ಮಂಗಳವಾರ, ಜೂನ್ 17, 2025
HomeBreakingಪತಿ ಅಗಲಿಕೆ‌ ಬಳಿಕ‌ ಮೊದಲ ಹುಟ್ಟುಹಬ್ಬ...! ಚಿರು ಕಮ್ ಬ್ಯಾಕ್ ಎಂದ ಕುಟ್ಟಿಮಾ...!!

ಪತಿ ಅಗಲಿಕೆ‌ ಬಳಿಕ‌ ಮೊದಲ ಹುಟ್ಟುಹಬ್ಬ…! ಚಿರು ಕಮ್ ಬ್ಯಾಕ್ ಎಂದ ಕುಟ್ಟಿಮಾ…!!

- Advertisement -

ಮೇ‌ ತಿಂಗಳು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಪಾಲಿಗೆ ಅತ್ಯಂತ ಸ್ಪೆಶಲ್. ವೆಡ್ಡಿಂಗ್ ಆನ್ಯಿವರ್ಸರಿ, ಬರ್ತಡೇ ಹೀಗೆ ಖುಷಿಯೇ ತುಂಬಿದ್ದ ಮೇ ತಿಂಗಳು ಈ ಭಾರಿ ಮಾತ್ರ ನೋವಿನ ನೆನಪನ್ನೇ ಹೊತ್ತು ತಂದಿದ್ದು ಪತಿ ಇಲ್ಲದ ಮೊದಲ ಬರ್ತಡೇ ಮೇಘನಾಗೆ ಎದುರಾಗಿದೆ.

Meghana Sarja 3

ಬರೋಬ್ಬರಿ 10 ವರ್ಷಗಳ ಕಾಲ ಪ್ರೇಮಪಕ್ಷಿಗಳಾಗಿ ವಿಹರಿಸಿದ್ದ ಮೇಘನಾ ಹಾಗೂ ಚಿರು ಮೇ 2 , 2018ರಲ್ಲಿ ಸಪ್ತಪದಿ ತುಳಿದಿದ್ದರು.‌ ಹೊಸ ಬದುಕಿಗೆ ಕಾಲಿಟ್ಟ ಮರುದಿನವೇ ಮೇಘನಾ ಹುಟ್ಟುಹಬ್ಬ ವಾಗಿತ್ತು. ಹೀಗಾಗಿ ಮದುವೆಯ ಖುಷಿ ದ್ವಿಗುಣಗೊಂಡಿತ್ತು.

Meghana Raj Family

ಪ್ರತಿವರ್ಷವೂ ಆನ್ಯಿವರ್ಸರಿ ಹಾಗೂ ಮೇಘನಾ ಬರ್ತಡೇ ಸ್ಪೆಶಲ್ ಆಗಿ ಆಚರಿಸುತ್ತಿದ್ದ ಈ ಜೋಡಿಗೆ ಅದ್ಯಾರ ದೃಷ್ಟಿ ತಾಗಿತೋ ಚಿರು ಅಕಾಲಿಕವಾಗಿ ನಿಧನರಾದರು.

ಪತಿ ಇಲ್ಲದ ಮೊದಲ ಬರ್ತಡೇ ಇದಾಗಿದ್ದು, ಮೇಘನಾ ಚಿರುವನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಒಂದು ವಾರದಿಂದ ಚಿರು ಜೊತೆಗಿನ‌ ಸ್ಪೆಶಲ್ ಕ್ಷಣಗಳ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತ ಬಂದಿದ್ದಾರೆ.

Meghana Chiru 2 E1602876872546

ಮೊನ್ನೆಯಷ್ಟೇ ಪ್ಯಾರಿಸ್‌ನ‌ ಐಫೆಲ್ ಟವರ್ ಎದುರು ಚಿರು ಜೊತೆ ತೆಗೆಸಿಕೊಂಡ ಪೋಟೋವನ್ನು ಖುಷಿಯಿಂದ ಹಂಚಿಕೊಂಡಿದ್ದ‌ ಮೇಘನಾ ಪ್ಲೀಸ್ ಚಿರು ಕಮ್ ಬ್ಯಾಕ್ ಎಂದು ಭಾವುಕರಾಗಿ‌ಕಮೆಂಟ್ ಮಾಡಿದ್ದರು.

Meghan

ಅಷ್ಟೇ ಅಲ್ಲ ಆನ್ಯಿವರ್ಸರಿಯಂದು ಮಗು ಜೊತೆ ಚಿರು ಪೋಟೋ ಎದುರು ನಿಂತು ಮಗುವನ್ನು ಅಪ್ಪನೊಂದಿಗೆ ಮಾತನಾಡಿಸುವ ವಿಡಿಯೋವನ್ನು ಮೇಘನಾ ಹಂಚಿಕೊಂಡಿದ್ದು ನೋಡುಗರ ಹೃದಯ ಮುಟ್ಟುವಂತಿದೆ.

Meghana Raj 1

ಮಲೆಯಾಳಂ‌ ಹಾಗೂ ಕನ್ನಡದಲ್ಲಿ ನಟಿಸಿದ್ದ ಮೇಘನಾ ಹಾಗೂ ಚಿರು ಪ್ರೀತಿಸಿ ಮದುವೆಯಾದ ಬಳಿಕ ಅನೋನ್ಯವಾಗಿದ್ದರು. ಮೇಘನಾ ತಾಯ್ತನದ ಸಂಭ್ರಮದಲ್ಲಿದ್ದಾಗ ಅಂದ್ರೇ 2020 ರ ಜೂನ್ 7 ರಂದು ಚಿರು ತೀವ್ರ ಹೃದಯಾಘಾತದಿಂದ ಮನೆಯಲ್ಲೇ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದರು.

Chiru Meghana

ಚಿರು ನಿಧನದ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದ ನಟಿ ಮೇಘನಾ ರಾಜ್ ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ‌ ನೀಡಿದ್ದರು.

Meghana Chiru

ಪ್ರಸ್ತುತ ಮಗುವಿನ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿ ರುವ ನಟಿ ಮೇಘನಾ ರಾಜ್ ಮೇ‌ 3 ರಂದು 30 ನೇ ವಸಂತಕ್ಕೆ ‌‌ಕಾಲಿಟ್ಟಿದ್ದಾರೆ.

9000 4
RELATED ARTICLES

Most Popular