ಮಂಗಳವಾರ, ಏಪ್ರಿಲ್ 29, 2025
HomeCinemaMeghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌...

Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್

- Advertisement -

Meghanaraj Sarja foreign trip : ನಟಿ ಮೇಘನಾ ಸರ್ಜಾ ಬದುಕಿನಲ್ಲಿ ಸಣ್ಣ ಪುಟ್ಟ ನೋವುಗಳಿಗೆ ದೇಹತ್ಯಾಗ‌ ಮಾಡೋ ಹಾಗೂ ಡಿಪ್ರೆಶನ್ ಗೆ ಜಾರೋ ಯುವ ಮನಸ್ಸುಗಳಿಗೆ ಜೀವಂತ ಪಾಠ. ಹೌದು ಆಕೆಯೂ ಕೊರಗಿ ಮೂಲೆ ಸೇರೋದಾದರೇ ಆಕೆಯ ಬಳಿಗೆ ನೂರು ಕಾರಣವಿತ್ತು. ಆದರೆ ಆಕೆ ಬಂದಿದ್ದೆಲ್ಲವನ್ನೂ ಧೈರ್ಯದಿಂದ ಎದುರಿಸಿ ಮತ್ತೆ ಬಣ್ಣ ಹಚ್ಚುವಷ್ಟು ಸ್ಟ್ರಾಂಗ್ ಲೇಡಿಯಾಗಿ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಸದ್ಯ ವಿದೇಶ ಪ್ರವಾಸದಲ್ಲಿರೋ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಕ್ಷಣಗಳನ್ನು ಶೇರ್ ಮಾಡಿದ್ದಾರೆ.

ಮೇಘನಾ ಸರ್ಜಾ ಕನ್ನಡ ಸ್ಯಾಂಡಲ್ ವುಡ್ ನ ಮನೆ ಮಗಳು. ಸ್ಯಾಂಡಲ್ ವುಡ್ ನಲ್ಲೇ ಬಾಲ್ಯ ಕಳೆದ ಮೇಘನಾ ಬದುಕು ಸುಂದರವಾಗಿತ್ತು. ಕಲಾವಿದ ತಂದೆ-ತಾಯಿಯ ನಡುವೆ ಕಲೆಯನ್ನು ರಕ್ತದಲ್ಲೇ ಹೊತ್ತುಬಂದಿದ್ದ ಮೇಘನಾ ನಟನೆಯಲ್ಲಿ ತೊಡಗಿದರು. ನಟಿಸಿದ್ರು, ಮಲೆಯಾಳಂ ಸಿನಿಮಾಗಳಲ್ಲೂ ಮಿಂಚಿದ್ರು. ಮಾತ್ರವಲ್ಲ ಸರ್ಜಾ ಕುಟುಂಬದ ಕುಡಿ ಚಿರು ಸರ್ಜಾರನ್ನು ಪ್ರೀತಿಸಿ ಮದುವೆಯಾದರು. ಎಲ್ಲವೂ ಸುಂದರವಾಗಿಯೇ ಇತ್ತು.‌ಮದುವೆಯಾದ ಹೊಸತರಲ್ಲಿ ಯುರೋಪ್ ಟ್ರಿಪ್ ಹೋಗಿದ್ದ ಜೋಡಿ ಐಪೆಲ್ ಟವರ್ ಎದುರು ಪ್ರಣಯ ಹಕ್ಕಿಗಳಂತೆ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು.

ಇನ್ನೇನು ಹೊಸ ಅತಿಥಿಯನ್ನು ಬದುಕಿಗೆ ಸ್ವಾಗತಿಸಿ ಖುಷಿಯಾಗಿರೋಣ ಎನ್ನುವ ಹೊತ್ತಿನಲ್ಲೇ ಚಿರು ಅಕಾಲಿಕವಾಗಿ ಹೃದಯಾಘಾತದಿಂದ ನಿಧನರಾದರು. ಆಗಲೇ ಮೇಘನಾ ಕನಸಿನ ಗೋಪುರ ಕುಸಿದು ಬಿದ್ದಿತ್ತು. ಆಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ಈ ನೋವಿನ ನಡುವೆಯೂ ಮಗುವಿಗಾಗಿ ಖುಷಿಯಾಗಿರಲೇ ಬೇಕಿತ್ತು. ಇಂಥ ದುಃಖಕರ ಸಂದರ್ಭವನ್ನು ಧೈರ್ಯದಿಂದ ಗೆದ್ದುಬದ್ದ ಮೇಘನಾ ಅಕ್ಟೋಬರ್ ೨೨ ರಂದು ಗಂಡು ಮಗುವಿಗೆ ಜನ್ಮ ನೀಡಿದರು.

ನೊರೆಂಟು ಪ್ರಶ್ನೆ,ಕಾಡುವ ನೋವಿನ ನಡುವೆಯೂ ಮಗನಲ್ಲೇ ಭವಿಷ್ಯ ಕಾಣುತ್ತಿರುವ ಮೇಘನಾ ಸಣ್ಣ ಪುಟ್ಟ, ನೋವು ,ಅನಾರೋಗ್ಯ, ಆರ್ಥಿಕ ಸಮಸ್ಯೆಗೆ ಹೆದರಿ ಜೀವ ಚೆಲ್ಲುವವರಿಗೆ ಒಂದು ಮಾದರಿ ಸಾಧಕಿ. ಆರ್ಥಿಕ ಸಮಸ್ಯೆ ಇಲ್ಲದೇ ಇದ್ದರೂ ಮೇಘನಾ ಸಾಮಾಜಿಕವಾಗಿ ನೂರಾರು ಗಾಸಿಪ್, ಸವಾಲುಗಳು ಹಾಗೂ ನೋವುಗಳನ್ನು ಎದುರಿಸಿದರು. ಆದರೆ ಎಲ್ಲದಕ್ಕೂ ಚಿರು ನೆನಪು ಹಾಗೂ ಕುಟುಂಬದ ಸಪೋರ್ಟ್ ಮೇಘನಾಗೆ ಶಕ್ತಿಯಾಗಿತ್ತು. ಈಗ ಮಗುವಿನ ಪಾಲನೆ ಹಾಗೂ ವೃತ್ತಿಬದುಕು ಎರಡನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಬರ್ತಿರೋ ಮೇಘನಾ ಸದ್ಯ ಅಮೇರಿಯಾದ ಕ್ಯಾಲಿಪೋರ್ನಿಯಾದಲ್ಲಿ ನೀಡುವ ಫಾಗ್ ಹೀರೋ ಗೌರವ ಸ್ವೀಕರಿಸಿದ್ದಾರೆ.

ಈ ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಕ್ಯಾಲಿಪೋರ್ನಿಯಾಗೆ ಹೋಗಿರೋ ಮೇಘನಾ ಅಲ್ಲಿಂದ ರೋಡ್ ಟ್ರಿಪ್ ಮೂಲಕ ಅಮೇರಿಕಾ ಪರ್ಯಟನೆ ಆರಂಭಿಸಿದ್ದಾರೆ. ವೇಗಾಸ್ ಸೇರಿದಂತೆ ಹಲವೆಡೆ ಪೋಟೋಗೆ ಪೋಸ್ ನೀಡಿದ್ದ ಮೇಘನಾ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಟ್ರಿಪ್ ಅಪ್ಡೇಟ್ ಕೊಡ್ತಿದ್ದಾರೆ. ಮೇಘನಾ ಬದುಕಿನ ನೋವುಗಳನ್ನು ಮೆಟ್ಟಿ ನಿಂತ ಪರಿಗೆ ಈಗ ಸೋಷಿಯಲ್ ಮೀಡಿಯಾದ ಮಂದಿ ಹ್ಯಾಟ್ಸಪ್ ಎಂದಿದ್ದಾರೆ.

ಇದನ್ನೂ ಓದಿ : role of Aryavardhan : ಜೊತೆ ಜೊತೆಯಲಿ ಆರ್ಯವರ್ಧನ್​ ಪಾತ್ರಕ್ಕೆ ಕೇಳಿ ಬರ್ತಿದೆ ಸಿ.ಟಿ ರವಿ ಹೆಸರು

ಇದನ್ನೂ ಓದಿ : Twist in Ramachari serial:ರಾಮಾಚಾರಿ ಮನೆಯಲ್ಲಿ ಪತ್ತೆಯಾಯ್ತು ಡ್ರಗ್ಸ್​ : ವರ್ಕೌಟ್​ ಆಗುತ್ತಾ ಚಾರು-ಮಾನ್ಯತಾ ಪ್ಲಾನ್​

Meghanaraj Sarja Give answer to pains: Meghana’s foreign trip photo went viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular