಾರೆ ಬಿ.ಎಸ್.ಯಡಿಯೂರಪ್ಪ : ಸ್ಯಾಂಡಲ್ ವುಡ್ ಗೆ ರಾಜಾಹುಲಿ ಎಂಟ್ರಿ

Meghana Sarja acting in Shabda movie

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular