ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ, ಮಲಯಾಲಂ, ತಮಿಳು ಹಾಗೂ ತೆಲುಗು ಸಿನಿ ರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರೋ ಮೇಘನಾ ರಾಜ್ 30ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಪುಂಡ, ಲಕ್ಕಿ, ಕುರುಕ್ಷೇತ್ರ, ಇರುವುದೆಲ್ಲವ ಬಿಟ್ಟು, ಆಟಗಾರ, ಬಹುಪರಾಕ್, ರಾಜಾಹುಲಿ ಸೇರಿದಂತೆ ಒಟ್ಟು 17 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಪೈಕಿ ಬುದ್ದಿವಂತ 2 ಹಾಗೂ ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ತೆರೆ ಕಾಣೋದಕ್ಕೆ ಸಿದ್ದವಾಗಿದೆ.

ಮಲಯಾಲಂನ ಬಹುಬೇಡಿಕೆಯ ನಟಿಯಾಗಿರೋ ಮೇಘನಾ ರಾಜ್ 20ಕ್ಕೂ ಅಧಿಕ ಮಲಯಾಲಂ ಸಿನಿಮಾಗಳಲ್ಲಿ ನಟಿಸಿ ಮೇಘನಾ ರಾಜ್ ಸೈ ಎನಿಸಿಕೊಂಡಿದ್ದಾರೆ.

ಕೇವಲ ಕನ್ನಡ, ಮಲಯಾಲಂ ಮಾತ್ರವಲ್ಲದೇ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಮೇಘನಾ ಮಿಂಚು ಹರಿಸಿದ್ದಾರೆ.

ಖ್ಯಾತ ಕಲಾವಿದರಾಗಿರೋ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯ್ ಪುತ್ರಿ.

ಮೇಘನಾರಾಜ್ ಅವರು ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದಾರೆ.

ಹುಟ್ಟುಹಬ್ಬು ಆಚರಿಸಿಕೊಳ್ಳುತ್ತಿರೊ ನಿಮಗೂ ನಮ್ಮ ಕಡೆಯಿಂದಲೂ ಹ್ಯಾಪಿ ಬರ್ತಡೇ



