“ಕೊರೊನಾ ಎಂದು ಮತ್ ರೋನ” ಅಂತಿದೆ ಚೌಕಾಬಾರ ತಂಡ

0

ಕೊರೊನಾ ವೈರಸ್ ಸೋಂಕು ಜನರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಜನರ ಕೊರೊನಾ ಭಯದಲ್ಲಿಯೇ ಬದುಕುತ್ತಿದ್ದಾರೆ. ಇಂತಹ ಜನರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಒಂದಿಷ್ಟು ಮನರಂಜನೆಯನ್ನು ನೀಡೋದಕ್ಕೆ ಚೌಕಾಬಾರ ತಂಡ ಮುಂದಾಗಿದೆ.

ಕೋವಿಡ್ -19 ನಿಂದಾಗಿ ಜನಸಾಮಾನ್ಯರು ಖಿನ್ನತೆಗೆ ಒಳಗಾಗಿದ್ದಾರೆ. ಅವರಿಗೆ ಉಪಯುಕ್ತ ಮಾಹಿತಿಯ ಜೊತೆಗೆ ಒಂದಿಷ್ಟು ಮನರಂಜನೆ ನೀಡುವುದು ಈ ಸಾಂಗ್ ನ ಉದ್ದೇಶ.

ಅದ್ರಲ್ಲೂ ಜನರ ರಕ್ಷಣೆಗೆ ನಿಂತಿರುವ ವೈದ್ಯರು, ಅರಕ್ಷಕರು, ಪೌರ ಕಾರ್ಮಿಕರು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ವಂದನೆ ಸಲ್ಲಿಸೋ ಸಲುವಾಗಿಯೇ ಖ್ಯಾತ ಕಲಾವಿದರಾದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಅವರ ನವಿ ನಿರ್ಮಿತಿ ಸಂಸ್ಥೆಯ ವತಿಯಿಂದ ಚೌಕಾಬಾರ ತಂಡ ಕಲಾವಿದರಿಂದ ಕೊರೊನಾ ಮತ್ ರೋನ ಅನ್ನೋ ವಿಡಿಯೋ ಸಾಂಗ್ ರಚಿಸಲಾಗಿದ್ದು, ಹಲೋ ಆಪ್ ನವಿ ನಿರ್ಮಿತಿ ತಂಡಕ್ಕೆ ಸಾಥ್ ಕೊಟ್ಟಿದೆ.


ಕಲಾವಿದರಾದ ನವಿತಾ ರಾವ್, ವಿಕ್ರಮ್ ಸೂರಿ, ಸಂಜಯ್ ಸೂರಿ, ಶಶಿಧರ್ ಕೋಟೆ, ಮಧು ಹೆಗಡೆ, ದಮಯಂತಿ ನಾಗರಾಜ್, ಕೀರ್ತಿ ಭಾನು, ಪ್ರದೀಪ್, ರಘು ಭಟ್, ಕಾವ್ಯ ರಮೇಶ್, ಆಡಮ್ ಪಾಷಾ, ಪ್ರಭಂಜನ್, ಹರೀಶ್ ಭಟ್ ನಟಿಸಿದ್ದಾರೆ.

ವಿಕ್ರಮ್ ಸೂರಿ ಅವರೇ ಗೀತ ಸಾಹಿತ್ಯ ಬರೆದಿದ್ದು, ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಸಾಂಗ್ ಮೂಡಿಬಂದಿದೆ. ಇನ್ನು ಅಶ್ವಿನ್ ಪಿ. ಕುಮಾರ್ ಸಂಗೀತ ನಿರ್ದೇಶನ ಹಾಗೂ ರವಿರಾಜ್ ಹೊಂಬಾಳ ಅವರ ಸಂಕಲನದಲ್ಲಿ ಸಾಂಗ್ ವಿಶಿಷ್ಟವಾಗಿ ಮೂಡಿಬಂದಿದೆ.

Leave A Reply

Your email address will not be published.