ಸರಕಾರದ ನಿರ್ಲಕ್ಷ್ಯಕ್ಕೆ ಉಡುಪಿ ಗಡಿಯಲ್ಲಿ ಬಂದಿಯಾದ್ರು 66 ಮಂದಿ ಪ್ರಯಾಣಿಕರು

0

ಹೊಸಂಗಡಿ : ಲಾಕ್ ಡೌನ್ ನಿಂದಾಗಿ ಹೊರ ಜಿಲ್ಲೆಗಳಲ್ಲಿ ಬಂಧಿಯಾಗಿರುವ ಕಾರ್ಮಿಕನ್ನು ತಮ್ಮೂರಿಗೆ ತೆರಳಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ. ಅಂತೆಯೇ ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದ ಉಡುಪಿಯ ನಿವಾಸಿಗಳಿಗೆ ಉಡುಪಿ ಜಿಲ್ಲಾಡಳಿತ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನಿರಾಕರಿಸಿದೆ. ಹೀಗಾಗಿ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಬೆಂಗಳೂರಿನಿಂದ ಬಂದಿದ್ದ 66 ಮಂದಿ ಪ್ರಯಾಣಿಕರು ರಾತ್ರಿ 3 ಗಂಟೆಯಿಂಲೇ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಸಿಲುಕಿದ್ದಾರೆ. ಆದ್ರೆ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಿ ಸಹಕರಿಸುತ್ತಿಲ್ಲ ಅಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಸರಕಾರದ ಸೂಚನೆಯ ಮೇರೆಗೆ ರಾಜ್ಯ ಸರಕಾರ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿದೆ. ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಜನರ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

ಅಂತೆಯೇ ನಿನ್ನೆ ರಾತ್ರಿ ಬೆಂಗಳೂರಲ್ಲಿ ಬಂಧಿಯಾಗಿದ್ದ ಉಡುಪಿ ಜಿಲ್ಲೆಯ ಜನರು ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ತಮ್ಮ ಊರಿಗೆ ಹೊರಟಿದ್ದಾರೆ. ಆದರೆ ರಾತ್ರಿ ಮೂರು ಗಂಟೆಗೆ ಹೊಸಂಗಡಿ ಚೆಕ್ ಪೋಸ್ಟ್ ಬಳಿಗೆ ಬಸ್ಸು ಬರುತ್ತಿದ್ದಂತೆಯೇ ಸಿಬ್ಬಂಧಿಗಳು ಎರಡು ಬಸ್ಸುಗಳನ್ನು ತಡೆದು ನಿಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶವನ್ನೇ ನೀಡೋದಿಲ್ಲಾ ಅಂತಾ ಪಟ್ಟು ಹಿಡಿದಿದ್ದಾರೆ. ಬಸ್ಸಿನಲ್ಲಿ ಮಕ್ಕಳು, ವೃದ್ದರು ಇದ್ದು ಅವರೆಲ್ಲಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕುರಿತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲಾ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಉಡುಪಿ ಜಿಲ್ಲೆಗೆ ಬರಲು ಅವಕಾಶವೇ ಇಲ್ಲಾ ಅಂತಾ ಹೇಳಿದ್ರೆ ನಾವ್ಯಾರೂ ಕೂಡ ಬರುತ್ತಲೇ ಇರಲಿಲ್ಲ. ಬೆಂಗಳೂರಿನಿಂದ ಜಿಲ್ಲೆಯ ವರೆಗೂ ಸರಕಾರಿ ಬಸ್ಸಿನಲ್ಲಿ ಕರೆತಂದು ಜಿಲ್ಲೆಯೊಳಗೆ ಬಿಡುವುದಿಲ್ಲಾ ಅನ್ನುವುದು ಎಷ್ಟು ಸರಿ ಅಂತಾ ಬಸ್ಸಿನಲ್ಲಿರುವ ಜನರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರಿನಿಂದ ಹೊರಡುವಾಗಲೇ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಬೇಕಾದ್ರೆ ಗಡಿ ಭಾಗದಲ್ಲಿಯೇ ಇನ್ನೊಮ್ಮೆ ತಪಾಸಣೆಗೆ ಒಳಗಾಗೋದಕ್ಕೂ ಸಿದ್ದರಿದ್ದೇವೆ. ಜಿಲ್ಲೆಯೊಳಗೆ ಪ್ರವೇಶ ನೀಡದಿದ್ರೆ ನಾವೆಲ್ಲಾ ಎಲ್ಲಿಗೆ ಹೋಗಬೇಕು ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ತಮ್ಮೂರಿಗೆ ತೆರಳು ಅವಕಾಶ ಕಲ್ಪಿಸಿ ಅಂತಾ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಈ ಕುರಿತು ಕ್ರಮಕೈಗೊಳ್ಳಬೇಕಿದೆ. ಸರಕಾರ ಜಿಲ್ಲಾಡಳಿತದ ಅನುಮತಿ ಪಡೆಯದೇ ಓಡಿಸಿರುವುದು ಎಷ್ಟು ಸರಿ ಅಂತಾ ಜನ ಪ್ರಶ್ನಿಸುತ್ತಿದ್ದಾರೆ.

Leave A Reply

Your email address will not be published.